ಮಂಡ್ಯ –
ಹೌದು ದೀಪಾವಳಿ ಹಬ್ಬದ ಹಿನ್ನಲೆಯಲ್ಲಿ ಸ್ಟುಡಿಯೋವೊಂದರಲ್ಲಿ ಕ್ಲೀನ್ ಮಾಡುತ್ತಿದ್ದ ಸಮಯದಲ್ಲಿ ಕರೆಂಟ್ ಶಾಕ್ ಹೊಡೆದು ಇಬ್ಬರು ಪೋಟೊಗ್ರಾಪರ್ ನಿಧನರಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯದ ಜಿಲ್ಲೆಯ ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಈ ಒಂದು ಅವಘಡ ನಡೆದಿದೆ.
ಮೃತರನ್ನು ವಿವೇಕ್ ಮತ್ತು ಮಧುಸೂದನ್ ಎಂದು ಗುರುತಿಸಲಾಗಿದ್ದು ಬೆಸಗರಹಳ್ಳಿಯ ಲಕ್ಷ್ಮೀ ಸ್ಟುಡಿಯೋದಲ್ಲಿ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಸ್ಟುಡಿಯೋದಲ್ಲಿದ್ದ ವೈಯರ್ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಹೀಗಾಗಿ ಇಬ್ಬರು ಫೋಟೋಗ್ರಾಫರ್ ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂಇಬ್ಬರು ಫೋಟೋಗ್ರಾಫರ್ಗಳ ದುರ್ಮ ರಣಕ್ಕೆ ಮಂಡ್ಯ ಜಿಲ್ಲೆ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿನ ಫೋಟೋಗ್ರಾಫರ್ಗಳು ಸಂತಾಪ ಸೂಚಿಸಿದ್ದಾರೆ ಇತ್ತ ಮೃತರ ಕುಟುಂಬ ಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಬೆಸಗರ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ಜರುಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.