ಬೆಂಗಳೂರು –
ಸರ್ಕಾರಿ ನೌಕರರ ಚಿತ್ತ ಇಂದಿನ ಸಚಿವ ಸಂಪುಟದತ್ತ – ಇವತ್ತಾದರೂ ಸಚಿವ ಸಂಪುಟದಲ್ಲಿ ಚರ್ಚೆಯಾಗಿ 7ನೇ ವೇತನ ಆಯೋಗವನ್ನು ಜಾರಿಗೆ ಮಾಡಲಿ ಬೂದನೂರು ಮಹೇಶ್ ಮಂಡ್ಯ ನೇತ್ರತ್ವದಲ್ಲಿನ ಷಡಾಕ್ಷರಿಯವರ ಅಭಿಮಾನಿಗಳ ಬಳಗ ಒತ್ತಾಯ ಹೌದು
ರಾಜ್ಯ ಸರ್ಕಾರಿ ನೌಕರರ ಬಹು ನಿರೀಕ್ಷಿತ 7ನೇ ವೇತನ ಆಯೋಗ ಜಾರಿಗೆ ಇನ್ನೂ ಕಾಲ ಕೂಡಿ ಬರುತ್ತಿಲ್ಲ.ಈಗಾಗಲೇ ಈ ಒಂದು ಆಯೋಗದ ವರದಿಯನ್ನು ಸಮಿತಿಯೂ ರಾಜ್ಯ ಸರ್ಕಾರಕ್ಕೆ ಒಪ್ಪಿಸಿದ್ದು ಇನ್ನೂ ಕೂಡಾ ಜಾರಿಗೆ ಬರುತ್ತಿಲ್ಲ. ಕಳೆದ ವಾರವಷ್ಟೇ ಈ ಒಂದು ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿ ಜಾರಿಗೆ ತರಲಾಗುತ್ತದೆ ಎಂದುಕೊಳ್ಳಲಾಗಿತ್ತು ಈ ಒಂದು ನಿರೀಕ್ಷೆಯನ್ನು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಕೂಡಾ ಇಟ್ಟುಕೊಂಡಿದ್ದರು.
ಆದರೆ ಸಚಿವ ಸಂಪುಟದ ಸಭೆಯಲ್ಲಿ ಈ ಒಂದು ಕುರಿತಂತೆ ಯಾವುದೇ ಚರ್ಚೆಯಾಗಲಿಲ್ಲ ಹೀಗಾಗಿ ರಾಜ್ಯದ ಸರ್ಕಾರಿ ನೌಕರರ ಬೇಸರ ಗೊಂಡಿದ್ದು ಸಧ್ಯ ಇಂದು ಮತ್ತೆ ಸಚಿವ ಸಂಪುಟ ಸಭೆ ನಡೆಯಲಿದೆ.ಬೆಂಗಳೂರಿನ ವಿಧಾನ ಸೌಧದ ಸಚಿವ ಸಂಪುಟದ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತ್ರತ್ವದಲ್ಲಿ ಈ ಒಂದು ಸಚಿವ ಸಂಪುಟ ಸಭೆ ನಡೆಯಲಿದೆ
ಇವತ್ತಾದರೂ ಈ ಒಂದು ಸಭೆಯಲ್ಲಿ 7ನೇ ವೇತನ ಆಯೋಗದ ವರದಿ ಕುರಿತಂತೆ ಚರ್ಚೆ ಯನ್ನು ಮಾಡಿ ಕೂಡಲೇ ಅನುಷ್ಠಾನ ಮಾಡಲಿ ಇದರೊಂದಿಗೆ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರವು ಸಿಹಿ ಸುದ್ದಿಯನ್ನು ನೀಡಲಿ ಎಂಬ ನಿರೀಕ್ಷೆಯನ್ನು ರಾಜ್ಯದ ಸರ್ಕಾರಿ ನೌಕರರು ಇಟ್ಟುಕೊಂಡಿದ್ದಾರೆ.
ಇತ್ತ ಈ ಒಂದು ವಿಚಾರ ಕುರಿತಂತೆ ರಾಜ್ಯ ಸರ್ಕಾರಿ ನೌಕರರ ರಾಜ್ಯಾಧ್ಯಕ್ಷ ಸಿ ಎಸ್ ಷಡಾಕ್ಷರಿಯವರ ಅಭಿಮಾನಿಗಳ ಸಂಘವು ಕೂಡಾ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಅಭಿಮಾನಿ ಬಳಗದ ಸಂಚಾಲಕ ಬೂದನೂರು ಮಹೇಶ್ ಮಂಡ್ಯ ನೇತ್ರತ್ವದಲ್ಲಿನ ಷಡಾಕ್ಷರಿಯವರ ಅಭಿಮಾನಿಗಳ ಬಳಗದ ಸರ್ವ ಸದಸ್ಯರ ಪರವಾಗಿ ಒತ್ತಾಯವನ್ನು ಮಾಡಿದ್ದಾರೆ.
ಸದಾ ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಒಂದಿಲ್ಲೊಂದು ವಿಚಾರದಲ್ಲಿ ಧ್ವನಿ ಎತ್ತುತ್ತಿರುವ ಅಭಿಮಾನಿ ಬಳಗದ ಸಂಚಾಲಕ ಬೂದನೂರು ಮಹೇಶ್ ಮಂಡ್ಯ ನೇತ್ರತ್ವದಲ್ಲಿ ಬಳಗವು ಸಧ್ಯ 7ನೇ ವೇತನ ಆಯೋಗದ ವಿಚಾರದಲ್ಲಿ ಮತ್ತೆ ಒತ್ತಾಯವನ್ನು ಮಾಡಿದ್ದ ಇದರೊಂದಿಗೆ ಇಂದಿನ ಸಂಪುಟದಲ್ಲಿ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಸಿಗಲಿ ಎಂದು ಆಗ್ರಹವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..