ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7ನೇ ವೇತನ ನೀಡುವ ವಿಚಾರ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ಚರ್ಚೆಯನ್ನು ಮಾಡಿದರು.
ನಿನ್ನೆಯಷ್ಟೇ ಈ ಕುರಿತಂತೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದ್ದ ಷಡಾಕ್ಷರಿ ಅವರು ರಾತ್ರಿ ಸರ್ಕಾರದ ಆರ್ಥಿಕ ಇಲಾಖೆಯ ಅಧಿಕಾರಿಗ ಳೊಂದಿಗೆ ಸಭೆ ಮಾಡಿದ ನಂತರ ಬೆಳಿಗ್ಗೆ ಮುಖ್ಯ ಮಂತ್ರಿ ಅವರನ್ನು ಷಡಾಕ್ಷರಿ ಅವರು ಭೇಟಿ ಯಾಗಿ ಸಮಿತಿ ರಚನೆ ಕುರಿತಂತೆ ಸಂಪೂರ್ಣ ವಾದ ಮಾಹಿತಿಯನ್ನು ತಗೆದಕೊಂಡು ನಂತರ ಕೆಲವೊಂದಿಷ್ಟು ರಾಜ್ಯದ ಸರ್ಕಾರಿ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಂಶಗಳನ್ನು ಸೇರಿಸಲು ಮತ್ತು ವಿಳಂಬವನ್ನು ಮಾಡದೇ ಕೂಡಲೇ ವರದಿಯನ್ನು ಸಲ್ಲಿಸಲು ಸೂಚನೆ ಯನ್ನು ನೀಡಿದರು.
ಇದರೊಂದಿಗೆ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯವರು ಇಲ್ಲದ ಕಾರಣದಿಂದಾಗಿ ಇವತ್ತೆ ಸಂಜೆಯೊಳಗಾಗಿ ಸಮಿತಿ ರಚನೆ ಕುರಿತಂತೆ ಸ್ಪಷ್ಟವಾದ ನಿರ್ಧಾರದ ಆದೇಶವನ್ನು ಮಾಡಿಸುವಂತೆ ಮುಖ್ಯಮಂತ್ರಿ ಅವರಿಗೆ ಒತ್ತಾಯವನ್ನು ಮಾಡಿದರು. ರಾಜ್ಯಾಧ್ಯಕ್ಷರೊಂದಿಗೆ ರಾಜ್ಯ ಘಟಕದ ಸರ್ವ ಸದಸ್ಯರು ಉಪಸ್ಥಿತರಿದ್ದರು.ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರ ಭೇಟಿಯ ನಂತರ ಮುಖ್ಯಮಂತ್ರಿ ಅವರು ಉಡುಪಿಯತ್ತ ಪ್ರಯಾಣವನ್ನು ಬೆಳೆಸಿದರು.ವೇತನ ಆಯೋಗದ ರಚನೆ ವಿಚಾರದಲ್ಲಿ ಮುಖ್ಯಮಂತ್ರಿ ಭೇಟಿಯಾದ ಸಮಯದಲ್ಲಿ ರಾಜ್ಯಾಧ್ಯಕ್ಷರಿಗೆ ಮುಖ್ಯಮಂತ್ರಿ ಸ್ಪಂದಿಸಿ ಸರ್ಕಾರ ನಾವು ಸದಾ ರಾಜ್ಯದ ಸರ್ಕಾರಿ ನೌಕರರ ಪರವಾಗಿ ಇದೆ ಎಂಬ ಮಾತನ್ನು ಹೇಳಿದರು.
ಚಕ್ರವರ್ತಿ ಸುದ್ದಿ ಸಂತೆ ನ್ಯೂಸ್ ಹಿರಿಯ ವರದಿಗಾರರು