ಬೆಂಗಳೂರು –
ನಾಳೆ ಅಂದರೆ ಸೋಮವಾರ ಶಾಲೆ ಆರಂಭ ಗೊಂಡರು ಕೂಡಾ ದೀಪಾವಳಿ ಹಬ್ಬದ ಹಿನ್ನಲೆ ಯಲ್ಲಿ ಸಾಲು ಸಾಲು ರಜೆಗಳ ಹಿನ್ನಲೆಯಲ್ಲಿ ನಾಲ್ಕೇ ನಾಲ್ಕು ದಿನ ಮಾತ್ರ ಶಾಲೆ ನಡೆಯಲಿದ್ದು ಹೀಗಾಗಿ ಈ ಒಂದು ಹಬ್ಬದಲ್ಲಿ ಶಾಲೆಗಳನ್ನು ಆರಂಭ ಮಾಡಿದರೂ ಕೂಡಾ ಮಕ್ಕಳು ಶಾಲೆಗೆ ಬರೊದಿಲ್ಲ ಹೀಗಾಗಿ ಸಧ್ಯ ರಾಜ್ಯಾಧ್ಯಂತ ಸಿಕ್ಕಾ ಪಟ್ಟಿ ಒತ್ತಾಯ ಕೇಳಿಬರುತ್ತಿರುವ ದಸರಾ ರಜೆ ವಿಸ್ತರಣೆಯನ್ನು ಈ ಕೂಡಲೇ ಮಕ್ಕಳ ಮತ್ತು ಪೋಷಕರ ಗಮನ ಇಟ್ಟುಕೊಂಡು ರಜೆಯನ್ನು ಅಕ್ಟೋಬರ್ ತಿಂಗಳ ಕೊನೆಯವರೆಗೂ ವಿಸ್ತರಣೆ ಮಾಡುವಂತೆ ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಒತ್ತಾಯ ಮಾಡಿದ್ದಾರೆ.
ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರೊಂದಿಗೆ ಈ ಕುರಿತಂತೆ ದೂರವಾಣಿಯಲ್ಲಿ ಮಾತನಾಡಿದ ಅವರು ಶಿಕ್ಷಕರ ಮಕ್ಕಳ ಪೋಷಕರ ಈ ಒಂದು ಸಮಸ್ಯೆಯನ್ನು ಮುಂದಿಟ್ಟರು. ಈ ಒಂದು ವಿಚಾರ ಕುರಿತಂತೆ ಸ್ಪಂದಿಸಿದ ಮಾಜಿ ಶಿಕ್ಷಣ ಸಚಿವರು ಈ ಕೂಡಲೇ ಶಿಕ್ಷಣ ಸಚಿವರೊಂದಿಗೆ ಮಾತನಾಡಿ ನಾಳೆಯೇ ದಸರಾ ರಜೆಯನ್ನು ವಿಸ್ತರಣೆ ಮಾಡುವಂತೆ ಕ್ರಮವನ್ನು ಕೈಗೊಳ್ಳುವ ಅಲ್ಲದೇ ಆದೇಶ ಮಾಡಿಸುವುದಾಗಿ ಹೇಳಿದರು.ಒಂದು ಕಡೆಗೆ ನಾಳೆಯಿಂದ ಶಾಲೆಗಳು ಆರಂಭವಾಗಲಿದ್ದು ಮತ್ತೊಂದು ಕಡೆಗೆ ಈ ಒಂದು ಸಮಯದಲ್ಲಿ ಶಿಕ್ಷಕರು ಕೂಡಾ ಶಾಲೆಗಳಿಗೆ ಬರಲು ಈಗಾಗಲೇ ಸಿದ್ದರಾಗಿದ್ದು ಆದರೆ ಹಬ್ಬದ ಹಿನ್ನಲೆಯಲ್ಲಿ ಸಾಲು ಸಾಲು ರಜೆ ಇರುವುದರಿಂದ ಮಕ್ಕಳು ಬರಲು ಹಿಂದೇಟು ಹಾಕುತ್ತಾರೆ ನಾಲ್ಕು ದಿನ ಮಾತ್ರ ಶಾಲೆಗಳಿಗೆ ರಜೆಯನ್ನು ನೀಡಿದರೆ ಹಬ್ಬದಲ್ಲಿ ಎಲ್ಲವೂ ಸರಿ ಹೋಗುತ್ತದೆ ಹೀಗಾಗಿ ಈ ಒಂದು ತಿಂಗಳ ಕೊನೆಯವರೆಗೂ ರಜೆಯನ್ನು ವಿಸ್ತರಣೆ ಮಾಡುವಂತೆ ಪೋಷಕರು ಒತ್ತಾಯವನ್ನು ಮಾಡಿದ್ದು
ಈ ಒಂದು ವಿಚಾರವನ್ನು ಮಾಜಿ ಶಿಕ್ಷಣ ಸಚಿವರ ಮುಂದೆ ಪವಾಡೆಪ್ಪ ಅವರು ಇಟ್ಟರು.ಇನ್ನೂ ಇದರ ನಡುವೆ ಸಧ್ಯ ರಾಜ್ಯಾದ್ಯಂತ ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ಹೀಗಾಗಿ ಮಕ್ಕಳು ಶಾಲೆಗೆ ಬರಲು ತಯಾರಿಲ್ಲ ಪಾಲಕರಿಗೆ ಭಯವಾಗುತ್ತಿದ್ದು ಸಾಕಷ್ಟು ಶಾಲೆಗಳು ಗುಡ್ಡ ಗಾಡು ಪ್ರದೇಶದಲ್ಲಿ ನದಿ ದಡಗಳಲ್ಲಿ ಇರುವುದು ರಿಂದ ಭಯದ ವಾತಾವರಣ ಸೃಷ್ಟಿಯಾಗಿದ್ದು ಶಿಕ್ಷಣ ಸಚಿವರು ತಕ್ಷಣ ದಸರಾ ರಜೆಯನ್ನು ಇಂದು ಆದೇಶ ಮಾಡಿ ಈ ತಿಂಗಳ ಕೊನೆಯ ವರೆಗೆ ರಜೆ ಘೋಷಣೆ ಮಾಡಬೇಕೆಂದು ಪವಾಡೆಪ್ಪ ರಾಜ್ಯದ ಸಮಸ್ತ ಶಿಕ್ಷಕರ ಧ್ವನಿಯಾಗಿ ವಿನಂತಿಸಿ ಒತ್ತಾಯವನ್ನು ಮಾಡಿದರು.