ಬೆಂಗಳೂರು –
ರಾಜ್ಯ ಸರ್ಕಾರಿ ನೌಕರರ ವೇತನ ಭತ್ಯೆ ಮತ್ತು ಸೌಲಭ್ಯಗಳ ಪರಿಷ್ಕರಣೆಗಾಗಿ ರಚಿಸಲ್ಪಟ್ಟಿರುವ 7ನೇ ವೇತನ ಆಯೋಗವು ವರದಿಯನ್ನು ಸಿದ್ದತೆ ಮಾಡತಾ ಇದೆ ಈ ಒಂದು ವಿಚಾರ ಕುರಿತು ಈಗಾಗಲೇ ಸಮಿತಿ ಗೆ ಮತ್ತೆ ಆರು ತಿಂಗಳಗಳ ಕಾಲ ಸಮಯಾವಕಾಶವನ್ನು ನೀಡಲಾಗಿದೆ
ಹೀಗಾಗಿ ಸಮಿತಿ ಕೆಲಸ ಕಾರ್ಯ ವನ್ನು ಮಾಡತಾ ಇದ್ದು ಈ ನಡುವೆ ಸಮಿತಿಯ ಸದಸ್ಯರು ಮತ್ತೊಂದು ಮಹತ್ವದ ಸಭೆಯನ್ನು ಕರೆದಿದ್ದಾರೆ ಈಗಾಗಲೇ ಸರ್ಕಾರಿ ನೌಕರರಿಂದ ಮತ್ತು ಸಾರ್ವಜನಿಕರಿಂದ ಪ್ರಶ್ನೋತ್ತರ ಮಾದರಿಯಲ್ಲಿ ಅಭಿಪ್ರಾಯ ಬೇಡಿಕೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಾಗಿದೆ
ಈಗ ಓಪಿಎಸ್ ಜಾರಿಗಾಗಿ ಹೋರಾಟ ನಡೆಸುತ್ತಿ ರುವ ರಾಜ್ಯ ಸರ್ಕಾರದ ಎನ್‌ಪಿಎಸ್ ನೌಕರರ ಸಂಘದೊಂದಿಗೆ ವಿಶೇಷ ಸಭೆ ಆಯೋಜಿಸಿದೆ. ಇದಕ್ಕಾಗಿ ಆಯೋಗವು ಜೂನ್ 27 ರಂದು ವಿಶೇಷ ಸಭೆ ಕರೆದಿದೆ.
,ಬೆಳಗ್ಗೆ 11.30 ಕ್ಕೆ ಆಯೋಗದ ಕಚೇರಿಯಲ್ಲಿ ಈ ಸಭೆ ನಡೆಯಲಿದೆ ಅಗತ್ಯ ಎಲ್ಲಾ ಮಾಹಿತಿಯೊಂ ದಿಗೆ ಸಭೆಗೆ ಆಗಮಿಸಬೇಕೆಂದು ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷರಿಗೆ ಆಯೋಗದ ಕಾರ್ಯದರ್ಶಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಪತ್ರ ಬರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..