ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ರಚನೆ ವಿಚಾರ ಕುರಿತಂತೆ ಈಗಾಗಲೇ ಸಮಿತಿ ರಚನೆಗೊಂಡಿದ್ದು ಕಾರ್ಯಚಟುವಟಿ ಕೆಗಳು ಕೂಡಾ ಆರಂಭಗೊಂಡಿದ್ದು ಇದರ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಸಮಸ್ತ ಸರ್ಕಾರಿ ನೌಕರರ ಪರವಾಗಿ ಮಹತ್ವದ ಬೇಡಿಕೆಯೊಂ ದನ್ನು ಮುಂದಿಟ್ಟಿದ್ದಾರೆ.ಹೌದು ಸರ್ಕಾರಿ ನೌಕರರು ಆಕಸ್ಮಿಕವಾಗಿ ಸಾವಿಗೀಡಾದರೆ 1 ಕೋಟಿ ರೂ ಪರಿಹಾರಕ್ಕೆ ನೌಕರರ ಸಂಘದಿಂದ ಮನವಿಯವನ್ನು ಮಾಡಲಾಗಿದೆ.
ರಾಜ್ಯ ಸರ್ಕಾರಿ ನೌಕರರು ಆಕಸ್ಮಿಕವಾಗಿ ಮೃತ ಪಟ್ಟರೆ, ಗಾಯಗೊಂಡು ಮೃತಪಟ್ಟರೆ ಕುಟುಂಬ ದವರಿಗೆ 1 ಕೋಟಿ ರೂ.ವವರೆಗೆ ವಿಮೆ ಪರಿಹಾರ ಕಲ್ಪಿಸಲು ಪ್ರಯತ್ನ ನಡೆದಿದೆ.ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಈ ಕುರಿತು ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ನೌಕರರಿಗೆ ಇರುವ ಈ ವಿಮೆ ಪರಿಹಾರ ಸೌಲಭ್ಯ ವನ್ನು ಸರ್ಕಾರಿ ನೌಕರರಿಗೂ ಅನ್ವಯವಾಗು ವಂತೆ ಮಾಡುವ ನಿಟ್ಟಿನಲ್ಲಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಪ್ರಯತ್ನ ನಡೆಸಿದ್ದು ಖರ್ಚಿಲ್ಲದಂತೆ ರಾಜ್ಯ ಸರ್ಕಾರಿ ನೌಕರರ ವೇತನ ಪಾವತಿ ಖಾತೆಯನ್ನು ವರ್ಗಾಯಿಸುವ ಮೂಲಕ ವಿಮೆ ಪರಿಹಾರ ಪಡೆಯುವ ವ್ಯವಸ್ಥೆ ಜಾರಿಗೆ ಮನವಿ ಮಾಡುವ ಪ್ಲಾನ್ ನಡೆದಿದ್ದು ಇದೇನಾದ ರೂ ಜಾರಿಗೆ ಬಂದರೆ ಮತ್ತೊಂದು ಮಹತ್ವದ ಬೇಡಿಕೆ ಈಡೇರಿದಂತಾಗಲಿದೆ.
ಸುದ್ದಿ ಸಂತೆ ನ್ಯೂಸ್…..