ಹುಬ್ಬಳ್ಳಿ –
ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಯಲ್ಲಿ ಮತ್ತೆ ಬಿಜೆಪಿ ಸರಳವಾಗಿ ಗೆಲುವು ಸಾಧಿಸಿದೆ 22 ನೇ ಅವಧಿಗೆ ಅವಳಿ ನಗರದ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಬಿಜೆಪಿಯ ವೀಣಾ ಭರದ್ವಾಡ ಉಪ ಮೇಯರ್ ಆಗಿ ಸತೀಶ್ ಹಾನಗಲ್ ಆಯ್ಕೆಯಾಗಿದ್ದಾರೆ.
ಹೌದು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ 22ನೇ ಅವಧಿಯ ಮೇಯರ್ ಆಗಿ ಬಿಜೆಪಿಯ ವೀಣಾ ಬರದ್ವಾಡ್ ಉಪ ಮೇಯರ್ ಆಗಿ ಸತೀಶ್ ಹಾನಗಲ್ ಗೆಲುವು ಸಾಧಿಸಿದರು
ಧಾರವಾಡ ದ ಮಹಾನಗರ ಪಾಲಿಕೆಯ ಕಚೇರಿ ಯಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಪಕ್ಷದ ನಡುವೆ ತೀವ್ರ ಸ್ವರೂಪದ ಜಿದ್ದಾಜಿದ್ದಿ ಕಂಡು ಬಂದಿತು ಬಿಜೆಪಿ ಯಿಂದ ಇಬ್ಬರು ಕಾಂಗ್ರೆಸ್ ಪಕ್ಷದಿಂದ ಇಬ್ಬರು ಹಾಗೇ ಎಐಎಮ್ ಐಎಮ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಮಾಡಿದ್ದರು
ಅಂತಿಮವಾಗಿ ಬಿಜೆಪಿ ಇಬ್ಬರು 46 ಮತಗಳನ್ನು ಪಡೆದು ಎದುರಾಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದರು ಇನ್ನೂ ಕಾಂಗ್ರೆಸ್ ಪಕ್ಷದ ಇಬ್ಬರು ಅಭ್ಯರ್ಥಿ ಗಳು 36 ಮತಗಳನ್ನು ಪಡೆದರು
ಇನ್ನೂ ನೂತನ ಮೇಯರ್ಗೆ ಸಂಸದ ಪಲ್ಹಾದ್ ಜೋಶಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಶುಭ ಹಾರೈಸುತ್ತಿದ್ದಾರೆ.ಹು-ಧಾ ಮೇಯರ್ ಆಗಿ ಆಯ್ಕೆಗೊಂಡ ಬಳಿಕ ವೀಣಾ ಬರದ್ವಾಡ್ ಮಾತನಾಡಿ ಮೇಯರ್ ಆಗಿ ನನ್ನನ್ನು ಆಯ್ಕೆ ಮಾಡಿರುವುದು ತುಂಬಾ ಸಂತಸ ತಂದಿದೆ.
ಅವಳಿ ನಗರದ ಜನತೆ ನಮ್ಮಿಂದ ಸಾಕಷ್ಟು ಅಭಿವೃದ್ದಿ ನಿರೀಕ್ಷೆ ಮಾಡಿದ್ದು ಉತ್ತಮ ಆಭಿವೃದ್ಧಿ ನಿರೀಕ್ಷೆ ಮಾಡಿದ್ದಾರೆ. ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ಸಾಕಷ್ಟು ಸವಾಲುಗಳಿವೆ. ಪ್ರಮುಖ ವಾಗಿ ಅಭಿವೃದ್ದಿ ಕಾರ್ಯಗಳತ್ತ ಗಮನ ಹರಿಸು ತ್ತೇನೆ.ಕುಂಠಿತಗೊಂಡ ಅಭಿವೃದ್ದಿ ಕಾರ್ಯಗಳು ಹಾಗೂ ಕುಡಿಯುವ ನೀರಿನ ಸಮಸ್ಯೆ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಹೇಳಿದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಒಟ್ಟು 82 ಸದಸ್ಯರ ಬಲ ಹೊಂದಿದ್ದು,ಅಧಿಕಾರ ಪಡೆದು ಕೊಳ್ಳಲು 46 ಸಂಖ್ಯಾಬಲ ಬೇಕಿತ್ತು.ಬಿಜೆಪಿ ಕಾರ್ಪೊರೇಟರ್ಗಳ ಸಂಖ್ಯೆ 39 ಇದ್ದು, ಕಾಂಗ್ರೆಸ್ 33, ಪಕ್ಷೇತರ 6, AIMIM 3, ಜೆಡಿಎಸ್ 1 ಸ್ಥಾನ ಹೊಂದಿದೆ.
ಇನ್ನು 8 ಜನಪ್ರತಿನಿಧಿಗಳು, 4 ಶಾಸಕರು, 1 ಸಂಸದ, 3 ಎಂಎಲ್ಸಿ ಪಾಲಿಕೆ ವ್ಯಾಪ್ತಿಯ ಜನಪ್ರತಿನಿಧಿಗಳು ಸೇರಿಸಿ ಒಟ್ಟು 90 ಮತಗ ಳಿದ್ದವು.ಬಿಜೆಪಿ ಮೇಯರ್ ಅಭ್ಯರ್ಥಿ ಪರ 46 ಮತಗಳು ಚಲಾವಣೆಯಾದವು
ಕಾಂಗ್ರೆಸ್ನ ಸುವರ್ಣ ಅವರು 37 ಮತ ಪಡೆಯುವುರೊಂದಿಗೆ ಸೋಲು ಕಂಡರು. ಇದರೊಂದಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಬಿಜೆಪಿ ಪಾಲಾಗಿದೆ. ಸತೀಶ ಹಾನಗಲ್ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಅವಳಿನಗರದ ಜನತೆಗೆ ನಮ್ಮ ಆಡಳಿತದ ಮೇಲೆ ಅಪಾರ ವಿಶ್ವಾಸ ಹಾಗೂ ನಂಬಿಕೆ ಇದೆ.ಅವರ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸಬೇ ಕಿದೆ. ಸಾರ್ವಜನಿಕರ ನಿರೀಕ್ಷೆಗಳನ್ನು ಪೂರೈಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳಲಿದ್ದೀರಿ ಎಂಬ ನಂಬಿಕೆ ಇದೆ ಅತ್ಯಂತ ಯಶಸ್ವಿ ಅವಧಿ ನಿಮ್ಮ ದಾಗಿಲಿ ಎಂಬ ಸಂದೇಶದೊಂದಿಗೆ ನೂತನ ಮೇಯರ್ ಹಾಗೂ ಉಪಮೇಯರ್ಗೆ ಸಂಸದ ಪ್ರಲ್ಹಾದ ಜೋಶಿ ಸೇರಿದಂತೆ ಶಾಸಕರಾದ ಅರವಿಂದ ಬೆಲ್ಲದ,ಮಹೇಶ್ ತೆಂಗಿನಕಾಯಿ ಮಾಜಿ ಶಾಸಕರಾದ ಶ್ರೀಮತಿ ಸೀಮಾ ಮಸೂತಿ,ಅಮೃತ ದೇಸಾಯಿ,ಕೆಎಮ್ ಎಫ್ ಅಧ್ಯಕ್ಷ ಶಂಕರ ಮುಗದ ಸೇರಿದಂತೆ ಹಲವು ಗಣ್ಯರು ಹಾರಿಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ.