ಪಾವಗಡ –
ಕಾರೊಂದು ನಿಯಂತ್ರಣ ತಪ್ಪಿ ಇಬ್ಬರು ಶಿಕ್ಷಕರು ಮೃತಪಟ್ಟ ಘಟನೆ ಪಾವಗಡ ದಲ್ಲಿ ನಡೆದಿದೆ ಹೌದು ತಾಲ್ಲೂಕಿನ ರಾಜವಂತಿ ಗ್ರಾಮದ ಬಳಿ ತಡರಾತ್ರಿ ಕಾರು ಅಪಘಾತಕ್ಕೀಡಾಗಿ ಇಬ್ಬರು ಶಿಕ್ಷಕರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಒ.ಧನಂಜಯ (57)ಗೌಡೇಟಿ ಪ್ರೌಢಶಾಲೆಯ ಶಿಕ್ಷಕ ಶ್ರೀಕೃಷ್ಣ (51) ಮೃತರಾದವರಾಗಿದ್ದಾರೆ ಕೆಂಚಮ್ಮನಹಳ್ಳಿ ಗ್ರಾಮದ ಒ.ಧನಂಜಯ ಪ್ರೌಢಶಾಲೆ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ರಾಗಿದ್ದರು.
ವೀರ್ಲಗೊಂದಿಯ ಶ್ರೀಕೃಷ್ಣ ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾಗಿದ್ದರು. ಕಾರಿನಲ್ಲಿದ್ದ ಶಿಕ್ಷಕರಾದ ಆರ್.ಎಂ.ನರಸಿಂಹ (54), ವೆಂಕಟಾ ಚಲಪತಿ (56) ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸ ಲಾಗಿದೆ
ರಾತ್ರಿ ತುಮಕೂರಿನಲ್ಲಿ ವಿವಾಹವೊಂದರ ಆರತಕ್ಷತೆ ಮುಗಿಸಿಕೊಂಡು ಪಟ್ಟಣಕ್ಕೆ ಮರಳು ತ್ತಿದ್ದರು.ಕಾರು ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಸುದ್ದಿ ಸಂತೆ ನ್ಯೂಸ್ ಪಾವಗಡ…..