ಹುಬ್ಬಳ್ಳಿ –
ಕಾಂಗ್ರೇಸ್ ಪಕ್ಷದ ಧಾರವಾಡ ಜಲ್ಲಾ ಮಾಧ್ಯಮ ಸಂಯೋಜಕರಾಗಿ ಪತ್ರಕರ್ತ ಮಲ್ಲಿಕ್ ಬೆಳಗಲಿ ನೇಮಕ – ಜಿಲ್ಲಾ ಕಾಂಗ್ರೇಸ್ ಪಕ್ಷದ ಮಾಧ್ಯಮ ಸಂಯೋಜಕರಾಗಿ ನೇಮಕ ಮಾಡಿದ ಅನಿಲ ಕುಮಾರ ಪಾಟೀಲ್ ಹೌದು
ಧಾರವಾಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಮಾದ್ಯಮ ಸಂಯೋಜಕನರಾಗಿ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ನೇಮಕ ಮಾಡಲಾಗಿದೆ. ಹೌದು ಕಳೆದ ಹಲವು ವರ್ಷಗಳಿಂದ ವಿದ್ಯುನ್ಮಾನ ಮಾದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹುಬ್ಬಳ್ಳಿ ತಾಲ್ಲೂಕಿನ ಬೆಳಗಲಿ ಗ್ರಾಮದ ಪತ್ರಕರ್ತ ಮಲ್ಲಿಕ್ ಬೆಳಗಲಿ ಅವರನ್ನು ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾದ್ಯಮ ಸಂಯೋಜಕರಾಗಿ ನೇಮಕ ಮಾಡಲಾಗಿದೆ.
ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಅನಿಲ್ ಕುಮಾರ್ ಪಾಟೀಲ್ ನೇಮಕಾತಿ ಆದೇಶ ಮಾಡಿದ್ದಾರೆ.ಈ ಕುರಿತಂತೆ ಪತ್ರಕರ್ತ ಮಲ್ಲಿಕ್ ಬೆಳಗಲಿ ಯವರಿಗೆ ನೇಮಕಾತಿಯ ಆದೇಶ ಪ್ರತಿಯನ್ನು ನೀಡಿ ಅಭಿನಂದನೆಗಳನ್ನು ಸಲ್ಲಿಸಿದರು.ಗ್ರಾಮೀಣ ವಿಭಾಗದ ಜಿಲ್ಲಾಧ್ಯಕ್ಷ ರಾಗಿರುವ ಅನಿಲಕುಮಾರ್ ಪಾಟೀಲ್ ಅವರು ಮಲ್ಲಿಕ್ ಬೆಳಗಲಿ ಯವರಿಗೆ ನೇಮಕಾತಿಯ ಆದೇಶ ಪ್ರತಿಯನ್ನು ತಮ್ಮ ಗೃಹ ಕಚೇರಿಯಲ್ಲಿ ನೀಡಿ ಅಭಿನಂದನೆ ಸಲ್ಲಿಸಿದರು.
ಇನ್ನೂ ಇತ್ತ ಈ ಒಂದು ವಿಚಾರ ಕುರಿತಂತೆ ಕಾಂಗ್ರೇಸ್ ಪಕ್ಷದ ಯುವ ಮುಖಂಡರಾಗಿರುವ ರಜತ್ ಉಳ್ಳಾಗಡ್ಡಿಮಠ ಅವರು ಕೂಡಾ ಮಲ್ಲಿಕ್ ಬೆಳಗಲಿ ಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……