ಹುಬ್ಬಳ್ಳಿ –
ಅಕ್ರಮ ಅಕ್ಕಿ ದಂಧೆಯ ಮತ್ತಷ್ಟು ಸ್ಪೋಟಕ ಸತ್ಯಗಳು – ಹುಬ್ಬಳ್ಳಿಯಲ್ಲಿ ಅಕ್ರಮ ದಂಧೆ ಹೇಗಿದೆ ಗೊತ್ತಾ ಗೊತ್ತಿದ್ದರೂ ಗೊತ್ತಿಲ್ಲದಂತಿರುವ ಅಧಿಕಾರಿಗಳೇ ಕಣ್ರೇರೆದು ನೋಡಿ….ಸ್ಟೋಟಕ ವಿಡಿಯೋ ಗಳೊಂದಿಗೆ ಮತ್ತಷ್ಟು ವರದಿಗಳನ್ನು ನಿರೀಕ್ಷಿಸಿ ಹೌದು
ರಾಜ್ಯ ಸರ್ಕಾರ ತಾನು ಘೋಷಣೆ ಮಾಡಿದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆ ಒಂದಾಗಿದೆ. ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಕನಸಿನ ಯೋಜ ನೆಗಳಲ್ಲಿ ಇದು ಕೂಡಾ ಒಂದಾಗಿದೆ.ಹಸಿವನ್ನು ನೀಗಿಸಲು ಕಡು ಬಡವರಿಗೆ ಅನುಕೂಲ ಆಗಲಿ ಎಂಬ ಉದ್ದೇಶದಿಂದ ಈ ಒಂದು ಮಹತ್ವದ ಯೋಜನೆಯನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದಾರೆ.
ಸಧ್ಯ ಈ ಒಂದು ಯೋಜನೆ ಕೂಡಾ ರಾಜ್ಯದಲ್ಲಿ ನಡೆಯುತ್ತಿದೆ.ಇದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿದ್ದು ಇನ್ನೂ ಪ್ರಮುಖವಾಗಿ ಈ ಒಂದು ಪಡಿತರ ಅಕ್ಕಿಯ ಅಕ್ರಮ ದಂಧೆ ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿ ಜೋರಾಗಿದೆ.ನಾ ಮುಂದು ನೀ ಮುಂದು ಎನ್ನುತ್ತಾ ಆ ಡಾನ್ ಕೆಳಗೆ ಒಂದಿಷ್ಟು ಏರಿಯಾ ಗಳನ್ನು ಹಂಚಿಕೊಂಡು ಕೆಲವರು ಸಣ್ಣ ಪುಟ್ಟ ಪ್ರಮಾಣದಲ್ಲಿ ಅಕ್ಕಿಯನ್ನು ತುಂಬಿಸುತ್ತಿದ್ದಾರೆ
ಅಕ್ರಮ ಅಕ್ಕಿ ದಂಧೆ ನಗರದ ತುಂಬೆಲ್ಲಾ ಸಾಕಷ್ಟು ಪ್ರಮಾಣದಲ್ಲಿ ವ್ಯಾಪಿಸಿದ್ದು ಈ ಒಂದು ಜಾಲದ ಕರಾಳತೆ ಪೊಲೀಸ್ ಇಲಾಖೆಗೆ ಆಹಾರ ಇಲಾಖೆಗೆ ಜಿಲ್ಲಾಡಳಿತಕ್ಕೆ ಸೇರಿದಂತೆ ಸಂಬಂಧಿಸಿದ ಇಲಾಖೆ ಗಳಿಗೆ ಗೊತ್ತಿದೆ.ಯಾರು ಯಾರು ಪ್ರಮುಖರು ಎಲ್ಲೇಲ್ಲಿ ಹೇಗೆ ನಡೆಯುತ್ತದೆ ಏನೇನು ಹೇಗೆ ಹೊಗುತ್ತದೆ ಎಂಬೊದು ಕೂಡಾ ಇಂಚಿಂಚೂ ಮಾಹಿತಿ ಇದೆ ಆದರೆ ಇದೇಲ್ಲ ಗೊತ್ತಿದ್ದರೂ ಕೂಡಾ ಗೊತ್ತಿಲ್ಲದಂತೆ ಸಂಬಂಧಿಸಿದವರು ಮೌನವಾಗಿದ್ದಾರೆ.
ಹೌದು ಮೌನಕ್ಕೆ ಪ್ರಮುಖ ಕಾರಣ ಆ ಡಾನ್ ಭಯ.ಮಾತನಾಡಿದರೆ ಧ್ವನಿ ಎತ್ತಿದರೆ ಸಾಕು ಅವರನ್ನು ಹೇಗಾದರೂ ಮಾಡಿ ಸುಮ್ಮನಾಗಿ ಸುತ್ತಾನೆ ಡಾನ್ ಹೀಗಾಗಿ ಅವನ ತಂಟೆಗೆ ಯಾರು ಕೂಡಾ ಹೋಗುತ್ತಿಲ್ಲ ಮಾತನಾಡುತ್ತಿಲ್ಲ
ಹೀಗಾಗಿ ಡಾನ್ ಮಾಡಿದ್ದೇ ಆಟ ಮಾಡಿದ್ದೇ ಕೆಲಸ ಎಂದುಕೊಂಡು ಮೌನವಾಗಿದ್ದಾರೆ.ಆದರೆ ಇದು ಎಷ್ಟು ದಿನ ನಡೆಯುತ್ತದೆ ಎಂಬೊದನ್ನು ಕೂಡಾ ನಾವು ನೋಡುತ್ತೇವೆ ನಿರಂತರವಾಗಿ ಈ ಒಂದು ಅಕ್ರಮ ಅಕ್ಕಿ ದಂಧೆಯ ಕುರಿತಂತೆ ನಿಮ್ಮ ಸುದ್ದಿ ಸಂತೆ ಟೀಮ್ ಧ್ವನಿ ಎತ್ತುತ್ತಿದ್ದು ಹೋರಾಟವು ದಾಖಲೆಗಳೊಂದಿಗೆ ಮುಂದುವರಿಯಲಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..