ಬೆಂಗಳೂರು –
ಆರಂಭಗೊಂಡಿತು ರಂಜಾನ್ ತಿಂಗಳದ ಮಾಸಾಚಾರಣೆ ಬದಲಾವಣೆಯಾಯಿತು ಶಾಲಾ ವೇಳಾಪಟ್ಟಿ – ಶಾಲೆಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿ ಆದೇಶ ಮಾಡಿದ ಇಲಾಖೆ
ರಾಜ್ಯದಲ್ಲಿ ಇಂದಿನಿಂದ ರಂಜಾನ್ ತಿಂಗಳದ ಮಾಸಾಚರಣೆ ಆರಂಭಗೊಂಡಿದೆ.ಇನ್ನೂ ಈ ಒಂದು ಹಿನ್ನಲೆಯಲ್ಲಿ ರಾಜ್ಯದ ಉರ್ದು ಪ್ರಾಥ ಮಿಕ ಮತ್ತು ಪ್ರೌಢ ಶಾಲೆಗಳ ವೇಳಾಪಟ್ಟಿಯನ್ನು ಬದಲಾವಣೆಯನ್ನು ಶಿಕ್ಷಣ ಇಲಾಖೆ ಮಾಡಿ ಆದೇಶವನ್ನು ಮಾಡಿದೆ.ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ರಾಜ್ಯ ಪಠ್ಯಕ್ರಮ ಅನುಸರಿಸುತ್ತಿ ರುವ ರಾಜ್ಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2022-23 ಸಾಲಿನ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕ್ರಿಯಾ ಯೋಜನೆ ಅನುಷ್ಠಾನ ಗೊಳಿಸುವ ಬಗ್ಗೆ ನಿರ್ದೇಶವಿರುತ್ತದೆ.
ಬೆಳಿಗ್ಗೆ 10 ರಿಂದ ಸಂಜೆ 4.20ರವರೆಗೆ ಶಾಲಾ ಅವಧಿ ನಿಗದಿ ಪಡಿಸಲಾಗಿದೆ. ರಂಜಾನ್ ಮಾಸದ ಪ್ರಯುಕ್ತ ರಾಜ್ಯದಲ್ಲಿನ ಉರ್ದು ಮಾಧ್ಯಮದ ಕಿರಿಯ, ಹಿರಿಯ ಮತ್ತು ಪ್ರೌಢ ಶಾಲೆಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2.45ರವರೆಗೆ ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕ ದಿಂದ ಒಂದು ತಿಂಗಳವರೆಗೆ ಮಾತ್ರ ನಡೆಸಲು ಈ ಹಿಂದೆ ದಿನಾಂಕ 31-10-2002ರಲ್ಲಿ ಹೊರಡಿಸ
ಲಾಗಿದೆ.
ಸ್ಟಾಂಡಿಂಗ್ ಆರ್ಡರ್ ಅನ್ನು ಯಥಾವತ್ತು ಹೊರಡಿಸಲು ಸ್ವೀಕೃತವಾದ ಮನವಿಯನ್ನು ನಿಯಮಾನುಸಾರ ಪರಿಶೀಲಿಸಿ ಅಗತ್ಯ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ಇನ್ನೂ 2022-23ನೇ ಶೈಕ್ಷಣಿಕ ಸಾಲಿನಲ್ಲಿ ರಾಜ್ಯದ ಸರ್ಕಾರಿ ಅನುದಾನಿತ ಹಾಗೂ ಅನುದಾನ ರಹಿತ ಉರ್ದು ಮಾಧ್ಯಮದ ಕಿರಿಯ ಹಿರಿಯ ಹಾಗೂ ಪ್ರೌಢ ಶಾಲೆಗಳು ರಂಜಾನ್ ತಿಂಗಳು ಪ್ರಾರಂಭವಾದ ದಿನಾಂಕದಿಂದ ದಿನಾಂಕ 10-04-2023ರವರೆಗೆ ಮಾತ್ರ ಶಾಲಾ ಅವಧಿಯ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದೆ ಎಂದಿದ್ದಾರೆ
ಬದಲಾವಣೆಗೊಂಡ ಉರ್ದು ಶಾಲೆಗಳ ವೇಳಾಪಟ್ಟಿ ಈ ಕೆಳಗಿನಂತೆ ಇದೆ. ಬೆಳಿಗ್ಗೆ 8 ಗಂಟೆಯಿಂದ 8.40ರವರೆಗೆ 8.40 ರಿಂದ 9.20 ರವರೆಗೆ 9.20ರಿಂದ 10 ಗಂಟೆಯವರೆಗೆ 10 ಗಂಟೆಯಿಂದ 10.15ರವರೆಗೆ ವಿರಾಮ 10.15 ರಿಂದ 10.55ರವರೆಗೆ 10.55ರಿಂದ 11.35 ರವರೆಗೆ 11.35ರಿಂದ 12.10ರವರೆಗೆ 12.10 ರಿಂದ 12.45ರವರೆಗೆ ಮಾಡಲಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..