ಬೆಂಗಳೂರು –
ಬಿಡುಗಡೆಯಾಯಿತು 2024 ರ ಸಾರ್ವತ್ರಿಕ ರಜಾದಿನಗಳ ಪಟ್ಟಿ – ಹೊಸ ಅಪ್ಡೈಟ್ ನೊಂದಿಗೆ 2024 ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿ ಇಲ್ಲಿದೆ ಹೌದು
ಹೌದು 2024ನೇ ಸಾಲಿನ ಸಾರ್ವತ್ರಿಕ ರಜಾ ದಿನ ಗಳ ಪಟ್ಟಿಯನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ.ಈ ಹಿಂದೆ ಪ್ರಕಟ ಮಾಡಲಾಗಿದ್ದ ಪಟ್ಟಿಯಲ್ಲಿ ಕೆಲವೊಂದಿಷ್ಟು ಮಾರ್ಪಾಡುಗಳನ್ನು ಮಾಡಿ ಕರ್ನಾಟಕ ಸರ್ಕಾರದಿಂದ 2024ನೇ ಸಾಲಿನ ಸಾರ್ವತ್ರಿಕ ರಜಾದಿನಗಳ ಪಟ್ಟಿಯನ್ನು ಪ್ರಕಟ ಮಾಡಿದೆ.21 ಸಾರ್ವತ್ರಿಕ ರಜಾದಿನಗಳು.
15 ಪರಿಮಿತ ರಜಾದಿನಗಳು 2024ನೇ ವರ್ಷ ದಲ್ಲಿ ಬಂದಿವೆ.
ಇದರೊಂದಿಗೆ ಕರ್ನಾಟಕ ರಾಜ್ಯ ಸರ್ಕಾರವು 2024ನೇ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ರಜಾ ದಿನಗಳ ಪಟ್ಟಿಯು ಸಾರ್ವ ಜನಿಕರಿಗೆ ಮಾತ್ರವಲ್ಲದೇ ಸರ್ಕಾರಿ ನೌಕರರ ಗಮನಕ್ಕೆ ಅತಿಮುಖ್ಯವಾಗಿದ್ದು
ಈ ಒಂದು ರಜೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಎಲ್ಲಾ ಎರಡನೇ ಶನಿವಾರ ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಹಾಗೂ ಈ ಕೆಳಕಂಡ ದಿನಗಳು ರಜೆ ದಿನಗಳಾಗಿವೆ.ರಾಜ್ಯ ಸರ್ಕಾರವು ಸರ್ಕಾರಿ ನೌಕರರಿಗೆ 2024ನೇ ಸಾಲಿಗೆ 15 ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಟ್ಟು 21 ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಹಾಗೂ 15 ಪರಿಮಿತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಕೆಲವು ಸೂಚನೆಗಳೊಂ ದಿಗೆ ಅಧಿಸೂಚನೆ 1, ಅಧಿಸೂಚನೆ 2 ಎಂದು ಪ್ರತ್ಯೇಕವಾಗಿ ಕೆಲವು ಬದಲಾವಣೆಗಳೊಂದಿಗೆ ಬಿಡುಗಡೆ ಮಾಡಲಾಗಿದೆ.
ಅಧಿಸೂಚನೆ 1 ರ ರಜಾ ದಿನಗಳು ಹಾಗೂ ಇದಕ್ಕೆ ಸಂಬಂಧಿಸಿದ ಅನುಬಂಧದ ಪರಿಮಿತ ರಜಾದಿನ ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.ಇದರ ಜತೆಗೆ ಸಾರ್ವತ್ರಿಕ ರಜಾ ದಿನಗಳಲ್ಲಿ ರಾಜ್ಯಾದ್ಯಂತ ಸರ್ಕಾರಿ ಕಚೇರಿಗಳು ಮುಚ್ಚಲ್ಪಡುತ್ತವೆ. ಕಚೇರಿಯ ಜರೂರು ಕೆಲಸವನ್ನು ವಿಲೇವಾರಿ ಮಾಡುವ ಬಗ್ಗೆ ಇಲಾಖಾ ಮುಖ್ಯಸ್ಥರುಗಳು ಸೂಕ್ತ ವ್ಯವಸ್ಥೆ ಮಾಡತಕ್ಕದ್ದು ಎಂದು ಸರ್ಕಾರಿ ಆದೇಶದಲ್ಲಿ ಹೇಳಲಾಗಿದೆ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..