ಬೆಂಗಳೂರು –
ಹೌದು ಸೆ.26 ರಂದು ಕಾವೇರಿ ನದಿ ಹಂಚಿಕೆ ವಿಚಾರ ಕುರಿತು ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರು ಬಂದ್ ಗೆ ಕರೆ ನೀಡಲಾಗಿದೆ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸು ತ್ತಿರೋದನ್ನು ಖಂಡಿಸಿ ಬೆಂಗಳೂರು ನಗರದಲ್ಲಿ ಪ್ರತಿಭಟನೆ ಜೋರಾಗುತ್ತಿದೆ.
ಈ ಹಿನ್ನಲೆಯಲ್ಲಿ ಸೆಪ್ಟೆಂಬರ್.26ರಂದು ಬೆಂಗಳೂರು ಬಂದ್ ಗೆ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಘೋಷಣೆ ಮಾಡಿದ್ದಾರೆ.ರಾಜ್ಯದ ರೈತರಿಗೆ ಕುಡಿಯೋದಕ್ಕೆ ನೀರಿಲ್ಲ. ಬೆಂಗಳೂರು ಜನತೆಗೂ ಕಾವೇರಿ ನೀರು ಸಮಸ್ಯೆ ಆಗಲಿದೆ.
ಹೀಗಿದ್ದೂ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರೋದು ಸರಿಯಲ್ಲ.ರಾಜ್ಯ ಸರ್ಕಾರ ವಿಧಾನಮಂಡಲದ ವಿಶೇಷ ಅಧಿವೇಶನ ಕರೆದು, ತಮಿಳುನಾಡಿಗೆ ನೀರು ಬಿಡದಂತ ನಿರ್ಣಯ ವನ್ನು ಕೈಗೊಳ್ಳಬೇಕು ಅಂತ ಆಗ್ರಹಿಸಿದರು.
ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸೋ ದನ್ನು ಖಂಡಿಸಿ ಸೆಪ್ಟೆಂಬರ್ 26ರ ಮಂಗಳವಾ ರದಂದು ಬೆಂಗಳೂರು ಬಂದ್ ನಡೆಸಲಾಗುತ್ತದೆ. ಅಂದು ಶಾಲಾ-ಕಾಲೇಜುಗಳು ಮಕ್ಕಳಿಗೆ ತೊಂದರೆಯಾಗದಂತೆ ರಜೆ ನೀಡಬೇಕು. ಬೆಂಗಳೂರು ಜನತೆ ಸ್ವಯಂ ಪ್ರೇರಿತವಾಗಿ ಬಂದ್ ನಲ್ಲಿ ಭಾಗವಹಿಸಬೇಕು.
ಇದು ಕಾವೇರಿ ಹೋರಾಟದ ಪ್ರತಿಭಟನೆಯಂತ ತಿಳಿಯಬಾರದು. ಬೆಂಗಳೂರು ಜನತೆ ನೀರಿನ ಹೋರಾಟ ಅಂತ ತಿಳಿಯಬೇಕು ಎಂದು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..