ಧಾರವಾಡ –
ಧಾರವಾಡದ ಕೆಲಗೇರಿ ಕೆರೆಯಲ್ಲಿ ಶವ ಪತ್ತೆ – ಕಾಣೆಯಾಗಿದ್ದ ಮಂಗಳಗಟ್ಟಿ ಗ್ರಾಮದ ಪ್ರಜ್ವಲ್ ಶವವಾಗಿ ಪತ್ತೆ ಕಾರಣ ಹುಡುಕುತ್ತಿರುವ ಉಪ ನಗರ ಪೊಲೀಸರು ಹೌದು ಕಾಣೆಯಾಗಿದ್ದ ಯುವಕನೊರ್ವ ಶವವಾಗಿ ಪತ್ತೆಯಾದ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಕೆಲಗೇರಿ ಕೆರೆಯಲ್ಲಿ ಈ ಒಂದು ಘಟನೆ ನಡೆದಿದೆ.ಕಳೆದ ಮೂರು ನಾಲ್ಕು ದಿನಗಳ ಹಿಂದೆ ಮಂಗಳಗಟ್ಟಿ ಗ್ರಾಮದ ಯುವಕ ಪ್ರಜ್ವಲ್ ಹನ ಮಂತಗೌಡ ಪಾಟೀಲ್ ಕಾಣೆಯಾಗಿದ್ದನು.ಈ ಒಂದು ಕುರಿತಂತೆ ದೂರು ಕೂಡಾ ದಾಖಲಾಗಿತ್ತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಯನ್ನು ಮಾಡುತ್ತಿರುವ ನಡುವೆ ಸಧ್ಯ ಈ ಒಂದು ಪ್ರಜ್ವಲನ ಮೃತ ದೇಹ ಕೆಲಗೇರಿ ಕೆರೆಯಲ್ಲಿ ಪತ್ತೆ ಯಾಗಿದೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಗ್ರಾಮದ ಯುವಕನಾಗಿದ್ದು ಜನೆವರಿ 9 ರಂದು ಕಾಣೆ ಯಾಗಿದ್ದನು.ಓಸ್ತವಾಲ್ ಟಾವರ್ ನಲ್ಲಿನ ಆಸ್ಪತ್ರೆ ಯಿಂದ ಹೊರಗೆ ಹೋಗಿ ಕಾಣೆಯಾಗಿದ್ದ. ಕೆಲಗೇರಿ ಕೆರೆಯಲ್ಲಿ ಪ್ರಜ್ವಲ ಶವ ಪತ್ತೆಯಾಗಿದ್ದು ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿ ಮುಂದಿನ ಕ್ರಮವನ್ನು ಕೈಗೊಂಡಿದ್ದು ಸಾವಿಗೆ ಕಾರಣವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..























