ಬೆಂಗಳೂರು –
ದೇವರ ವಿಗ್ರಹಗಳ ಕದ್ದು ಕಳ್ಳಸಾಗಾಟ ಮಾಡುತ್ತಿದ್ದ ಜಾಲ ಪತ್ತೆ ಮಾಡಿದ ಪೊಲೀಸರು ವಾಹನ ಬಿಟ್ಟು ಎಸ್ಕೇಫ್ ಆದ ಖದೀಮರು ದೇವರ ವಿಗ್ರಹಗಳೊಂದಿಗೆ ವಾಹನವನ್ನು ವಶಕ್ಕೆ ತಗೆದುಕೊಂಡ ಪೊಲೀಸರು ಹೌದು ದೇವರ ಒಡವೆಗಳನ್ನು ಕದ್ದು ಸಾಗಿಸುತ್ತಿದ್ದ ಜಾಲವನ್ನು ಬೆಂಗಳೂರು ಗ್ರಾಮೀಣ ಪೊಲೀಸರು ಪತ್ತೆ ಮಾಡಿದ್ದಾರೆ.ಹೌದು ಅಪಾರ ಪ್ರಮಾಣದಲ್ಲಿ ದೇವರ ವಿಗ್ರಹಗಳನ್ನು ಕಳ್ಳತನ ಮಾಡಿ ಅವುಗಳೊಂದಿಗೆ ವಾಹನವನ್ನು ತಡೆದ ಪೊಲೀಸರು
ವಿಗ್ರಹಗಳನ್ನು ವಶಕ್ಕೆ ಪಡೆದಿದ್ದಾರೆ.ಬೆಂಗಳೂರಿನ ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ.ಕಳೆದ ರಾತ್ರಿ ಆನೇಕಲ್ನ ಅತ್ತಿಬೆಲೆ ಸಮೀಪ ಗಸ್ತಿನಲ್ಲಿ ಕರ್ತವ್ಯ ನಿರ್ವಹಿ ಸುತ್ತಿದ್ದ ಪೊಲೀಸರು 407 ವಾಹನವನ್ನು ಕಂಡು ಅನುಮಾನಗೊಂಡಿದ್ದಾರೆ.ತಪಾಸಣೆ ನಡೆಸಲು ಮುಂದಾಗಿದ್ದಾರೆ ಈ ಒಂದು ವೇಳೆಯಲ್ಲಿ ವಾಹನದಲ್ಲಿದ್ದವರು ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ
ವಾಹನವನ್ನು ತಪಾಸಣೆಗೊಳಪಡಿಸಿದಾಗ ದೇವರ ಕಂಚಿನ ವಿಗ್ರಹಗಳು, ಚೊಂಬುಗಳು, ತ್ರಿಶೂಲ,ಕಳಸ, ದೀಪಾಲೆ ಕಂಬಗಳು ಸೇರಿ ಅನೇಕ ವಸ್ತುಗಳು ಪತ್ತೆಯಾಗಿದ್ದು ಈ ವಸ್ತುಗಳ ಜೊತೆಗೆ ವಿಗ್ರಹಗಳನ್ನು ಸಾಗಿಸುತ್ತಿದ್ದ ವಾಹನವ ನ್ನು ಕೂಡಾ ಪೊಲೀಸರು ಜಪ್ತಿ ಮಾಡಿದ್ದಾರೆ.
ಈ ವಿಗ್ರಹಗಳು ತಮಿಳುನಾಡಿನ ಅಂಗಡಿಯಿಂದ ಕದ್ದು ಸಾಗಿಸುತ್ತಿತ್ತು ಎಂದು ಪೊಲೀಸರಿಂದ ತಿಳಿದು ಬಂದಿದೆ.ಸದ್ಯ ವಾಹನವನ್ನು ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ಮುಂದಿನ ಕ್ರಮವನ್ನು ಕೈಗೊಂ ಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..