ದೊಡ್ಡಬಳ್ಳಾಪುರ –
ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ – ಸರ್ಕಾರಿ ಶಾಲೆಗಳಲ್ಲಿ ಕಾಡುತ್ತಿದೆ ಶಿಕ್ಷಕರ ಕೊರತೆ ಕಣ್ತೇರೆದು ನೋಡದ ಶಿಕ್ಷಣ ಸಚಿವರು ಇಲಾಖೆ
ಈಗಷ್ಟೇ ಬೇಸಿಗೆ ರಜೆಯನ್ನು ಮುಗಿಸಿಕೊಂಡು ಮಕ್ಕಳು ಶಾಲೆಯತ್ತ ಮುಖ ಮಾಡಿದ್ದು ಇನ್ನೂ ರಾಜ್ಯದ ಅದೇಷ್ಟೋ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದ್ದು ಕಾಣುತ್ತಿದೆ.ಹೌದು ನೀಗದ ಶಿಕ್ಷಕರ ಕೊರತೆ 10 ಶಾಲೆಗಳಲ್ಲಿ ಖಾಯಂ ಶಿಕ್ಷಕರೇ ಇಲ್ಲ ಇಂತಹ ಚಿತ್ರಣವೊಂದು ದೊಡ್ಡಬಳ್ಳಾಪೂರದಲ್ಲಿ ಕಂಡು ಬರುತ್ತಿದೆ
ಈಗಷ್ಟೇ ಶಾಲಾ ಪ್ರಾರಂಭೋತ್ಸವ ಅದ್ದೂರಿ ಯಾಗಿ ನಡೆದಿದ್ದು ಶಾಲೆಗಳು ಕೂಡಾ ಆರಂಭ ಗೊಂಡಿವೆ.ಆದರೆ ಶಿಕ್ಷಕರ ಕೊರತೆ ನೀಗಿಲ್ಲ ಇದರ ನಡುವೆಯೇ ಸರ್ಕಾರಿ ಶಾಲೆ ಮಕ್ಕಳಿಗೆ ಪಾಠ ಆರಂಭಗೊಂಡಿದೆ.ತಾಲ್ಲೂಕಿನಲ್ಲಿ 326 ಸರ್ಕಾರಿ ಪ್ರಾಥಮಿಕ ಹಾಗೂ 17 ಸರ್ಕಾರಿ ಪ್ರೌಢ ಶಾಲೆ ಶಾಲೆಗಳಿವೆ.2023-24ನೇ ಸಾಲಿನಲ್ಲಿ 1ರಿಂದ 7ನೇ ತರಗತಿಯ ಸರ್ಕಾರಿ ಪ್ರಾಥಮಿಕ ಶಾಲೆ ಗಳಲ್ಲಿ 12,432 ವಿದ್ಯಾರ್ಥಿಗಳು
ಹಾಗೂ 8 ರಿಂದ 10ನೇ ತರಗತಿಯ ಪ್ರೌಢ ಶಾಲೆಯಲ್ಲಿ 4,741 ವಿದ್ಯಾರ್ಥಿಗಳು ಕಲಿಯು ತ್ತಿದ್ದಾರೆ. ಆದರೆ ಇಷ್ಟು ವಿದ್ಯಾರ್ಥಿಗಳಿಗೆ ಇರು ವುದು ಸಾವಿರ ಶಿಕ್ಷಕರು ಇರಬೇಕಿತ್ತು.ಆದರೆ ಇರುವುದು 800 ಶಿಕ್ಷಕರು ಮಾತ್ರ.100 ಶಿಕ್ಷಕರ ನೇಮಕವಾಗಿಲ್ಲ.ತಾಲ್ಲೂಕಿನ ಸಾಸಲು ಹಾಗೂ ತೂಬಗೆರೆ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಈ ಹಿಂದಿನಿಂದಲೂ ಇದೆ.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯನ್ನು ಪ್ರಥಮ ಆದ್ಯತೆಯ ಮೇರೆಗೆ ನೀಗಿಸಲು ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿ ದ್ದಾರೆ.ತಾಲ್ಲೂಕು ಕೇಂದ್ರದಿಂದ ದೂರ ಇರುವ ಹೋಬಳಿ ಹಾಗೂ ಸಾರಿಗೆ ಸೌಲಭ್ಯಗಳ ಕೊರತೆ ಯಿಂದ ಈ ಭಾಗದ ಶಾಲೆಗಳಿಗೆ ಶಿಕ್ಷಕರು ಬರಲು ಹಿಂಜರಿಯುತ್ತಿದ್ದಾರೆ. ಈ ಎರಡೂ ಹೋಬಳಿ ಯಲ್ಲೇ ಆರ್ಥಿಕವಾಗಿ ಹಿಂದುಳಿದ ಕುಂಟುಂಬ ಗಳು ಹೆಚ್ಚಾಗಿವೆ.
ಹೀಗಾಗಿ ಇಲ್ಲಿನ ಮಕ್ಕಳಿಗೆ ಶೈಕ್ಷಣಿಕವಾಗಿ ಶಕ್ತಿ ತುಂಬಬೇಕು ಎಂದು ಸಾಸಲು ಹೋಬಳಿಯ ಹೊಸಕೋಟೆ ಗ್ರಾಮದ ಮಲ್ಲಯ್ಯ ಒತ್ತಾಯಿಸಿ ದ್ದಾರೆ.ಜಿಲ್ಲಾ ಉಸ್ತುವಾರಿ ಸಚಿವರು ಆಯ್ಕೆಯಾ ಗಿರುವ ದೇವನಹಳ್ಳಿ ವಿಧಾನ ಸಭಾ ಕ್ಷೇತ್ರಕ್ಕೆ ಸೇರಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಸರ್ಕಾರಿ ಶಾಲೆಗಲ್ಲಿಯೇ ಶಿಕ್ಷಕರ ಕೊರತೆ ಇದೆ.
ಈ ಹೋಬಳಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕುಟುಂಬಗಳ ಸಂಖ್ಯೆಯೇ ಹೆಚ್ಚಾಗಿದೆ. ಸಚಿವರು ತುರ್ತು ಗಮನ ವಹಿಸುವ ಮೂಲಕ 2024-25ನೇ ಶೈಕ್ಷಣಿಕ ವರ್ಷದಲ್ಲೇ ಅಗತ್ಯ ಇರುವ ಶಿಕ್ಷಕರ ನೇಮಕಾತಿ ಮಾಡಬೇಕು ಎಂದು ತೂಬಗೆರೆ ಹೋಬಳಿ ಸರ್ಕಾರಿ ಶಾಲೆಗಳ ಮಕ್ಕಳ ಪೋಷಕರು ಮನವಿ ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ದೊಡ್ಡಬಳ್ಳಾಪುರ……