ಬೆಂಗಳೂರು –
ಫೆಬ್ರುವರಿ 28 ಕ್ಕೆ ನಿರ್ಧಾರವಾಗಬೇಕಾಗಿದ್ದ ಹಳೆ ಪಿಂಚಣಿ ಭವಿಷ್ಯ ಮತ್ತೆ ನೆನೆಗುದಿಗೆ ಬಿದ್ದಿದೆ ಈ ಒಂದು ವಿಚಾರ ದಲ್ಲಿ ಮಹತ್ವದ ತುರ್ತು ಸಭೆ ಕರೆದಿದ್ದ ಮುಖ್ಯಮಂತ್ರಿ ನೇತೃತ್ವದಲ್ಲಿನ ಸಭೆ ಮುಂದೂಡಲಾಗಿದ್ದು ಇತ್ತ 7ನೇ ವೇತನ ಆಯೋಗದ ಅವಧಿ ಮುಗಿಯುತ್ತಾ ಬರುತ್ತಿದ್ದರು ಕೂಡಾ ರಾಜ್ಯ ಸರ್ಕಾರ ಕಣ್ತೇರೆದು ನೋಡುತ್ತಿಲ್ಲ
ಹೀಗಾಗಿ ಪ್ರಮುಖವಾದ ಹಳೆ ಪಿಂಚಣಿ ಯೋಜನೆ ಮತ್ತು 7ನೇ ವೇತನ ಆಯೋಗದ ವರದಿಯ ನಿರೀಕ್ಷೆ ಯಲ್ಲಿ ನೀರಿಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಆತಂಕ ಶುರುವಾಗಿದೆ ಕೇಂದ್ರ ಸರ್ಕಾರದ ನೌಕರರ ಹಾಗೆ ನಮಗೂ ಕೂಡಾ ಸಿಗಲಿದೆಯಾ ಗುಡ್ ನ್ಯೂಸ್ ಎಂದು ಕೊಂಡು ಕಾಯುತ್ತಿದ್ದಾರೆ ರಾಜ್ಯದ ಸಮಸ್ತ ಸರ್ಕಾರಿ ನೌಕರರು
ಹೌದು ಹಳೆ ಪಿಂಚಣಿ ಯೋಜನೆಯನ್ನು ರಾಜ್ಯ ದಲ್ಲಿ ಮರು ಜಾರಿಗೆ ತರುವ ಕುರಿತಂತೆ ನಿರಂತರ ವಾಗಿ ಹೋರಾಟಗಳು ನಡೆಯುತ್ತಿವೆ.ಈ ಒಂದು ವಿಚಾರದಲ್ಲಿ ಸರ್ಕಾರಿ ನೌಕರರು ಕೂಡಾ ಒತ್ತಾಯ ಒತ್ತಡವನ್ನು ನಿರಂತರವಾಗಿ ಹಾಕು ತ್ತಿದ್ದು ಹೀಗಿರುವಾಗ ಈ ಒಂದು ಯೋಜನೆಯ ಕುರಿತಂತೆ ಚರ್ಚೆಯನ್ನು ಮಾಡುವ ಉದ್ದೇಶದಿಂ ದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತುರ್ತು ಸಭೆಯನ್ನು ಕರೆದಿದ್ದರು ಆದರೆ ಉಪ ಮುಖ್ಯಮಂತ್ರಿ ಅವರ ಬೇರೆ ಪ್ರವಾಸದ ಹಿನ್ನೆಲೆಯಲ್ಲಿ ಈ ಒಂದು ಸಭೆಯನ್ನು ಮುಂದೂಡಲಾಗಿದೆ.
