ಧಾರವಾಡ –
ನಿವಾಸಿಗಳಿಗೆ ಹಕ್ಕು ಪತ್ರಗಳ ವಿತರಣೆ ಮಾಡಿದ ಸಚಿವ ಸಂತೋಷ ಲಾಡ್,ಶಾಸಕ ಪ್ರಸಾದ್ ಅಬ್ಬಯ್ಯ – ಕೊಳಚೆ ಪ್ರದೇಶ ಅಭಿವೃದ್ದಿ ಮಂಡಳಿಯಿಂದ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ – 3.5 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ಹೌದು
ಸ್ವಂ ಬೋರ್ಡ್ ವತಿಯಿಂದ ಧಾರವಾಡದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು.ಹೌದು ಧಾರವಾಡದಲ್ಲಿ ಹಮ್ಮಿ ಕೊಂಡಿದ್ದ ಈ ಒಂದು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹಕ್ಕು ಪತ್ರಗಳನ್ನು ವಿತರಣೆ ಮಾಡಿದರು.
ಧಾರವಾಡದ ತೇಜಸ್ವಿ ನಗರ, ರಾಜೀವಗಾಂಧಿ ನಗರ, ನೆಹರು ನಗರ ನಿವಾಸಿಗಳಿಗೆ ಸ್ಲಂ ಬೋರ್ಡ್ ವತಿಯಿಂದ ಹಕ್ಕುಪತ್ರ ವಿತರಣೆ ಯನ್ನು ಮಾಡಲಾಯಿತು.ಈ ಒಂದು ಸಂದರ್ಭ ದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷರು ಮತ್ತು ಶಾಸಕರಾದ ಪ್ರಸಾದ ಅಬ್ಬಯ್ಯ ಕೂಡಾ ಈ ಒಂದು ಸಮಾರಂ ಭದಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ ಲಾಡ್ ಅವರ ಸಮ್ಮುಖದಲ್ಲಿ ಹಕ್ಕುಪತ್ರ ವಿತರಣೆ ಮಾಡಿದರು.
ಇದೇ ಸಂದರ್ಭದಲ್ಲಿ 3.5ಕೋಟಿ ರೂ ವೆಚ್ಚದಲ್ಲಿ ವಾರ್ಡ್ ಸಂಖ್ಯೆ 20ರಲ್ಲಿ ವಿವಿಧ ಅಭಿವೃದ್ಧಿ ಕಾಮ ಗಾರಿಗೆ ಚಾಲನೆ ನೀಡಲಾಯಿತು.ಈ ಒಂದು ಕಾರ್ಯಕ್ರಮದಲ್ಲಿ ಹುಡಾ ಅಧ್ಯಕ್ಷರಾದ ಶಾಕಿರ್ ಸನದಿ, ಧಾರಾವಡ ಅಂಜುನ್ ಅಧ್ಯಕ್ಷರಾದ ಇಸ್ಮಾಯಿಲ್ ,ಕಾಂಗ್ರೆಸ್ ಹಿರಿಯ ಮುಖಂಡರಾದ ದಾನಪ್ಪ ಕಬ್ಬೇರ್, ಪಾಲಿಕೆ ಸದಸ್ಯರು, ಮುಖಂಡರು ಮೊದಲಾದವರು ಇದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..