ಧಾರವಾಡ –
ಸದಾ ಒಂದಿಲ್ಲೊಂದು ರೀತಿಯಲ್ಲಿ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿ ರುವ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ತವನಪ್ಪ ಅಷ್ಟಗಿ ಮತ್ತೊಂದು ಸಮಾಜ ಮೆಚ್ಚುವ ಕೆಲಸವನ್ನು ಮಾಡಿದ್ದಾರೆ.
ಹೌದು ಸಧ್ಯ sslc ಓದುತ್ತಿರುವ ವಿದ್ಯಾರ್ಥಿಗಳಿಗೆ ಪತ್ರಿಕೆಗಳನ್ನು ಮತ್ತು ನೋಟ್ ಬುಕ್ ವಿತರಣೆ ಮಾಡಿದರು.ತವನಪ್ಪಾ ಪಾಯಪ್ಪಾ ಅಷ್ಟಗಿ ಸಧ್ಯ ಅಧ್ಯಕ್ಷರು ಕರ್ನಾಟಕ ಬಯಲುಸೀಮೆ ಪ್ರದೇಶಾ ಭಿವೃದ್ಧಿ ಮಂಡಳಿ ಚಿತ್ರದುರ್ಗ ಆಗಿರುವ ಇವರಿಂದ ಧಾರವಾಡ 71 ಮತಕ್ಷೇತ್ರದಲ್ಲಿ ಒಳಪಡುವ ಎಲ್ಲಾ ಕನ್ನಡ ಮಾಧ್ಯಮ ಶಾಲೆಗಳಿಗೆ 2022-23 ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆ ಪತ್ರಿಕೆಗಳನ್ನು ಮತ್ತು ನೋಟ್ ಬುಕ್ ವಿತರಣೆ ಯನ್ನು ಮಾಡಿದರು
ಧಾರವಾಡ ತಾಲ್ಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾ ಗಿತ್ತು ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದ ಪ್ರೌಢಶಾಲೆಯಲ್ಲಿ ಧಾರವಾಡ ಗ್ರಾಮೀಣ 71 ರ ಎಲ್ಲಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರು ಕರಡಿಗುಡ್ಡ ಗ್ರಾಮದ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು.SDMC ಅಧ್ಯಕ್ಷರು,ಸದಸ್ಯರು ಪಾಲ್ಗೊಂಡಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..