ಬೆಂಗಳೂರು –
ಹೌದು ಈಗಾಗಲೇ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ 6ನೇ ವೇತನ ಆಯೋಗದ ಅವಧಿ ಮುಕ್ತಾಯವಾಗಿದ್ದು ಈ ಒಂದು ಹಿನ್ನೆಲೆಯಲ್ಲಿ ಸಧ್ಯ 7ನೇ ವೇತನ ನೀಡುವ ಕುರಿತು ಸಮಿತಿ ಗೆ ಅಧ್ಯಕ್ಷ ರನ್ನು ನೇಮಕ ಮಾಡಲಾಗಿದೆ ಕಳೆದ ವಾರವಷ್ಟೇ ಈ ಒಂದು ಸಮಿತಿಗೆ ಅಧ್ಯಕ್ಷ ರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಧಾಕಾರ್ ರಾವ್ ಅವರನ್ನು ನೇಮಕ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ
ಇನ್ನೂ ಈಗಾಗಲೇ ಇವರು ಕೂಡಾ ಒಂದಿಷ್ಟು ಕಾರ್ಯ ಚಟುವಟಿಕೆ ಆರಂಭ ಮಾಡಿದ್ದು ಇದರೊಂದಿಗೆ ಇತ್ತ ಈ ಒಂದು ವೇತನ ಆಯೋಗದ ಸಮಿತಿ ಯ ಕಾರ್ಯ ಏನು ಎಂಬ ಕುರಿತು ನೋಡೊದಾದರೆ ಆಡಳಿತಾತ್ಮಕ ವಿಷಯಗಳ ಸುಧಾರಣೆ, ಖಾಲಿಯಿರುವ ಹುದ್ದೆಗಳ ಭರ್ತಿ,ನೇಮಕಾತಿ ಮತ್ತು ಮುಂಬಡ್ತಿ ನಿಯಮಗಳ ಸರಳೀಕರಣಕ್ಕೆ ಶಿಫಾರಸು,ವೃಂದ ಮತ್ತು ನೇಮಕಾತಿ ನಿಯಮಗಳ ಪರಿಷ್ಕರಣೆಗೆ ಶಿಫಾರಸ್ಸು ಮಾಡುವುದು
ಅನವಶ್ಯಕ ವೆಚ್ಚಗಳಿಗೆ ಕಡಿವಾಣ,ಸರ್ಕಾರಿ ಕಚೇರಿಗಳಲ್ಲಿ ಮೂಲ ಸೌಲಭ್ಯಗಳು ಹಾಗೂ ಮಹಿಳಾ ನೌಕರರ ಸಮಸ್ಯೆಗಳ ಸುಧಾರಣೆ, ಸರ್ಕಾರಿ ನೌಕರರಲ್ಲಿ ಕಾರ್ಯದಕ್ಷತೆ ಹೆಚ್ಚಿಸಲು ಪೂರಕವಾದ ಯೋಜನೆಗಳು.ಸಾರ್ವಜನಿಕರಿಗೆ ಕಾಲಮಿತಿಯೊಳಗೆ ಗುಣಮಟ್ಟದ ಸೇವೆ ನೀಡಲು ನಿಯಮಾವಳಿಗಳ ಸರಳೀಕರಣ ಮಾಡಬೇಕು ಎಂಬುದು ನೌಕರರ ಒತ್ತಾಯವಾಗಿದ್ದು ಹೀಗಾಗಿ ಆಯೋಗದ ಸಮಿತಿ ಏನೇನು ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಡೆಸ್ಕ್