ಬೆಂಗಳೂರು –
ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಶಿಕ್ಷಕರ ವರ್ಗಾವಣೆ ಪೂರ್ಣಗೊಳಿಸಿ – ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ಶಿಕ್ಷಕರ ನಿಯೋಗದಿಂದ ಶಿಕ್ಷಣ ಇಲಾಖೆಗೆ ಆಗ್ರಹ ಹೌದು
ಸಾಮಾನ್ಯವಾಗಿ ಶಿಕ್ಷಕರ ವರ್ಗಾವಣೆ ಅಂದರೆ ಯಾವುದೇ ಪ್ಲಾನ್ ಇಲ್ಲದೇ ಯಾವದೇ ಯೋಜನೆ ಇಲ್ಲದೇ ಅವೈಜ್ಞಾನಿಕವಾಗಿ ಇದನ್ನು ಮಾಡುತ್ತಾರೆ.ಒಂದು ಕಡೆಗೆ ಶಿಕ್ಷಕರಿಗೆ ಬಿಡುವಿ ಲ್ಲದ ಕೆಲಸ ಕಾರ್ಯಗಳು ಮತ್ತೊಂದೆಡೆ ಶೈಕ್ಷಣಿಕ ಅವಧಿ ಶಾಲೆಗಳು ನಡೆಯುತ್ತಿರುವಾಗ ಈ ಒಂದು ಅಂಶಗಳನ್ನು ಅರಿತುಕೊಂಡು ಶಿಕ್ಷಕ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ ಶಿಕ್ಷಕರ ನಿಯೋಗವು ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಈ ಒಂದು ಶಿಕ್ಷಕರ ವರ್ಗಾವಣೆಯನ್ನು ಪೂರ್ಣಗೊ ಳಿಸುವಂತೆ ಒತ್ತಾಯವನ್ನು ಮಾಡಲಾಯಿತು.
ಈ ಒಂದು ಬೇಡಿಕೆ ಕುರಿತಂತೆ ಮಹೇಶ್ ಮಡ್ಡಿ ನೇತ್ರತ್ವದಲ್ಲಿನ 150 ಕ್ಕೂ ಹೆಚ್ಚು ಶಿಕ್ಷಕರು ಶಿಕ್ಷಣ ಸಚಿವರು ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ 2023 – 24 ನೇ ಸಾಲಿನ ಶಿಕ್ಷಕರ ವರ್ಗಾವಣೆಯನ್ನು ಈ ಕೂಡಲೇ ಆರಂಭ ಮಾಡಬೇಕು.ಅದರಲ್ಲೂ ಹೊಸ ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನವೇ ಕಂಪ್ಲೀಟ್ ಆಗಿ ಪೂರ್ಣಗೊಳಿಸಿ ಹಾಗೆ ವರ್ಗಾವ ಣೆಯ ನಲ್ಲರುವ ಕೆಲವೊಂದಿಷ್ಟು ಅವೈಜ್ಞಾನಿಕ ವಾಗಿರುವ ತಾಂತ್ರಿಕ ಅಂಶಗಳನ್ನು ತಗೆಯುವಂತೆ ಒತ್ತಾಯವನ್ನು ಮಾಡಿ ಮನವಿಯನ್ನು ಸಲ್ಲಿಸಲಾಯಿತು.