ಕುಂದಗೋಳ –
ಬಿಜೆಪಿ ಅಭ್ಯರ್ಥಿ ಗಳ ಪಟ್ಟಿ ಬಿಡುಗಡೆಯಾಗಿದ್ದು ಧಾರವಾಡ ಜಿಲ್ಲೆಯ ಕುಂದಗೋಳ ವಿಧಾನ ಸಭಾ ಕ್ಷೇತ್ರಕ್ಕೆ ಬಿಜೆಪಿ ಯಿಂದ ಎಮ್ ಆರ್ ಪಾಟೀಲ್ ಅವರಿಗೆ ಟಿಕೆಟ್ ನೀಡಲಾಗಿದೆ. ಮಾಜಿ ಶಾಸಕ ಎಸ್ ಐ ಚಿಕ್ಕನಗೌಡರ ಅವರಿಗೆ ಮತ್ತೆ ಈ ಬಾರಿಯೂ ಟಿಕೆಟ್ ನೀಡಲಾಗುತ್ತದೆ ಎಂಬ ಮಾತು ಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿದ್ದವು ಆದರೆ ಹೈ ಕಮಾಂಡ್ ಹೊಸಬರಿಗೆ ಟಿಕೆಟ್ ನೀಡಿದೆ
ಯುವ ಉತ್ಸಾಹಿ ಮುಖಂಡರಾದ ಎಮ್ ಆರ್ ಪಾಟೀಲ್ ರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ ಕ್ಷೇತ್ರದಲ್ಲಿ ಸಾಕಷ್ಟು ಜನಪರ ಕೆಲಸ ಕಾರ್ಯಗ ಳನ್ನು ಮಾಡುತ್ತಾ ಪಕ್ಷವನ್ನು ಸಂಘಟನೆ ಮಾಡುತ್ತಿರುವ ಎಮ್ ಆರ್ ಪಾಟೀಲ್ ರಿಗೆ ಹೈ ಕಮಾಂಡ್ ಮಣಿ ಹಾಕಿದೆ.
ಪಕ್ಷ ಸಂಘಟನೆ ಯೊಂದಿಗೆ ಹಲವಾರು ಕೆಲಸ ಕಾರ್ಯಗಳನ್ನು ಎಮ್ ಆರ್ ಪಾಟೀಲ್ ರು ಮಾಡುತ್ತಿದ್ದಾರೆ ಹೀಗಾಗಿ ಅವರಿಗೆ ಈ ಬಾರಿ ಟಿಕೆಟ್ ನೀಡಲಾಗಿದೆ. ಇನ್ನೂ ಅತ್ತ ಟಿಕೆಟ್ ಘೋಷಣೆ ಯಾಗುತ್ತಿದ್ದಂತೆ ಇತ್ತ ಹುಬ್ಬಳ್ಳಿಯ ಅವರ ನಿವಾಸದಲ್ಲಿ ಸಡಗರ ಸಂಭ್ರಮದ ವಾತಾವರಣ ಕಂಡು ಬಂದಿತು ಅಭಿಮಾನಿಗಳು ಪಕ್ಷದ ಕಾರ್ಯಕರ್ತರು ಮುಖಂಡರು ಆಪ್ತರು ಸಿಹಿ ತಿನ್ನಿಸಿ ಸಂಭ್ರಮಿಸಿದರು
ಎಮ್ ಆರ್ ಪಾಟೀಲ್ ರಿಗೆ ಸಿಹಿ ತಿನ್ನಿಸಿ ಅಭಿನಂದನೆಗಳನ್ನು ಸಲ್ಲಿಸಿ ಖುಷಿ ಪಟ್ಟರು ಇದರೊಂದಿಗೆ ಸಡಗರ ಸಂಭ್ರಮದ ವಾತಾವರಣ ಕಂಡು ಬಂದಿತು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..