ವಿಜಯಪುರ –
ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ASI ಅಧಿಕಾರಿಯೊಬ್ಬರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಗ್ರಾಮ ಪಂಚಾಯತಿಗೆ ಸ್ಪರ್ಧಿಸಿದ್ದ ಎಎಸ್‌ಐಯೊಬ್ಬರು ಜಯಭೇರಿ ಬಾರಿಸಿದ್ದಾರೆ. ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಹಲಸಂಗಿ ಗ್ರಾಮ ಪಂಚಾಯತಿಯಿಂದ ಸ್ಪರ್ಧಿಸಿದ್ದ ನಿವೃತ್ತ ಎಎಸ್‌ಐ ಸದಾಶಿವ ಭತಗುಣಕಿ ಗೆಲುವ ಸಾಧಿಸಿದವರಾಗಿದ್ದಾರೆ.

350 ಮತಗಳಿಂದ ಆಯ್ಕೆಯಾಗಿ ಖಾಕಿಯಿಂದ ಖಾದಿಗೆ ಜಾರಿದ್ದಾರೆ.ಇನ್ನೂ ಸದಾಶಿವ ಭತಗುಣಕಿ ವಿಜಯಪುರ ಜಿಲ್ಲೆಯ ಹಲವು ಪೊಲೀಸ್ ಠಾಣೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗಷ್ಟೆ ನಿವೃತ್ತರಾಗಿದ್ದರು.ನಿವೃತ್ತರಾಗಿ ಮನೆಯಲ್ಲಿ ವಿಶ್ರಾಂತಿ ಜೀವನ ಕಳೆಯಬೇಕಾಗಿದ್ದ ಇವರು ಏನಾದರೂ ಸಾಮಾಜಿಕ ಕೆಲಸ ಕಾರ್ಯಗಳನ್ನು ಮಾಡಿದರಾಯಿತು

ಎಂದುಕೊಂಡು ಗ್ರಾಮ ಪಂಚಾಯತ ಅಖಾಡಕ್ಕೆ ಸ್ಪರ್ಧೆ ಮಾಡಿದ್ದರು. ಕೊನೆಗೂ ಗೆಲುವನ್ನು ಸಾಧಿಸಿದ್ದು ಖಾಕಿಯಿಂದ ಇನ್ನೂ ಖಾದಿಯಾಗಲಿದ್ದಾರೆ ಇವರು. ಈವರೆಗೆ ಪೊಲೀಸ್ ಇಲಾಖೆಯ ಮೂಲಕ ಕರ್ತವ್ಯ ಮಾಡಿದ ಇವರು ಇನ್ನೂ ಮುಂದೆ ಸಾರ್ವಜನಿಕರ ಸೇವೆ ಮಾಡಲಿದ್ದಾರೆ.