ಬೆಂಗಳೂರು –
ಬಿಬಿಎಂಪಿ ಶಾಲೆಗಳಿಗೆ ವಿದೇಶಿ ಪ್ರವಾಸ ಯೋಗ ಕೂಡಿ ಬಂದಿದೆ. ಬಿಬಿಎಂಪಿ ಶಾಲೆಗಳತ್ತ ವಿದ್ಯಾರ್ಥಿ ಗಳನ್ನು ಆಕರ್ಷಿಸುವ ಉದ್ದೇಶದಿಂದ ನೂರರಷ್ಟು ಫಲಿತಾಂಶ ತಂದುಕೊಡುವ ಶಾಲೆ ಗಳಿಗೆ ವಿದೇಶ ಪ್ರವಾಸದ ಯೋಗ ಕಲ್ಪಿಸಲು ಬಿಬಿಎಂಪಿ ತೀರ್ಮಾನಿಸಿದೆ.ಈ ಹಿಂದೆ ಸರ್ಕಾರಿ ಶಾಲೆಗಳ ಫಲಿತಾಂಶ ವೃದ್ಧಿಗೆ ಬಳ್ಳಾರಿಯಲ್ಲಿ ಮಾಡಲಾಗಿದ್ದ ವಿದೇಶಿ ಪ್ರವಾಸ ಭಾಗ್ಯ ಯೋಜನೆಯನ್ನು ಇದೀಗ ಬಿಬಿಎಂಪಿ ಜಾರಿಗೊಳಿಸಲು ಮುಂದಾಗಿದೆ.ಬಳ್ಳಾರಿಯಲ್ಲಿ ವಿದೇಶಿ ಪ್ರವಾಸದ ಯೋಜನೆ ಯಶಸ್ವಿಯಾಗಿ ಅಲ್ಲಿನ ನೂರಾರು ಶಾಲೆಗಳಲ್ಲಿ ಶೇ.100ರಷ್ಟು ಫಲಿತಾಂಶ ಬಂದಿತ್ತು.
ಹೀಗಾಗಿ ಪ್ರತಿವರ್ಷ ಕಡಿಮೆ ಫಲಿತಾಂಶ ಬರುತ್ತಿರುವ ಬಿಬಿಎಂಪಿ ಶಾಲೆಗಳ ಶೈಕ್ಷಣಿಕ ಅಭಿವೃದ್ಧಿ ದೃಷ್ಟಿಯಿಂದ ಶೇ.100ರಷ್ಟು ಫಲಿತಾಂಶ ತಂದುಕೊಡುವ ಶಾಲೆಗಳ ಶಿಕ್ಷಕರಿಗೆ ವಿದೇಶಿ ಪ್ರವಾಸ ಭಾಗ್ಯ ಕಲ್ಪಿಸಲು ತೀರ್ಮಾನಿ ಸಲಾಗಿದೆ.
ವಿದೇಶಿ ಪ್ರವಾಸ ಭಾಗ್ಯದ ಯೋಜನೆಯ ಎಲ್ಲಾ ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು, ಮೇಲಾಧಿಕಾರಿಗಳ ಒಪ್ಪಿಗೆ ದೊರೆತ ಕೂಡಲೆ ಯೋಜನೆಯನ್ನು ಅನುಷ್ಠಾನಗೊಳಿಸ ಲಾಗು ವುದು ಎಂದು ಬಿಬಿಎಂಪಿ ಅಧಿಕಾರಿ ಗಳು ತಿಳಿಸಿ ದ್ದಾರೆ.