ಹೌದು ಈಗಾಗಲೇ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮತ್ತೆ ಜಾರಿಗೆ ತರಬೇಕು ಎಂದು ಒತ್ತಾಯಿಸಿ ನೌಕರರು ಕೂಡಾ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ,ಸೇರಿದಂತೆ ಸಚಿವರು ಶಾಸಕರಿಗೆ ಮನವಿಯನ್ನು ನೀಡಿ ಒತ್ತಾಯವನ್ನು ಕೂಡಾ ಮಾಡಿದ್ದಾರೆ ಹೀಗಿರು ವಾಗ ಇದನ್ನೇಲ್ಲವನ್ನು ಪರಿಗಣಿಸಿ ಮತ್ತು ಅಧಿಕಾರಕ್ಕೆ ಬರುವ ಮುನ್ನ ಕಾಂಗ್ರೇಸ್ ಪಕ್ಷವು ಕೂಡಾ ತನ್ನ ಒಂದು ಪ್ರಣಾಳಿಕೆಯಲ್ಲಿ ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರುವ ಕುರಿತಂತೆ ಘೋಷಣೆಯನ್ನು ಕೂಡಾ ಮಾಡಿತ್ತು
ಹೀಗಾಗಿ ಸಧ್ಯ ಮುಖ್ಯಮಂತ್ರಿಯವರು ಈ ಒಂದು ಹಳೆ ಪಿಂಚಣಿ ಯೋಜನೆ ಮರು ಜಾರಿಗೆ ತರುವ ಕುರಿತಂತೆ ಸಭೆಯನ್ನು ಕರೆದಿದ್ದರು.ಹಳೆ ಪಿಂಚಣಿ ನಿರೀಕ್ಷೆಯಲ್ಲಿದ್ದ ನೌಕರರಿಗೆ ಸಿಹಿ ಸುದ್ದಿ ಸಿಗಲಿದೆಯಾ ಎಂಬ ಭರವಸೆ ಕೂಡಾ ಹುಟ್ಟು ಕೊಂಡಿತ್ತು ಈ ಫೆಬ್ರವರಿ 28 ರಂದು ನಡೆಯ ಬೇಕಾದ ಸಭೆ ಮುಂದೂಡಿಕೆಯಾಗಿದೆ
ಸಭೆಯಿಂದಾಗಿ ಹುಟ್ಟುಕೊಂಡಿದ್ದ ಆಸೆ ಮತ್ತೆ ಕಾಯುವಂತಾಗಿದೆ ಒಪಿಎಸ್ ಜಾರಿ ಬಗ್ಗೆ ಸಿಎಂ ಕರೆದಿದ್ದ ಮಹತ್ವದ ಸಭೆ ಮತ್ತೆ ಮುಂದೂಡಿದೆ ಹೀಗಾಗಿ ಮತ್ತೆ ತೀವ್ರ ಕುತೂಹಲವನ್ನು ಕೆರಳಿ ಸಿದೆ.ಈ ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಮರು ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರು ನಿರಂತರ ಹೋರಾಟ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಫೆಬ್ರವರಿ 28ರಂದು ಸಭೆ ಕರೆದಿದ್ದರು
ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಳೆ ಪಿಂಚಣಿ ಯೋಜನೆ ಜಾರಿಗೆ ಸಂಬಂಧಿಸಿ ದಂತೆ ಚರ್ಚೆ ನಡೆಸಲಿದ್ದು ಈ ಒಂದು ಸಭೆ ಯಲ್ಲಿ ನೌಕರರ ಬೇಡಿಕೆ ಬಗ್ಗೆ ಚರ್ಚೆ ನಡೆಸಲಿದ್ದು ಹೊಸ ಪಿಂಚಣಿ ಯೋಜನೆ ರದ್ದುಪಡಿಸಿ ಹಳೇ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇತ್ತು ಆದರೆ ಮತ್ತೆ ಮುಂದೂಡಲಾಯಿತು ಹೀಗಾಗಿ ಈ ಒಂದು ಸಭೆ ಸಾಕಷ್ಟು ಪ್ರಮಾಣದಲ್ಲಿ ತೀವ್ರವಾದ ಕುತೂಹ ಲವನ್ನು ಕೆರಳಿಸಿದೆ.
ಇತ್ತ 7 ನೇ ವೇತನ ಆಯೋಗದಲ್ಲೂ ಇದೇ ಸ್ಥಿತಿ ಉಂಟಾಗಿದ್ದು ಹೀಗಾಗಿ ರಾಜ್ಯ ಸರ್ಕಾರ ಅದ್ಯಾಕೋ ಏನೋ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಹೀಗಾಗಿ ಬೇಸತ್ತ ನೌಕರರು ದೊಡ್ಡ ಪ್ರಮಾಣದ ಹೋರಾಟಕ್ಕೆ ಪ್ಲಾನ್ ಮಾಡುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..