ಹುಬ್ಬಳ್ಳಿ –
ತಾಯಿ ಮತ್ತು ಮಗಳೊಬ್ಬಳ ಶವಗಳೆರೆಡು ಪತ್ತೆಯಾದ ಘಟನೆ ಧಾರವಾಡದ ಬ್ಯಾಹಟ್ಟಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಕೆರೆಯಲ್ಲಿ ಇಬ್ಬರು ಹಾರಿ ಆತ್ಮಹತ್ಯೆ ಮಾಡಿಕೊಂಡ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಕೆರೆಯಲ್ಲಿ ಮುಳುಗಿ ತಾಯಿ ಮಗಳು ಆತ್ಮಹತ್ಯೆಯನ್ನು ಮಾಡಿ ಕೊಂಡಿರುವ ಆರೋಪ ಕೇಳಿ ಬಂದಿದೆ.ಬ್ಯಾಹಟ್ಟಿ ಗ್ರಾಮದ ಹೊರವಲಯದ ಕೆರಯಲ್ಲಿ ಮುಳುಗಿ ಸಾವಿಗೀ ಡಾಗಿದ್ದು ತಾಯಿ ಮುಕ್ತುಬ್ಬಿ ಹಾಗೂ ಮಗಳು ಶಿನಾಜ ಮೃತ ದುರ್ದೈವಿಗಳಾಗಿದ್ದಾರೆ
ಬ್ಯಾಹಟ್ಟಿ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.ಕೆರೆಯಲ್ಲಿ ತೆಲುತ್ತಿದ್ದ ತಾಯಿ ಮಗಳ ಶವ ಕಂಡು ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ಗ್ರಾಮಸ್ಥರು.ಕೆರೆ ನೀರಿನಲ್ಲಿ ತೆಲುತ್ತಿರುವ ಶವ ಕಂಡು ಭಯಗೊಂಡಿದ್ದಾರೆ ಗ್ರಾಮಸ್ಥರು.ತಕ್ಷಣ ಸ್ಥಳಕ್ಕೆ ಬಂದು ಹುಬ್ಬಳ್ಳಿ ಗ್ರಾಮೀಣ ಪೋಲೀಸರು ಪರಿಶೀಲನೆ ಮಾಡಿದರು.ಸಾರ್ವಜನಿಕರ ಸಹಾ ಯದಿಂದ ಶವವನ್ನು ಹೊರತೆಗೆದಿದ್ದಾರೆ ಪೋಲೀ ಸರು.ಶವಗಳನ್ನು ಹುಬ್ಬಳ್ಳಿ ಕಿಮ್ಸ್ ಗೆ ರವಾನಿಸಿ ದ್ದಾರೆ.ಪೋಲೀಸರು.ಯಾವ ಕಾರಣಕ್ಕೆ ತಾಯಿ ಮಗಳು ಸಾವನ್ನಪ್ಪಿದ್ದಾರೆ ಎಂದು ತನಿಖೆ ಆರಂಭಿ ಸಿದ್ದಾರೆ ಪೋಲೀಸರು.ಕಳೆದ ಮೂರು ದಿನಗಳ ಹಿಂದೆಯೇ ಕೆರಗೆ ಹಾರಿದ್ದಾರೆ ತಾಯಿ ಮಗಳು. ಸಧ್ಯ ಈ ಕುರಿತಂತೆ ಕೇಸ್ ದಾಖಲು ಮಾಡಿಕೊಂ ಡಿರುವ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..