ಬೆಂಗಳೂರು –
ವಿಧಾನಸಭೆ ಚುನಾವಣೆ ಘೋಷಣೆ ಹಿನ್ನೆಲೆ ರಾಜ್ಯ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಸಧ್ಯ ಮುಂದೂಡುವಂತೆ ಕೇಂದ್ರ ಚುನಾವಣಾ ಆಯೋಗ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ಹೀಗಾಗಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ಸಂಪೂರ್ಣ ವಾಗಿ ಮುಗಿದ ಬಳಿಕ ವರ್ಗಾವಣೆ ಪ್ರಕ್ರಿಯೆ ಮತ್ತೆ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.ಹಲವು ಕಾರಣಗಳಿಂದ ಸ್ಥಗಿತವಾಗಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಆರಂಭಿಸಲು ಕಳೆದ ವಾರವಷ್ಟೇ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈ ಬೆನ್ನಲ್ಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಚುನಾವಣಾ ಆಯೋಗಕ್ಕೆ ಪತ್ರ ಬರೆದು ಅನುಮತಿ ಕೋರಿತ್ತು.
ಹೀಗಾಗಿ ಪ್ರಾಥಮಿಕ ಶಾಲಾ ಮತ್ತು ಪ್ರೌಢಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಮುಂದೂ ಡುವಂತೆ ಕೇಂದ್ರ ಚುನಾವಣಾ ಆಯೋಗ ಸಾರ್ವ ಜನಿಕ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ.
ವರ್ಗಾವಣೆಯ ನಿರೀಕ್ಷೆಯಲ್ಲಿರುವ ಪ್ರಾಥಮಿಕ ಪ್ರೌಢಶಾಲೆ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಘಟಕ ಅಥವಾ ವಿಭಾಗದ ಹೊರಗಿನ ಪರಸ್ಪರ ವರ್ಗಾ ವಣೆಗೆ ಸೇವಾವಧಿ ಪ್ರಕರಣದಲ್ಲಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರುವವರನ್ನು ಮಾತ್ರ ಪರಿಗಣಿಸು ವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸೂಚನೆ ನೀಡಿದ್ದಾರೆ.
ಇನ್ನೂ ಘಟಕ ವಿಭಾಗದ ಹೂರಗೆ ಪರಸ್ಪರ ವರ್ಗಾವಣೆಗೆ ಒಟ್ಟು ಸೇವಾವಧಿಯಲ್ಲಿ ಆ ವೃಂದದಲ್ಲಿ ಕನಿಷ್ಟ 5 ವರ್ಷಗಳ ಸೇವೆ ಪೂರ್ಣ ಗೊಂಡಿರಬೇಕು ಹಾಗೂ ಕರ್ತವ್ಯನಿರತ ಸ್ಥಳದಲ್ಲಿ ಕನಿಷ್ಕ 3 ವರ್ಷಗಳ ಸೇವೆ ಪೂರ್ಣಗೊಂಡಿರುವ ಪ್ರಕರಣಗಳನ್ನು ಮಾತ್ರ ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಆಧ್ಯತೆಗಳು ಸೇವಾವಧಿಯಲ್ಲಿ ಒಮ್ಮೆ ಮಾತ್ರ ಆಧ್ಯತೆಯನ್ನು ಕ್ಷೇಮ್ ಮಾಡಲು ಅವಕಾಶವಿದೆ ಎಂದು ಇರುತ್ತದೆ.ಇದನ್ನು ವರ್ಗಾವಣೆ ಕಾಯ್ದೆ- 2020 .ಜಾರಿಗೆ ಬಂದ ನಂತರ ಮಾತ್ರ ಅನ್ವಯ ವಾಗುವಂತೆ ಪರಿಗಣಿಸತಕ್ಕದ್ದು.
ಇದು ಕೋರಿಕ ವರ್ಗಾವಣೆಗೆ ಅನ್ವಯವಾಗು ತ್ತದೆ.ಆದರೆ ಹೆಚ್ಚುವರಿ ವರ್ಗಾವಣೆಗೆ ಅನ್ವಯ ವಾಗುವುದಿಲ್ಲ.3. ಪತಿ-ಪತಿ, ಪ್ರಕರಣ ಹೆಚ್ಚುವರಿ ವರ್ಗಾವಣೆಯಲ್ಲಿ ಪತಿ ಪತ್ನಿ ಇವರಲ್ಲಿ ಒಬ್ಬರು ಜಿಲ್ಲೆಯಿಂದ ಹೊರಗೆ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಆಧ್ಯತೆಗೆ ಪರಿಗಣಿಸಲು ಅವಕಾಶವಿರುವುದಿಲ್ಲ.
ಆದರೆ ಪತಿ ಪತ್ನಿ ಇಬ್ಬರೂ ಒಂದು ತಾಲ್ಲೂಕಿನಲ್ಲಿ, ಒಂದು ಜಿಲ್ಲೆಯ ಬೇರೆ ಬೇರೆ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಲ್ಲಿ ಅಂತಹವರಿಗೆ ಹೆಚ್ಚುವರಿಯಲ್ಲಿ ಆಧ್ಯತೆಗೆ ಪರಿಗಣಿಸುವುದು ಎಂದು ಸೂಚನೆ ನೀಡಿದೆ.ಸೇವಾ ಹಿರಿತನ ಶಿಕ್ಷಕರು ಒಂದು ದಿನ ಪೂರ್ವಾಹ್ನ ಅಥವಾ ಅಪರಾಹ್ನ ಕರ್ತವ್ಯಕ್ಕೆ ಹಾಜರಾಗಿದ್ದಲ್ಲಿ ಪೂರ್ವಾಹ್ನ ಅಥವಾ ಅಪರಾಹ್ನ ಎಂಬುದನ್ನು ಪರಿಗಣಿಸದೇ ಕರ್ತವ್ಯ ಕ್ಕೆ ಹಾಜರಾದ ದಿನಾಂಕವನ್ನು ಮಾತ್ರ ಪರಿಗಣಿ ಸುವುದು.
ಒಂದು ವೇಳೆ ಕರ್ತವ್ಯಕ್ಕೆ ಹಾಜರಾದ ದಿನಾಂಕ ಒಂದ ಆಗಿದ್ದಲ್ಲಿ ಅವರ ಜನ್ಮ ದಿನಾಂಕ ವನ್ನು ಪರಿಗಣಿಸಿ ಹೆಚ್ಚುವರಿ ಶಿಕ್ಷಕರನ್ನು ಗುರುತಿ ಸಲು ಕ್ರಮವಹಿಸುವುದು. ಉಳಿದಂತೆ ಈಗಾ ಗಲೇ ನೀಡಿರುವ ಅಧಿಸೂಚನೆ ಹಾಗೂ ಪ್ರಸ್ತುತ ಚಾಲ್ತಿ ಯಲ್ಲಿರುವ ವರ್ಗಾವಣಾ ಕಾಯ್ದೆ, ನಿಯಮಗ ಳನ್ನು ಗಮನಿಸಿ ಅದರಂತೆ ಕ್ರಮವಹಿಸಲು ಸೂಚಿಸಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..