ಬೆಂಗಳೂರು –
ರಾಜ್ಯದ ಮೂಲೆ ಮೂಲೆಗಳಿಂದ ಬೆಂಗಳೂರಿ ನತ್ತ ಹೊರಟ ರಾಜ್ಯ ಸರ್ಕಾರಿ ನೌಕರರು – ಮಹಾ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅಪಾರ ಸಂಖ್ಯೆ ಯಲ್ಲಿ ಪ್ರಯಾಣ ಬೆಳೆಸಿದ್ದಾರೆ ಸರ್ಕಾರಿ ನೌಕರರು
ಫೆಬ್ರುವರಿ 27 ರಂದು ಬೆಂಗಳೂರಿನಲ್ಲಿ ರಾಜ್ಯ ಸರ್ಕಾರಿ ನೌಕರರ ಮಹಾ ಸಮ್ಮೇಳನ ಕಾರ್ಯ ಕ್ರಮ ನಡೆಯಲಿದೆ.ಅರಮನೆ ಮೈದಾನದಲ್ಲಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ನಡೆಯಲಿದ್ದು ಈಗಾಗಲೇ ಸಮ್ಮೇಳನಕ್ಕೆ ಎಲ್ಲಾ ಹಂತದಲ್ಲೂ ಸಿದ್ದತೆಗಳು ಮುಕ್ತಾಯಗೊಂಡಿದ್ದು ಇನ್ನೂ ಈ ಒಂದು ಸಮ್ಮೇಳನದಲ್ಲಿ ಪಾಲ್ಗೊಳ್ಳಲು ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸರ್ಕಾರಿ ನೌಕರರು ಬೆಂಗಳೂರಿನತ್ತ ಪ್ರಯಾಣವನ್ನು ಬೆಳೆಸಿದ್ದಾರೆ.
ಹೌದು ಸರ್ಕಾರಿ ಬಸ್ ಸೇರಿದಂತೆ ಬೇರೆ ಬೇರೆ ವಾಹನಗಳ ಮೂಲಕ ರಾಜ್ಯದ ಮೂಲೆ ಮೂಲೆ ಗಳಿಂದ ಎಲ್ಲಾ ಇಲಾಖೆಗಳ ಸರ್ಕಾರಿ ನೌಕರರು ಬೆಂಗಳೂರಿನತ್ತ ಪ್ರಯಾಣವನ್ನು ಬೆಳಿಸಿದ್ದಾರೆ. ಎಸ್ ಈಗಾಗಲೇ ಬೆಂಗಳೂರಿನತ್ತ ಮುಖ ಮಾಡಿರುವ ನೌಕರರು ನಾಳೆ ನಡೆಯಲಿರುವ ಐತಿಹಾಸಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಶಕ್ತಿ ಪ್ರದರ್ಶನದೊಂದಿಗೆ ತಮ್ಮ ಪ್ರಮುಖ ಮೂರು ಬೇಡಿಕೆಗಳೊಂದಿಗೆ ಐತಿಹಾಸಿಕ ಕಾರ್ಯಕ್ರಮ ವೊಂದಕ್ಕೆ ಸಾಕ್ಷಿಯಾಗಲಿದ್ದಾರೆ.
ಹೀಗಾಗಿ ಸರ್ಕಾರಿ ಬಸ್ ಸೇರಿದಂತೆ ಅನುಕೂ ಲಕ್ಕೆ ತಕ್ಕಂತೆ ವಾಹನಗಳನ್ನು ಮಾಡಿಕೊಂಡಿರುವ ರಾಜ್ಯದ ಸರ್ಕಾರಿ ನೌಕರರು ರಾಜಧಾನಿಯತ್ತ ಪ್ರಯಾಣವನ್ನು ಬೆಳೆಸಿದ್ದಾರೆ.ಅರಮನೆ ಮೈದಾನ ದಲ್ಲಿ ನಾಳೆ ಮಹಾ ಸಮ್ಮೇಳನ ನಡೆಯಲಿದ್ದು ಮೊದಲು ರಾಜ್ಯ ಸರ್ಕಾರಿ ನೌಕರರಿಗೆ ಕಾರ್ಯಾ ಗಾರ ನಂತರ ಸಮಾವೇಶ ನಡೆಯಲಿದ್ದು ಮುಖ್ಯಮಂತ್ರಿ,ಉಪಮುಖ್ಯಮಂತ್ರಿ ಯವರೊಂದಿಗೆ ರಾಜ್ಯ ಸರ್ಕಾರದ ಸಚಿವರು ಶಾಸಕರು ಅಧಿಕಾರಿಗಳು ಸೇರಿದಂತೆ ಹಲವರು ಪಾಲ್ಗೊಳ್ಳಲಿದ್ದಾರೆ.
ಹೀಗಾಗಿ ಈ ಒಂದು ಐತಿಹಾಸಿಕ ಕಾರ್ಯಕ್ರಮ ವನ್ನು ಯಶಶ್ವಿಗೊಳಿಸಲು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಸರ್ಕಾರಿ ನೌಕರರು ಉತ್ಸಾಹದಿಂದ ಬೆಂಗಳೂರಿನತ್ತ ಪ್ರಯಾಣವನ್ನು ಬೆಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……