ಬೆಂಗಳೂರು –
ಸಂಜೆಯೊಳಗಾಗಿ ತೆರೆ ಬೀಳಲಿದೆ 7ನೇ ವೇತನ ಆಯೋಗಕ್ಕೆ – ನಾಳೆ 7ನೇ ವೇತನ ಆಯೋಗದ ಅವಧಿ ಮುಕ್ತಾಯ
ರಾಜ್ಯದ ಸರ್ಕಾರಿ ನೌಕರರ ವೇತನ ಹೆಚ್ಚಳ ಕುರಿತಂತೆ ರಚನೆಗೊಂಡಿರುವ 7ನೇ ವೇತನ ಆಯೋಗದ ಅವಧಿ ಮಾರ್ಚ್ 15 ಕ್ಕೆ ಮುಕ್ತಾ ಯವಾಗಲಿದೆ.ಈಗಾಗಲೇ ಎರಡು ಬಾರಿ ಈ ಒಂದು ಆಯೋಗದ ಅವಧಿಯನ್ನು ವಿಸ್ತರಣೆ ಯನ್ನು ಮಾಡಿದ್ದು ಸಧ್ಯ ಮಾರ್ಚ್ 15 ಎರಡ ನೇಯ ಅವಧಿ ಮುಕ್ತಾಯವಾಗಲಿದ್ದು ಹೀಗಾಗಿ ಈ ಒಂದು ಕುರಿತಂತೆ ಆಯೋಗದಿಂದ ವರದಿ ಯನ್ನು ತರಿಸಿಕೊಂಡು ಕೂಡಲೇ ಜಾರಿಗೆ ತರುವ ಕುರಿತಂತೆ ಒತ್ತಾಯ ಒತ್ತಡಗಳು ಕೇಳಿ ಬರುತ್ತಿದ್ದು ಸಧ್ಯ ಒಂದು ಕಡೆಗೆ ಮುಕ್ತಾಯವಾಗಿತ್ತಿರುವ 7ನೇ ವೇತನ ಆಯೋಗದ ಅವಧಿ ಮತ್ತೊಂದೆಡೆ ಲೋಕಸಭಾ ಚುನಾವಣೆಯ ನೀತಿ ಸಂಹಿತಿ ಹೀಗಾಗಿ ಎರಡು ಆತಂಕಗಳ ನಡುವೆ ಕೂಡಲೇ ಮುಖ್ಯಮಂತ್ರಿ ವರದಿಯನ್ನು ತರಿಸಿಕೊಂಡು ಜಾರಿಗೆ ತರುವಂತೆ ಒತ್ತಾಯ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಟನೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ,ಪ್ರೌಢ ಶಾಲಾ ಶಿಕ್ಷಕರ ಸಂಘ,ಗ್ರಾಮೀಣ ಶಿಕ್ಷಕರ ಸಂಘ ಸೇರಿ ದಂತೆ ಹಲವು ಸಂಘಟನೆಗಳು ಈ ಕುರಿತಂತೆ ಒತ್ತಾಯವನ್ನು ಮಾಡಿವೆ.ಏನೇ ಆಗಲಿ ಇಂದೇ ಈ ಒಂದು ಗೊಂದಲಕ್ಕೆ ತೆರೆ ಬೀಳಲಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವರದಿ ತರಿಸಿಕೊಂಡು ಜಾರಿಗೆ ತರುವ ಕುರಿತಂತೆ ಇಂಗಿತವನ್ನು ವ್ಯಕ್ತಪಡಿಸಿದ್ದು ಏನೇನಾಗಲಿದೆ ಎಂಬೊದನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರು ಕಾಯುತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..