ಬೆಂಗಳೂರು –
ರಾಜ್ಯಾಧ್ಯಂತ ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಗಳು ಆರಂಭಗೊಂಡಿದ್ದು ಮೊದಲ ದಿನದ ಪರೀಕ್ಷೆಯೊಂದಿಗೆ ರಾಜ್ಯದಲ್ಲಿ ಪರೀಕ್ಷೆಗಳು ಸರಳ ವಾಗಿ ಆರಂಭಗೊಂಡಿದ್ದು ನಡೆಯುತ್ತಿವೆ.ಇನ್ನೂ ಮೊದಲ ದಿನದ ದ್ವಿತೀಯ ಪಿಯುಸಿ ಪರೀಕ್ಷೆಗೆ 5,10,026 ವಿದ್ಯಾರ್ಥಿಗಳು ಹಾಜರಾಗಿದ್ದರೆ 23 771 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಮೊದಲ ದಿನದ ಪರೀಕ್ಷೆಯಾಗಿ ಪ್ರಥಮ ಭಾಷೆ ಯ ಕನ್ನಡ ಪರೀಕ್ಷೆ ನಡೆಯಿತು.5,10,026 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.ಈ ಬಗ್ಗೆ ಶಾಲಾ ಶಿಕ್ಷಣ ಇಲಾಖೆಯಿಂದ ಮಾಹಿತಿ ಬಿಡುಗಡೆ ಮಾಡಿದ್ದು ಮೊದಲ ದಿನದ ದ್ವಿತೀಯ ಪಿಯು ಪರೀಕ್ಷೆಗೆ 5,33,797 ವಿದ್ಯಾರ್ಥಿಗಳು ನೊಂದಣಿ ಯಾಗಿದ್ದು ಇವರಲ್ಲಿ ಇಂದು 5,10,026 ವಿದ್ಯಾ ರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ಇನ್ನೂ ಇಂದಿನ ಪರೀಕ್ಷೆಗೆ 23,771 ವಿದ್ಯಾರ್ಥಿ ಗಳು ಗೈರಾಗಿದ್ದು ಒಟ್ಟಾರೆ ಶೇ.95.55ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂಬುದಾಗಿ ಮಾಹಿತಿಯನ್ನು ಇಲಾಖೆ ನೀಡಿದೆ. ಬೆಳಗಾವಿಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಯಲ್ಲಿ ನಕಲು ಓರ್ವ ವಿದ್ಯಾರ್ಥಿ ಡಿಬಾರ್
ಹೌದು ಮೊದಲ ದಿನದ ಪರೀಕ್ಷೆಯಲ್ಲಿಯೇ ಓರ್ವ ವಿದ್ಯಾರ್ಥಿ ನಕಲು ಮಾಡಲು ಹೋಗಿ ಬೆಳಗಾ ವಿಯ ಚಿಕ್ಕೋಡಿಯಲ್ಲಿ ಡಿಬಾರ್ ಆಗಿದ್ದಾನೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿನ ದ್ವಿತೀಯ ಪಿಯುಸಿ ಪರೀಕ್ಷಾ ಕೇಂದ್ರ ವೊಂದರಲ್ಲಿ ಕನ್ನಡ ವಿಷಯದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಓರ್ವ ವಿದ್ಯಾರ್ಥಿ ನಕಲಿಗೆ ಪ್ರಯತ್ನಿಸಿದ್ದನು ಅಂತಹ ವಿದ್ಯಾರ್ಥಿಯನ್ನು ತಪಾಷಣಾಧಿಕಾರಿಗಳು ಡಿಬಾರ್ ಮಾಡಿದ್ದಾರೆ.
ಇದನ್ನು ಹೊರತುಪಡಿಸಿದರೆ ರಾಜ್ಯಾಧ್ಯಂತ ಪರೀಕ್ಷೆಗಳು ಸುಸೂತ್ರವಾಗಿ ಸರಳವಾಗಿ ನಡೆ ದಿದ್ದು ಕಂಡು ಬಂದಿತು.ಇನ್ನೂ ಮತ್ತೊಂದೆಡೆ ರಾಜ್ಯದ ತುಂಬೆಲ್ಲಾ ನಾಲ್ಕೈದು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಕುರಿತಂತೆ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..