ಬೆಂಗಳೂರು –
ಬರುವ ಶೈಕ್ಷಣಿಕ ವರ್ಷದಿಂದ ಮತ್ತೆ ಶುಲ್ಕವನ್ನು ಏರಿಕೆ ಮಾಡಲು ಖಾಸಗಿ ಶಾಲೆಗಳು ನಿರ್ಧಾರ ವನ್ನು ಮಾಡಿವೆ.ಹೌದು ಇದರೊಂದಿಗೆ ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಬಿಗ್ ಶಾಕ್ ಎದುರಾಗಿದೆ.ಬೆಲೆ ಏರಿಕೆಯ ನಡುವೆಯೂ ಕೂಡಾ ಪ್ರತಿಶತ ಶೇ 15 ರಷ್ಟು ಶುಲ್ಕ ಏರಿಕೆಗೆ ಖಾಸಗಿ ಶಾಲೆಗಳು ನಿರ್ಧಾರವನ್ನು ಈ ಮೂಲಕ ಮಾಡಿವೆ.
ಇದರೊಂದಿಗೆ ಮುಂಬರುವ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಪ್ರಮುಖ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ಹೆಚ್ಚಿನ ಶುಲ್ಕ ಪಾವತಿಸಬೇಕಾದ ಅನಿವಾರ್ಯತೆ ಎದುರಾದಂತಾಗಿದೆ.2023-24 ನೇ ಸಾಲಿನಲ್ಲಿ ಖಾಸಗಿ ಶಾಲೆಗಳ ಪ್ರವೇಶ ಶುಲ್ಕವನ್ನು ಶೇ. 5 ರಿಂದ 15 ರಷ್ಟು ಹೆಚ್ಚಿಸಲು ಕ್ಯಾಮ್ಸ್ ಸೇರಿದಂತೆ ವಿವಿಧ ಖಾಸಗಿ ಶಾಲಾ ಸಂಘಟನೆಗಳು ನಿರ್ಧರಿಸಿವೆ
ಈಗಾಗಲೇ ಈ ಕುರಿತಂತೆ ಮೇಲಿಂದ ಮೇಲೆ ಸಭೆಗಳನ್ನು ಮಾಡಿ ಬೆಲೆ ಏರಿಕೆಯಿಂದಾಗಿ ಮತ್ತೆ ಬೇರೆ ಬೇರೆ ಕಾರಣಗಳಿಂದಾಗಿ ಈ ಒಂದು ನಿರ್ಧಾರವನ್ನು ತಗೆದುಕೊಂಡಿವೆ.ರಾಜ್ಯದಲ್ಲಿ ಸುಮಾರು 4 ಸಾವಿರ ಸದಸ್ಯ ಶಾಲೆಗಳನ್ನು ಹೊಂದಿರುವ ಕರ್ನಾಟಕ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಶೇ 10 ರಿಂದ 15 ರಷ್ಟು ಪ್ರವೇಶ ಶುಲ್ಕವನ್ನು ಹೆಚ್ಚಿಸಲು ತನ್ನ ಸದಸ್ಯ ಶಾಲೆಗಳಿಗೆ ಸಲಹೆ ನೀಡಿದ್ದು ಇನ್ನೂ ಇತ್ತ ಈ ಒಂದು ನಿರ್ಧಾರಕ್ಕೆ ಪೋಷಕರು ರಾಜ್ಯ ಸರ್ಕಾರ ಶಿಕ್ಷಣ ಇಲಾಖೆ ಯಾವ ರೀತಿ ಸ್ಪಂದನೆ ಸಿಗುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..