ಬೆಂಗಳೂರು –
ಅಕ್ಟೋಬರ್ 31 ರವರೆಗೆ ಶಾಲಾ ಮಕ್ಕಳಿಗೆ ದಸರಾ ರಜೆಯನ್ನು ವಿಸ್ತರಣೆ ಮಾಡಬೇಕು ಎಂಬ ಕುರಿತಂತೆ ರಾಜ್ಯಾಧ್ಯಂತ ಶಾಲಾ ಶಿಕ್ಷಕರು ಮಕ್ಕಳು ಪೋಷಕರು ಸೇರಿದಂತೆ ಹಲವರಿಂದ ದಿನದಿಂದ ದಿನಕ್ಕೆ ಒತ್ತಡ ಹೆಚ್ಚುತ್ತಿದೆ ಹೀಗಾಗಿ ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆಯೊಂದನ್ನು ಕರೆದಿದ್ದಾರೆ.ಹೌದು ರಾಜ್ಯದ ಮೂಲೆ ಮೂಲೆಗಳಿಂದ ಎಲ್ಲಾ ಶಿಕ್ಷಕರ ಸಂಘಟನೆಗಳು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಹಲವರು ಶಿಕ್ಷಣ ಸಚಿವರಿಗೆ ಮುಖ್ಯ ಮಂತ್ರಿಗೆ ಒತ್ತಾಯದೊಂದಿಗೆ ಒತ್ತಡವನ್ನು ಹಾಕುತ್ತಿದ್ದಾರೆ.
ಹೀಗಾಗಿ ಒತ್ತಡ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇಂದು ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತವಾದ ನಿರ್ಧಾರವನ್ನು ಕೈಗೊಳ್ಳಲು ಸಭೆಯನ್ನು ಕರೆದಿದ್ದಾರೆ.ಈಗಾಗಲೇ ಈ ಕುರಿತಂತೆ ಕೆಲವೊಂದಿಷ್ಟು ಹಿರಿಯ ಅಧಿಕಾರಿ ಗಳು ಮತ್ತು ಸಚಿವರೊಂದಿಗೆ ಚರ್ಚೆಯನ್ನು ಮಾಡಿದ್ದು ಇಂದು ಮತ್ತೊಂದು ಹಂತದಲ್ಲಿ ಸಭೆ ಕರೆದಿದ್ದು ಶಾಲಾ ಮಕ್ಕಳಿಗೆ ಮಧ್ಯಂತರ ದಸರಾ ರಜೆಯನ್ನು ಅಕ್ಟೋಬರ್ 31ರವರೆಗೆ ವಿಸ್ತರಿಸ ಬೇಕು ಈ ಬಾರಿ ಮಧ್ಯಂತರ ರಜೆಯನ್ನು ಅ.3 ರಿಂದ ಅ.17ರ ವರೆಗೆ ನಿಗದಿಪಡಿಸಿದ್ದು ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ರಜೆ ಗಳನ್ನು ನೀಡಲಾಗಿದೆ.
ಪ್ರತಿವರ್ಷ ಈ ಮಧ್ಯಂತರ ರಜೆಯನ್ನು ಅ.3 ರಿಂದ ಅ.31ರ ವರೆಗೆ ನೀಡಲಾಗುತ್ತಿತ್ತು ಆದರೆ ಈ ರಜೆಯನ್ನು ಕಡಿತಗೊಳಿಸಿದ್ದು ಮಕ್ಕಳಲ್ಲಿ ತೀವ್ರ ನಿರಾಸೆಯನ್ನು ಉಂಟು ಮಾಡಿದ್ದು ಹೀಗಾಗಿ ಶಾಲೆಗಳಿಗೆ ಮಧ್ಯಂತರ ದಸರಾ ರಜೆಯನ್ನು ಹಾಗೂ ಬೇಸಿಗೆ ರಜೆಯನ್ನು ನೀಡಲು ಅದರದೇ ಅದಂತಹ ವೈಜ್ಞಾನಿಕ ಕಾರಣಗಳಿದ್ದು ಮಕ್ಕಳ ಶಿಕ್ಷಣ ಮತ್ತು ಭೌತಿಕ ಬೆಳವಣಿಗೆ ಹಿತದೃಷ್ಟಿ ಯಿಂದ ರಜೆ ದಿನಗಳನ್ನು ಹಾಗೂ ಒಟ್ಟು ಕಾರ್ಯನಿರ್ವಹಿಸಬೇಕಾದ ಶಾಲಾ ದಿನಗಳನ್ನು ವೈಜ್ಞಾನಿಕವಾಗಿ ನಿರ್ಧರಿಸಲಾಗುತ್ತದೆ.
ಹೀಗಾಗಿ ಈ ಕುರಿತಂತೆ ಸಭೆಯನ್ನು ಕರೆದಿದ್ದು ಸಭೆಯನ್ನು ಯಾವ ತೀರ್ಮಾನವನ್ನು ಕೈಗೊಳ್ಳ ಲಿದ್ದಾರೆ ಯಾವ ನಿರ್ಧಾರ ಹೊರಬೀಳಲಿದೆ ಎಂಬೊದನ್ನು ಕಾದು ನೋಡಬೇಕಾಗಿದ್ದು ಎಲ್ಲ ಲಕ್ಷ್ಯ ಸಭೆಯ ಮೇಲೆ ಇದೆ.