ಬೆಂಗಳೂರು –
7ನೇ ವೇತನ ಕಥೆ ಏನಾಯಿತು CM,DCM ಸಾಹೇಬ್ರೆ – ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಮುನ್ನವೇ ಜಾರಿ ಮಾಡಿ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಒತ್ತಾಯ ಹೌದು
ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಪರಿಷ್ಕ್ರರಣೆ ಕುರಿತಂತೆ ಈಗಾಗಲೇ 7ನೇ ವೇತನ ಆಯೋಗ ವನ್ನು ರಚನೆ ಮಾಡಲಾಗಿದೆ.ಈಗಾಗಲೇ ಈ ಒಂದು ವೇತನ ಆಯೋಗವು ವರದಿಯನ್ನು ಸಿದ್ದತೆ ಮಾಡಿದ್ದು ಸಿದ್ದವಾಗಿದ್ದರೂ ಕೂಡಾ ರಾಜ್ಯ ಸರ್ಕಾರ ಇನ್ನೂ ಕೂಡಾ ಈವರೆಗೆ ವರದಿಯನ್ನು ಸ್ವೀಕಾರ ಮಾಡಿಲ್ಲ.ಈಗಾಗಲೇ ಎರಡು ಬಾರಿ ಅವಧಿಯನ್ನು ವಿಸ್ತರಣೆ ಮಾಡಿದ್ದು ಈ ನಡುವೆ ಈವರೆಗೆ 7ನೇ ವೇತನ ಆಯೋಗದ ಸುದ್ದಿಯೇ ಇಲ್ಲದಂತಾಗಿದೆ.
ಫೆಬ್ರುವರಿ 12 ರಿಂದ ರಾಜ್ಯ ಬಜೆಟ್ ಅಧಿವೇಶನ ನಡೆಯಲಿದ್ದು ಇದರಲ್ಲಿ ಮುಖ್ಯಮಂತ್ರಿ ಘೋಷಣೆ ಮಾಡ್ತಾರೆ ಎಂಬ ಕುರಿತಂತೆ ಸಮಸ್ತ ಸರ್ಕಾರಿ ನೌಕರರು ಕುತೂಹಲದಿಂದ ಕಾಯುತ್ತಿ ದ್ದರೆ ಈ ನಡುವೆ ಫೆಬ್ರುವರಿ 27 ರಂದು ಬೆಂಗಳೂ ರಿನಲ್ಲಿ ಸರ್ಕಾರಿ ನೌಕರರ ರಾಜ್ಯ ಮಟ್ಟದ ಸಮಾವೇಶ ನಡೆಯಲಿದ್ದು ಬಜೆಟ್ ನಲ್ಲಿ ಘೋಷಣೆ ಮಾಡದಿದ್ದರೆ ಈ ಒಂದು ಅಧಿವೇಶನ ದಲ್ಲಿ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಘೋಷಣೆ ಮಾಡುತ್ತಾರೆಯಾ ಎಂಬ ನಿರೀಕ್ಷೆಯಲ್ಲಿದ್ದಾರೆ.
ಆದರೆ ಈವರೆಗೆ 7ನೇ ವೇತನ ಆಯೋಗದ ವಿಚಾರವು ಎಲ್ಲಿಯೂ ಜಾರಿ ಕುರಿತಂತೆ ಮಾತುಗಳು ಕೇಳಿ ಬರುತ್ತಿಲ್ಲ.ಮತ್ತೊಂದು ಲೋಕಸಭಾ ಚುನಾವಣೆ ಬಂದಿದ್ದು ಇನ್ನೇನು ಕೆಲವೆ ದಿನಗಳಲ್ಲಿ ಮತ್ತೆ ನೀತಿ ಸಂಹಿತಿ ಜಾರಿ ಯಾಗಲಿದ್ದು ನೀತಿ ಸಂಹಿತೆ ಜಾರಿಯಾಗುವ ಮುನ್ನ ಈ ಒಂದು 7ನೇ ವೇತನ ಆಯೋಗವನ್ನು ಘೋಷಣೆ ಮಾಡಲಿ ಎಂಬ ಒತ್ತಾಯ ರಾಜ್ಯ ಮೂಲೆ ಮೂಲೆಗಳಿಂದ ಸಮಸ್ತ ಸರ್ಕಾರಿ ನೌಕರರಿಂದ ಕೇಳಿ ಬರುತ್ತಿದೆ
ಇಲ್ಲವಾದರೆ ಮತ್ತೊಂದು ದೊಡ್ಡ ಹೋರಾಟಕ್ಕೆ ರಾಜ್ಯ ಸರ್ಕಾರ ನೌಕರರು ಮುಂದಾಗುವ ಮುನ್ನ ಈ ಒಂದು ಬೇಡಿಕೆಯನ್ನು ಘೋಷಣೆ ಮಾಡು ತ್ತಾರೆ ಮಾಡಲಿ ಎಂಬ ಆಶಯ ಸುದ್ದಿ ಸಂತೆ ಯದ್ದಾಗಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..