ಬೆಂಗಳೂರು –
ಲೋಕಾಯುಕ್ತ ಬಲೆಗೆ ಬಿದ್ದ KAS ಅಧಿಕಾರಿ ಕೈ ತುಂಬಾ ಸಂಬಳ ಸೌಲಭ್ಯ ಗಳಿದ್ದರೂ ಲಂಚಕ್ಕೆ ಕೈಹಾಕಿ ಜೈಲು ಪಾಲಾದ ಮಹಿಳಾ ಅಧಿಕಾರಿ ಹೌದು ಲಂಚ ಸ್ವೀಕರಿಸುತ್ತಿದ್ದ ಕಂದಾಯ ಇಲಾಖೆಯ ಮಹಿಳಾ ತಹಸೀಲ್ದಾರ್ ರೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನ ಯಲಹಂಕ ದಲ್ಲಿ ನಡೆದಿದೆ ತಹಸೀಲ್ದಾರ್ ಆಗಿರುವ ವರ್ಷಾ ಒಡೆಯರ್ ಜಮೀನಿನ ಖಾತೆ ಬದಲಾವಣೆಗೆ 10 ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.ಬಳಿಕ ತಮ್ಮ ಕಚೇರಿಗೆ ಅರ್ಜಿದಾರನನ್ನು ಕರೆಯಿಸಿಕೊಂಡು ಖಾತೆ ಮಾಡಿಕೊಡಲು ಬ್ರೋಕರ್ ರಮೇಶ್ ಮೂಲಕ ಐದು ಲಕ್ಷ ರೂ.ಗಳಿಗೆ ಬೇಡಿಕೆ ಇಟ್ಟಿದ್ದರು.
ಮೈಸೂರು ಬ್ಯಾಂಕ್ ಬಳಿಯ ಕಂದಾಯ ಭವನದ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸು ತ್ತಿದ್ದು ಲಂಚ ಸ್ವೀಕರಿಸುವ ಸಂದರ್ಭದಲ್ಲೇ ಲೋಕಾಯುಕ್ತ ಪೊಲೀಸರು ಲಗ್ಗೆ ಇಟ್ಟಿದ್ದಾರೆ.
ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು ಆ ಸಂದರ್ಭದಲ್ಲಿ ವರ್ಷಾ ಒಡೆಯರ್ ಅವರು ತಬ್ಬಿಬ್ಬಾಗಿದ್ದು ಕಂಡು ಬಂದಿತು.ವಿಶೇಷ ತಹಸೀಲ್ದಾರರ ಕಚೇರಿ ಪರಿಶೀಲನೆ ತಪಾಸಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ತಹಸೀಲ್ದಾರ್ ಮತ್ತು ಬ್ರೋಕರ್ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.ದಾಸನಪುರ ಹೋಬಳಿಯ ಕೆಂಗನಹಳ್ಳಿಯ ನಿವಾಸಿ ಕಾಂತರಾಜು ತನಗೆ ಸೇರಿದ ಜಮೀನಿನ ಖಾತೆಯಲ್ಲಿ ಹೆಸರು ಬದಲಾ ಗಿದೆ ಅದನ್ನು ಸರಿ ಮಾಡಿಕೊಡುವಂತೆ ವಿಶೇಷ ತಹಸೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ವಶಕ್ಕೆ ತೆಗೆದುಕೊಂಡು ನಂತರ ವಿಚಾರಣೆ ಬಳಿಕ ಮೂವರನ್ನು ನ್ಯಾಯಾಧೀಶರ ಎದುರು ಹಾಜರು ಮಾಡಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸ ಲಾಗಿದೆ.
ಸುದ್ದಿ ಸಂತೆ ನ್ಯೂಸ್