ಧಾರವಾಡ –
KPSC ಯಲ್ಲಿ ಭ್ರಷ್ಟಾಚಾರ Mla ಅರವಿಂದ ಬೆಲ್ಲದ ರನ್ನು ಭೇಟಿಯಾದ ನೊಂದ ವಿದ್ಯಾರ್ಥಿ ಗಳು – ಈ ಕೂಡಲೇ KPSC ಹಾಲಿ ಅಧ್ಯಕ್ಷರನ್ನು ಉಚ್ಛಾಟನೆ ಮಾಡಿ ಎಂದು CM ಗೆ ಒತ್ತಾಯ ಮಾಡಿ ನೊಂದ ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ ನೀಡಿದ ಶಾಸಕ ಅರವಿಂದ ಬೆಲ್ಲದ
KPSC ಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು ಈ ಒಂದು ವಿಚಾರ ಕುರಿತಂತೆ ನೊಂದ ವಿದ್ಯಾರ್ಥಿಗಳು ಹುಬ್ಬಳ್ಳಿ ಧಾರವಾಡ ಪಶ್ಚಿವ ವಿಧಾನ ಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ರನ್ನು ಭೇಟಿಯಾದರು.ಹೌದು ಧಾರವಾ ಡದ ಅವರ ನಿವಾಸದಲ್ಲಿ ನೊಂದ ನೂರಾರು ವಿದ್ಯಾರ್ಥಿಗಳು ಶಾಸಕರನ್ನು ಭೇಟಿಯಾಗಿ ಸಧ್ಯ KPSC ಯಲ್ಲಿ ನಡೆಯುತ್ತಿರುವ ಭ್ರಹ್ಮಾಂಡ ಭ್ರಷ್ಟಾಚಾರದ ಮಾಹಿತಿಯನ್ನು ಚರ್ಚೆಯನ್ನು ಮಾಡಿ ಹಂಚಿಕೊಂಡರು.
ಸಧ್ಯ ಕೆಪಿಎಸ್‌ಸಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದಿಂದ ನೊಂದ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯವಾಗುತ್ತಿದ್ದು ಭ್ರಷ್ಟಾಚಾರದಲ್ಲಿ ತೊಡಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳು ವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಮನವಿ ಮಾಡಿದರು.ರಾಜ್ಯ ಸರ್ಕಾರ ಎಲ್ಲೇಲ್ಲಿ ಕೊಳ್ಳೆ ಹೊಡೆಯಬಹುದೋ ಅಲ್ಲಲ್ಲಿ ತನ್ನೊಬ್ಬ ಏಜೆಂಟ್ ಗಳನ್ನು ನೇಮಿಸುತ್ತದೆ .
ಅದರಲ್ಲಿ ಶಿವಶಂಕರಪ್ಪ ಒಬ್ಬರಾಗಿದ್ದು ಕೆಪಿಎಸ್ಸಿ ಯಲ್ಲಿನ ದೂರಡಳಿತ, ಭ್ರಷ್ಟಾಚಾರಕ್ಕೆ ರಾಜ್ಯದ ವಿದ್ಯಾರ್ಥಿಗಳು ರೋಸಿಹೋಗಿದ್ದಾರೆ ಅವರ ಭವಿಷ್ಯದೊಂದಿಗೆ ಆಟವಾಡುತ್ತಿರುವ ನಿಮಗೆ ನಾಚಿಕೆಯಾಗಬೇಕೆಂಂದು ಶಾಸಕ ಅರವಿಂದ ಬೆಲ್ಲದ ವಾಗ್ದಾಳಿ ನಡೆಸಿದರು.
ಮುಖ್ಯಮಂತ್ರಿಯವರೇ ಈ ಹಾಲಿ ಅಧ್ಯಕ್ಷರನ್ನು ಈ ಕೂಡಲೇ ಉಚ್ಛಾಟನೆ ಮಾಡಿ ಹಾಗೂ ಸೂಕ್ತ ತನಿಖೆಗೆ ಆದೇಶಿಸಿ ದಕ್ಷ ಅಧಿಕಾರಿ ಲತಾಕುಮಾರಿ ಅವರನ್ನು ಅವರ ಸ್ಥಾನದಲ್ಲಿ ಮುಂದುವರಿಸಿ ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ. ವಾದ ಹೋರಾಟವನ್ನು ನಡೆಸುತ್ತೇವೆ ಎಂಬ ಎಚ್ಚರಿಕೆಯನ್ನು ಶಾಸಕ ಅರವಿಂದ ಬೆಲ್ಲದ ನೀಡಿದರು.ಅಲ್ಲದೇ ವಿದ್ಯಾರ್ಥಿಗಳ ಹೋರಾಟಕ್ಕೆ ಸಾಥ್ ನೀಡೊದಾಗಿ ಕೂಡಾ ಹೇಳಿದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ……