ಬ್ಯಾಹಟ್ಟಿ –
ಜನೆವರಿ 3 ರಿಂದ ನವದೆಹಲಿಯಲ್ಲಿ ರಾಷ್ಟ್ರೀಯ ವ್ಹಾಲಿಬಾಲ್ ಪಂದ್ಯಾವಳಿ ನಡೆಯಲಿದ್ದು ಹೀಗಾಗಿ ರಾಜ್ಯದಿಂದ ಬಾಲಕರ,ಬಾಲಕಿಯರ ಎರಡು ತಂಡಗಳನ್ನು ಆಯ್ಕೆ ಮಾಡುವ ಉದ್ದೇಶ ದಿಂದಾಗಿ ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮ ದಲ್ಲಿ ತಂಡಗಳಿಗಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಧಾರವಾಡ ಬ್ಯಾಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮತ್ತು ಹೆಣ್ಣು ಮಕ್ಕಳ ಶಾಲಾ ಆವರಣದಲ್ಲಿ ವ್ಹಾಲಿಬಾಲ್ ತಂಡಕ್ಕಾಗಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.ಕರ್ನಾಟಕ ರಾಜ್ಯ ವ್ಹಾಲಿಬಾಲ್ ಸಂಸ್ಥೆ ಮತ್ತು ಬಸವೇಶ್ವರ ಸ್ಪೋರ್ಟ್ ಕ್ಲಬ್ ಬ್ಯಾಹಟ್ಟಿ ವತಿಯಿಂದ ಈ ಒಂದು ಪ್ರಕ್ರಿಯೆ ನಡೆಯಲಿದೆ.
ಬಾಲಕರ ಬಾಲಕಿ ಯರ ಎರಡು ತಂಡಗಳ ಆಯ್ಕೆ ನಂತರ ಆಯ್ಕೆ ಗೊಂಡ ಆಟಗಾರರಿಗೆ ಇಂದಿ ನಿಂದ ಡಿಸೆಂಬರ್ 31 ಗ್ರಾಮದಲ್ಲಿ ಸೂಕ್ತವಾದ ತರಬೇತಿ ಮತ್ತು ಮಾರ್ಗದರ್ಶನ ನಡೆಯಲಿದೆ 16 ವರ್ಷದೊ ಳಗಿನ ಬಾಲಕ ಬಾಲಕಿಯರ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆ ಯಿಂದ ಸೇರಿದಂತೆ ರಾಜ್ಯದ ಮೂಲೆ ಮೂಲೆ ಗಳಿಂದ ಸಾಕಷ್ಟು ಪ್ರಮಾಣದಲ್ಲಿ ಕ್ರೀಡಾಪಟು ಗಳು ಪಾಲ್ಗೊಳ್ಳಲಿದ್ದು ಅವರನ್ನು ಪರೀಕ್ಷೆ ಮಾಡಿ ಆಯ್ಕೆ ಮಾಡಲಾಗು ತ್ತಿದ್ದು ಇನ್ನೂ ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದ್ದು ಪ್ರಕ್ರಿಯೆ ಹಾಗೂ ತರಬೇತಿ ಗೆ ಆಗಮಿಸುತ್ತಿರುವ ಸರ್ವರಿಗೂ ಸಂಸ್ಥೆಯ ಪರವಾಗಿ ಮತ್ತು ಬಸವೇಶ್ವರ ಸ್ಪೋರ್ಟ್ಸ್ ಕ್ಲಬ್ ಪರವಾಗಿ ಸ್ವಾಗತ ಸುಸ್ವಾಗತ ಎಂದು ಸಂತೋಷ ಜೀನಗೌಡರ ಆಹ್ವಾನ ನೀಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬ್ಯಾಹಟ್ಟಿ…..