ಬೆಂಗಳೂರು –
7ನೇ ವೇತನ ಆಯೋಗ ಸೇರಿದಂತೆ ಸರ್ಕಾರಿ ನೌಕರರ ಬೇಡಿಕೆಗಳ ಕುರಿತಂತೆ ಷಡಾಕ್ಷರಿಯ ವರಿಂದ ಮಹತ್ವದ ಮಾಹಿತಿ – ರಾಜ್ಯ ಸರ್ಕಾರಿ ನೌಕರರಿಗೆ ಭರವಸೆಯ ಮಾತುಗಳೊಂದಿಗೆ ನೌಕರರಿಗೆ ಹೇಳಿದ್ದೇನು ಗೊತ್ತಾ…..ಸರ್ಕಾರಕ್ಕೆ ನೀಡಿದ ಸಂದೇಶ ಎನು ನೋಡಿ ಷಡಾಕ್ಷರಿ ಯವರೇ ಮಾತನಾಡಿದ್ದಾರೆ ಹೌದು
ರಾಜ್ಯದ ಸಮಸ್ತ ಸರ್ಕಾರಿ ನೌಕರರ ಪ್ರಮುಖ ಬೇಡಿಕೆಯಾಗಿರುವ 7ನೇ ವೇತನ ಆಯೋಗ ಜಾರಿಗೆ,ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ಸೇರಿದಂತೆ ನೌಕರರ ಎಲ್ಲಾ ಬೇಡಿಕೆಗಳನ್ನು ಈ ಕೂಡಲೇ ರಾಜ್ಯ ಸರ್ಕಾರ ಈಡೇರಿಸಬೇಕು ಈ ಒಂದು ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಪ್ರಮುಖವಾದ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಒಂದು ಸಮಾವೇಶವನ್ನು ಮಾಡಲಾಗುತ್ತಿದೆ.ನಮ್ಮ ಎಲ್ಲಾ ಪ್ರಮುಖ ಬೇಡಿಕೆಗಳನ್ನು ಈಗಾಗಲೇ ನಾವು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿದ್ದು ಮುಖ್ಯಮಂತ್ರಿ ಸೇರಿದಂತೆ ಹಲವರು ಸಮ್ಮೇಳನ ದಲ್ಲಿ ಪಾಲ್ಗೊಳ್ಳಲಿದ್ದಾರೆ ಸಮಾವೇಶದಲ್ಲಿ ಘೋಷಣೆಯನ್ನು ಮಾಡುತ್ತಾರೆ ಎಂಬ ನಿರೀಕ್ಷೆ ಯನ್ನು ಕೂಡಾ ಹೊಂದಲಾಗಿದೆ.
ಸಮಾವೇಶದಲ್ಲಿ ಘೋಷಣೆ ಮಾಡದಿದ್ದರೆ ಮಾರ್ಚ್ ತಿಂಗಳಲ್ಲಿ ನೀತಿ ಸಂಹಿತೆ ಘೋಷಣೆ ಯಾಗುವ ಮುನ್ನವೇ ನಮ್ಮ ಎಲ್ಲಾ ಬೇಡಿಕೆ ಗಳನ್ನು ಘೋಷಣೆ ಮಾಡಲಿ ಎಂದು ಮುಖ್ಯಮಂತ್ರಿಯವರಿಗೆ ಒತ್ತಾಯವನ್ನು ಮಾಡಿದರು.
ಈಗಾಗಲೇ ಮುಖ್ಯಮಂತ್ರಿಯವರು 7ನೇ ವೇತನ ಆಯೋಗದ ವಿಚಾರದಲ್ಲಿ ಆಯೋಗದ ಅಧ್ಯಕ್ಷ ರನ್ನು ಭೇಟಿಯಾಗಿದ್ದಾರೆ ನಾವು ಕೂಡಾ ಭೇಟಿ ಯಾಗಿ ಮನವಿಯನ್ನು ನೀಡಿದ್ದೇವೆ ಎಂದರು ಸಮ್ಮೇಳನಕ್ಕೆ ಎಲ್ಲಾ ಸಿದ್ದತೆಗಳು ನಡೆದಿದ್ದು ಎಷ್ಟೇ ನೌಕರರು ಬಂದರು ಕೂಡಾ ಎಲ್ಲಾ ವ್ಯವಸ್ಥೆಯನ್ನು ಸಂಘಟನೆಯಿಂದ ಅಚ್ಚು ಕಟ್ಟಾಗಿ ಮಾಡಲಾಗು ತ್ತದೆ ನಾವು ಕೂಡಾ ಸಿದ್ದರಾಗಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನೂ ನಮ್ಮ ಬೇಡಿಕೆಗಳ ಕುರಿತಂತೆ ರಾಜ್ಯದ ನೌಕರರು ಯಾವುದೇ ಆಂತಕವನ್ನು ಇಟ್ಟು ಕೊಳ್ಳಬಾರದು ಘೋಷಣೆ ಮಾಡದಿದ್ದರೆ ಹೋರಾಟದ ಮೂಲಕವಾದರು ಕೂಡಾ ಪಡೆದುಕೊಳ್ಳೊಣ ನೌಕರರನ್ನು ರಾಜ್ಯದ ಮುಖ್ಯಮಂತ್ರಿಯವರು ಬೀದಿಗಿಳಿಸೊದಿಲ್ಲ ಎಂಬ ಭರವಸೆ ನಮಗೆ ಇದೆ ಅದಕ್ಕೂ ಮುನ್ನವೇ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳನ್ನು ಘೋಷಣೆ ಮಾಡಲಿದೆ ಎಂದು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..