ಬೆಂಗಳೂರು –
ಹುದ್ದೆಗೆ ರಾಜೀನಾಮೆ ನೀಡಿದ IPS ಅಧಿಕಾರಿ – 1991 ನೇ ಬ್ಯಾಚ್ ನ ಕೂಲ್ IPS ಅಧಿಕಾರಿಯ ರಾಜೀನಾಮೆ ಹಿಂದೆ ಹುಟ್ಟುಕೊಂಡಿವೆ ಹಲವು ಅನುಮಾನಗಳು
ಹೌದು ರಾಜ್ಯದಲ್ಲಿ ಏಕಾಎಕಿಯಾಗಿ IPS ಅಧಿಕಾರಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾ ಮೆಯನ್ನು ನೀಡಿದ್ದಾರೆ. ಪ್ರತಾಪ್ ರೆಡ್ಡಿ ರಾಜೀ ನಾಮೆ ನೀಡಿರುವ ಪೊಲೀಸ್ ಅಧಿಕಾರಿಯಾ ಗಿದ್ದು ಕರ್ನಾಟಕದ ಹಿರಿಯ ಐಪಿಎಸ್ ಅಧಿಕಾರಿ ಯಾಗಿರುವ
ಇವರು 1991ನೇ ಬ್ಯಾಚ್ ನವರಾಗಿದ್ದಾರೆ. ಪ್ರತಾಪ್ ರೆಡ್ಡಿ ಯವರು ತಮ್ಮ ಹುದ್ದೆಗೆ ಸಧ್ಯ ರಾಜೀನಾಮೆಯನ್ನು ಸಲ್ಲಿಕೆ ಮಾಡಿದ್ದಾರೆ.ಈ ಹಿಂದೆ ಬೆಂಗಳೂರು ನಗರ ಪೊಲೀಸ್ ಆಯು ಕ್ತರಾಗಿ ಸಧ್ಯ ಕರ್ನಾಟಕದ ಆಂತರಿಕ ಭದ್ರತೆ ವಿಭಾಗದ ಡಿಜಿಪಿಯಾಗಿದ್ದರು.
ಮೂಲತಃ ಆಂಧ್ರಪ್ರದೇಶದ ಗುಂಟೂರವರಾಗಿ ದ್ದಾರೆ ನಿವೃತ್ತಿಗೆ ಎರಡು ತಿಂಗಳು ಬಾಕಿ ಇರು ವಾಗಲೇ ವೈಯಕ್ತಿಕ ಕಾರಣವನ್ನು ನೀಡಿ ರಾಜೀನಾಮೆಯನ್ನು ನೀಡಿದ್ದಾರೆ.ಈ ರಾಜೀ ನಾಮೆ ಸಧ್ಯ ರಾಜ್ಯ ಪೊಲೀಸ್ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
ಕಮಲ್ ಪಂತ್ ಅವರ ಬಳಿಕ ಪ್ರತಾಪ್ ರೆಡ್ಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕಗೊಂಡಿದ್ದರು.ಬಳಿಕ ಅವರನ್ನು ವರ್ಗಾ ವಣೆ ಮಾಡಿ ದಯಾನಂದ್ ಅವರನ್ನು ನಗರ ಪೊಲೀಸ್ ಆಯುಕ್ತರಾಗಿ ಸರ್ಕಾರ ನೇಮಕ ಮಾಡಿತ್ತು.ಸಿ.ಎಚ್.ಪ್ರತಾಪ್ ರೆಡ್ಡಿ ಅವರು ಸಿಬಿಐನಲ್ಲಿಯೂ ಕೆಲಸ ಮಾಡಿದ್ದಾರೆ.
ಬ್ಯಾಂಕಿಂಗ್ ವಂಚನೆಗಳು, ಸೈಬರ್ ಕ್ರೈಂಗಳಲ್ಲಿ ಅವರು ಅಪಾರವಾದ ಜ್ಞಾನವನ್ನು ಹೊಂದಿದ್ದಾರೆ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಯಾಗಿದ್ದ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ನೇಮಕ ಮಾಡಲಾ ಗಿತ್ತು.
1964ರಲ್ಲಿ ಜನಿಸಿದ ಸಿ. ಎಚ್. ಪ್ರತಾಪ್ ರೆಡ್ಡಿ ಬಿ. ಟೆಕ್ ಪದವೀಧರಾಗಿದ್ದು 1991ರಲ್ಲಿ ಕರ್ನಾಟಕ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿ ಕಾರ್ಯ ವನ್ನು ಆರಂಭಿಸಿದ್ದು ರಾಜ್ಯದ ಕೂಲ್ ಐಪಿಎಸ್ ಅಧಿಕಾರಿಗಳಲ್ಲಿ ಪ್ರತಾಪ್ ರೆಡ್ಡಿ ಅವರು ಕೂಡಾ ಒಬ್ಬರಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……