ಹುಬ್ಬಳ್ಳಿ –
ಎಲೆ ತಟ್ಟುತ್ತಿದ್ದವರ ಬೆನ್ನು ತಟ್ಟಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು – ಕೆರೆಯ ದಂಡೆಯ ಮೇಲೆ ಇಸ್ಪೀಟ್ ಆಡುತ್ತಿದ್ದವರನ್ನು ಬಂಧನ ಮಾಡಿದ ಇನ್ಸ್ಪೇಕ್ಟರ್ ಮುರಗೇಶ ಚನ್ನಣ್ಣವರ ಟೀಮ್
ಇಸ್ಪೀಟ್ ಆಟವಾಡುತ್ತಿದ್ದ ಜಾಲವನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಬೇಧಿಸಿ ದ್ದಾರೆ.ಹೌದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಂಪ್ಲಿಕೊಪ್ಪ ಗ್ರಾಮದ ಕೆರೆಯ ಹತ್ತಿರ ಜೂಜಾಟ ದಲ್ಲಿ ತೊಡಗಿದ್ದವರನ್ನು ಪೊಲೀಸರು ಬಂಧನ ಮಾಡಿದ್ದಾರೆ.ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣನವರ ಮತ್ತು ಟೀಮ್ ನವರು ಜೂಜು ಅಡ್ಡೆಯ ಮೇಲೆ ದಾಳಿಯನ್ನು ಮಾಡಿ ಆರು ಜನರನ್ನು ಬಂಧನ ಮಾಡಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿಎಸ್ಪಿ ಇವರ ಮಾರ್ಗದರ್ಶನದಲ್ಲಿ ಈ ಒಂದು ದಾಳಿಯನ್ನು ಮಾಡಲಾಗಿದೆ.ಧಾರವಾಡ ಗ್ರಾಮೀಣ ಉಪವಿಭಾಗ ರವರ ಮಾರ್ಗದರ್ಶ ನದಲ್ಲಿ ಪಿಐ ಎಮ್.ಆರ್.ಚನ್ನಣ್ಣವರ ನೇತೃತ್ವ ದಲ್ಲಿ ಪಿಎಸ್ ಐ ಸಚೀನ ಆಲಮೇಲಕರ,ಎಲ್.ಪಿ. ಶ್ರೀಮತಿ ಚಾಮುಂಡೇಶ್ವರಿ ಡಿ ಸಿಬ್ಬಂದಿಗಳಾದ ಎಎಸ್ಐ ಅಧಿಕಾರಿಗಳಾದ ಎನ್.ಎಮ್. ಹೊನ್ನಪ್ಪನವರ, ವಾಯ್.ಜಿ.ಶಿವಮ್ಮನವರ
ಪೊಲೀಸ್ ಸಿಬ್ಬಂದಿಗಳಾದ ಎ.ವಿ. ಠಾಕರ, ಸಿ.ಎಚ್. ಚನ್ನಪ್ಪ, ಬಳ್ಳೋಳ್ಳಿ,ಮಾಂತೇಶ ಮದ್ದೀನ ಸೇರಿದಂತೆ ಹಲವರು ಈ ಒಂದು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಇಸ್ಪೀಟ್ ಜೂಜಾಟವನ್ನು ಆಟವಾಡುತ್ತಿದ್ದ 6 ಜನರನ್ನು ಬಂಧಿಸಿ ಅವರಿಂದ 17210 ರೂಪಾಯಿಗಳನ್ನು ವಶಪಸಿಕೊಂಡು ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮವನ್ನು ಪೊಲೀಸರು ಕೈಗೊಂಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..