ಬೆಂಗಳೂರು –
ಮಹಿಳಾ ಅಧಿಕಾರಿಗಳ ಮಾಹಿತಿ ಕಲೆಹಾಕುತ್ತಿದ್ದ ವ್ಯಕ್ತಿಯ ಬಂಧನ – ನಾನು ಮುಖ್ಯಮಂತ್ರಿ, ಸಚಿವರ, ಪಿಎ,ಕಾರ್ಯದರ್ಶಿ,ಎಂದು ಹೇಳಿ ಕೊಂಡು ಪೊನ್ ಮಾಡುತ್ತಾ ಮಹಿಳಾ ಅಧಿಕಾ ರಿಗಳ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದ ಆರೋಪಿ
ನಾನೊಬ್ಬ ಮುಖ್ಯಮಂತ್ರಿ ಸಚಿವರ ಆಪ್ತ ಕಾರ್ಯದರ್ಶಿ,ಪಿಎ ಎಂದು ಹೇಳಿಕೊಂಡು ಕಂದಾಯ ಇಲಾಖೆಯಲ್ಲಿನ ಮಹಿಳಾ ಅಧಿಕಾ ರಿಗಳ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾರ್ಯ ದರ್ಶಿಯ ಪಿಎ ಎಂದು ಹೇಳಿಕೊಂಡು ಸರ್ಕಾರಿ ಮಹಿಳಾ ಅಧಿಕಾರಿಗಳ ಮಾಹಿತಿಯನ್ನು ಕಲೆ ಹಾಕುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ದ್ದಾರೆ.ವಿಕ್ರಂ ಗೋಪಾಲಸ್ವಾಮಿ ಬಂಧಿತ ಆರೋ ಪಿಯಾಗಿದ್ದು ಈತ ತಾನು ಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿಎ, ಕಂದಾಯ ಸಚಿವರ ಪಿಎ ಎಂದು ಹೇಳಿಕೊಂಡು,
ಡಿಜಿ, ಕಮಿಷನರ್ ಕಚೇರಿಯಿಂದ ಕರೆ ಮಾಡು ತ್ತಿರುವುದಾಗಿ ಹೇಳಿ ಕಂದಾಯ ಇಲಾಖೆಯಲ್ಲಿದ್ದ ಮಹಿಳಾ ಅಧಿಕಾರಿಗಳ ಬಗ್ಗೆ ಮಾಹಿತಿ ಕಲೆ ಹಾಕು ತ್ತಿದ್ದನು.ಇನ್ನೂ ಈ ಒಂದು ವಿಚಾರವನನು ತಿಳಿದು ಅನುಮಾನಗೊಂಡ ಓರ್ವ ಅಧಿಕಾರಿ ಈತನ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಕ್ರಂ ಗೋಪಾಲಸ್ವಾಮಿಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿಕ್ರಂ ಗೋಪಾಲಸ್ವಾಮಿ ನಿವೃತ್ತ ಅಧಿಕಾರಿಯೊಬ್ಬರ ಮಗನಾಗಿದ್ದು ವಿಧಾನಸೌಧ, ಎಂಎಸ್ ಬಿಲ್ಡಿಂಗ್ ನಲ್ಲಿ ಓಡಾಡುತ್ತಿದ್ದ ಎಂದು ತಿಳಿದುಬಂದಿದೆ.ಸಧ್ಯ ಇತನನ್ನು ವಶಕ್ಕೆ ತಗೆದು ಕೊಂಡಿರುವ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..