ಬೆಂಗಳೂರು –
ಹಿರಿಯ,ಮುಖ್ಯ ಶಿಕ್ಷಕರ ವರ್ಗಾವಣೆಗೆ ಹೊರಬಿತ್ತು ಆದೇಶ – ಆನ್ ಲೈನ ಕೌನ್ಸಲಿಂಗ್ ಕುರಿತಂತೆ ಇಲಾಖೆಯ ಆಯುಕ್ತರಿಂದ ಆದೇಶ ವರ್ಗಾವಣೆ ಕುರಿತಂತೆ ಒಂದಿಷ್ಟು ಮಾಹಿತಿ ಹೌದು ರಾಜ್ಯದ ಹಿರಿಯ,ಮುಖ್ಯ ಶಿಕ್ಷಕರ ವಲಯ ವರ್ಗಾವಣೆಗೆ ಆದೇಶವನ್ನು ಮಾಡ ಲಾಗಿದೆ.
ಈ ಒಂದು ಕುರಿಂತತೆ ಆನ್ ಲೈನ್ ಕೌನ್ಸಿಲಿಂಗ್ ಗೆ ಅವಕಾಶವನ್ನು ಇಲಾಖೆಯ ಆಯುಕ್ತರು ನೀಡಿದ್ದು ಈ ಒಂದು ಆದೇಶವನ್ನು ಮಾಡಿದ್ದಾರೆ. 2023-24ನೇ ಸಾಲಿನಲ್ಲಿ ಮುಖ್ಯ ಶಿಕ್ಷಕರ ಹುದ್ದೆಗೆ ಮತ್ತು ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಪೂರಕವಾಗಿ ಅರ್ಹ ಹಿರಿಯ ಮುಖ್ಯ ಶಿಕ್ಷಕರಿಗೆ ವಲಯ ವರ್ಗಾವಣೆಯನ್ನು ಆನ್ ಲೈನ್ ಕೌನ್ಸಿಲಿಂಗ್ ಮೂಲಕ ಮಾಡುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
2023-24ನೇ ಸಾಲಿನಲ್ಲಿ ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರುಗಳಿಗೆ ಮುಖ್ಯ ಶಿಕ್ಷಕರ(HM) ವೃಂದಕ್ಕೆ ಹಾಗೂ ಮುಖ್ಯ ಶಿಕ್ಷಕರ ವೃಂದದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಹಿರಿಯ ಮುಖ್ಯ ಶಿಕ್ಷಕರ (SHM) ವೃಂದಕ್ಕೆ ಸ್ಥಾನವನ್ನು ಬಡ್ತಿ ನೀಡಲು ಉದ್ದೇಶಿಸಿ ಉಲ್ಲೇ ಖಿತ-1ರಲ್ಲಿ ಬಡ್ತಿ ಕುರಿತಂತೆ ಅಧಿಸೂಚನೆಯನ್ನು ಹೊರಡಿಸಲಾಗಿತ್ತು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು ಶಿಕ್ಷಕರ ವರ್ಗಾವಣಾ ನಿಯಂತ್ರಣ ಕಾಯ್ದೆ-2020ರ ಸೆಕ್ಷನ್-3 ಪ್ರಕಾರ ‘ಸಿ’ ವಲಯದಲ್ಲಿನ ಶಾಲೆಗ ಳಲ್ಲಿ ಸ್ಥಳಾವಕಾಶ ಕಲ್ಪಿಸುವ ದೃಷ್ಟಿಯಿಂದ ‘ಸಿ’ ವಲಯದ ಮುಖ್ಯ ಶಿಕ್ಷಕರ ಹಿರಿಯ ಮುಖ್ಯ ಶಿಕ್ಷಕರ ಹುದ್ದೆಗಳನ್ನು ಸಂಬಂಧಿಸಿದ ಶಾಲೆಗಳಲ್ಲಿ ತೆರವುಗೊಳಿಸಬೇಕಿದೆ.ಈ ಹಿನ್ನೆಲೆಯಲ್ಲಿ
ದಿನಾಂಕ: 30/01/2024 ರಂದು ಆಯಾ ಜಿಲ್ಲಾ ಹಂತದಲ್ಲಿ ವಲಯ ವರ್ಗಾವಣಾ ಕೌನ್ಸಿಲಿಂ ಗ್‌ನ್ನು ನಿಗಧಿಪಡಿಸಲಾಗಿತ್ತು.ಆದರೆ ವಲಯ ವರ್ಗವಣಾ ಕೌನ್ಸಿಲಿಂಗ್‌ನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಉಪನಿರ್ದೇಶ ಕರು
(ಆಡಳಿತ) ಇವರುಗಳ ಕೋರಿಕೆಯ ಮೇರೆಗೆ ನಿರ್ಧರಿಸಲಾಗಿರುವುದರಿಂದ ದಿನಾಂಕ: 30/01/2024 ರಂದು ನಡೆಯಬೇಕಾಗಿದ್ದ ವಲಯ ವರ್ಗಾವಣಾ ಕೌನ್ಸಿಲಿಂಗ್ ಪ್ರಕ್ರಿಯೆ ಯನ್ನು ಆಡಳಿತಾತ್ಮಕ ದೃಷ್ಟಿಯಿಂದ ದಿನಾಂಕ: 03/02/2024 ರಂದು ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯಾ ವ್ಯಾಪ್ತಿಯ ಉಪನಿರ್ದೇ ಶಕರ
(ಆಡಳಿತ) ಇವರ ಕಛೇರಿಯಲ್ಲಿ ನಡೆಸಲಾಗು ವುದು ಎಂಬ ಮಾಹಿತಿಯನ್ನು ಆಯುಕ್ತರು ನೀಡಿದ್ದು ಸಕ್ಷಮ ಪ್ರಾಧಿಕಾರಿಗಳು ಬದಲಾವ ಣೆಯನ್ನು ಗಮನಿಸಿ ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆಗೆ ಎಲ್ಲಾ ಅಗತ್ಯ ಪೂರ್ವಭಾವಿ ಸಿದ್ದತೆಗಳನ್ನು ಮಾಡಿಕೊಳ್ಳಲು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..