ಬಂಟ್ವಾಳ –
ಚುನಾವಣೆಯ ಕರ್ತವ್ಯ ದಲ್ಲಿದ್ದ ಸರ್ಕಾರಿ ನೌಕರ ನಾಪತ್ತೆ – ಮೊಬೈಲ್ ಬೈಕ್ ಪತ್ತೆ ಇನ್ನೂ ಸಿಗದ ಲಕ್ಷ್ಮೀನಾರಾಯಣ ಸುಳಿವು ಹೌದು ಲೋಕಸಭಾ ಚುನಾವಣಾ ಕರ್ತವ್ಯದಲ್ಲಿರುವ ಸರಕಾರಿ ನೌಕರ ರೊಬ್ಬರು ಮಾ. 27ರ ಮಧ್ಯಾಹ್ನದಿಂದ ನಾಪತ್ತೆ ಯಾಗಿದ್ದಾರೆ.ಕರ್ತವ್ಯಕ್ಕೂ ಹಾಜರಾಗದೆ, ಮನೆಗೂ ತೆರಳದೆ ನಾಪತ್ತೆಯಾಗಿರುವ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಮ್ಟಾಡಿ ಗ್ರಾ.ಪಂ. ಕಾರ್ಯದರ್ಶಿ, ಬೆಳ್ತಂಗಡಿಯ ಕೊಲ್ಪೆದಬೈಲು ನಿವಾಸಿ ಲಕ್ಷ್ಮೀನಾರಾಯಣ ಕಾಣೆ ಯಾದ ವ್ಯಕ್ತಿ. ಅವರ ಮೊಬೈಲ್ ಫೋನ್ ಸ್ವಿಚ್ಡ್ ಆಫ್ ಬರುತ್ತಿದ್ದು, ಬಳಿಕ ಮೊಬೈಲ್ ಮತ್ತು ಬೈಕ್ ದೊರಕಿದೆ ಎನ್ನಲಾಗಿದೆ.ಎಸ್‌ಎಸ್‌ಟಿ ತಂಡದಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಮಾ. 27ರಂದು ಮಧ್ಯಾಹ್ನದ ಬಳಿಕ ಕಚೇರಿಯಿಂದ ತೆರಳಿದ್ದಾರೆ.
ಆದರೆ ಮನೆಗೆ ಹೋಗಿಲ್ಲ ಅವರ ಪತ್ನಿ ಪುಂಜಾಲ ಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಂಟ್ವಾಳ ಸಹಾಯಕ ಚುನಾವಣಾಧಿಕಾರಿಗ ಳಿಗೂ ದೂರು ನೀಡಲಾಗಿದೆ.ಪ್ರಸ್ತುತ ಅವರ ಬೈಕ್ ಹಾಗೂ ಮೊಬೈಲ್ ಬೆಳ್ತಂಗಡಿಯಲ್ಲಿ ಪತ್ತೆಯಾ ಗಿದ್ದು, ಆದರೆ ವ್ಯಕ್ತಿ ಪತ್ತೆಯಾಗಿಲ್ಲ.
ಈ ಹಿಂದೆಯೂ ಅವರು ಇದೇ ರೀತಿ ನಾಪತ್ತೆ ಯಾಗಿ ಬಳಿಕ ಪೊಲೀಸರ ಶೋಧದ ಬಳಿಕ ಪತ್ತೆಯಾಗಿದ್ದರು. ಪ್ರಸ್ತುತ ಪುಂಜಾಲಕಟ್ಟೆ ಪೊಲೀಸರು ಅವರ ಹುಡುಕಾಟದಲ್ಲಿ ತೊಡಗಿ ದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಳ್ತಂಗಡಿ…..