ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಹಸಿರುಕರಣಗೊಳಿಸಲು ಪಾಲಿಕೆ ಆಯುಕ್ತರ ಮಾಸ್ಟರ್ ಪ್ಲಾನ್ – ಮೊದಲ ಹಂತದಲ್ಲಿ ನೆಡಲಿವೆ 25 ಸಾವಿರ ಸಸಿಗಳು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯ ವರ ಪ್ಲಾನ್ ಗೆ ಪತ್ರ ಬರೆದ ಹೊಸ ಮೇಯರ್
ಸದಾ ಒಂದಲ್ಲ ಒಂದು ವಿಶೇಷವಾದ ಕಾರ್ಯ ಕ್ರಮಗಳ ಮೂಲಕ ರಾಜ್ಯದ ಎರಡನೇಯ ಮಹಾನಗರ ಪಾಲಿಕೆ ಎಂದೇ ಗುರುತಿಸಿಕೊಂಡಿ ರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಸಧ್ಯ ಮತ್ತೊಂದು ಮಹಾನ್ ಕಾರ್ಯಕ್ಕೆ ಕೈ ಹಾಕಿದ್ದಾರೆ.ಬೇರೆ ಬೇರೆ ಕಾರಣಗಳಿಂದಾಗಿ ಅಭಿವೃದ್ದಿಯ ನೆಪದಲ್ಲಿ ಮಾರಣಹೋಮವಾ ಗಿರುವ ಗಿಡ ಮರಗಳನ್ನು ಮರಳಿ ಹಸಿರುಕರಣ ದೊಂದಿಗೆ ಅವಳಿ ನಗರವನ್ನು ಮತ್ತೆ ಸುಂದರಿ ಕರಣಗೊಳಿಸಲು ಮುಂದಾಗಿದ್ದಾರೆ.
ಈಗಾಗಗೇ ಈ ಒಂದು ಕುರಿತಂತೆ ಸಮಗ್ರವಾದ ರೂಪರೇಷೆಯನ್ನು ಮಾಡಿದ್ದ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ಯೋಜನೆಯನ್ನು ಶೀಘ್ರದಲ್ಲೇ ಅನುಷ್ಠಾನಗೊಳಿಸಲು ಸಿದ್ದತೆ ಯನ್ನು ಮಾಡಿಕೊಂಡಿದ್ದಾರೆ.ಇದಕ್ಕಾಗಿ ಈಗಾಗಲೇ ಔಷಧೀಯ ಸಸ್ಯಗಳು,ಹಣ್ಣು ಹಂಪಲದ ಮರಗಳು,ಸೇರಿದಂತೆ ಬೇರೆ ಬೇರೆ ಗಿಡ ಮರಗಳನ್ನು ಅರಣ್ಯ ಇಲಾಖೆಯಲ್ಲಿ ಬೆಳೆಸಲಾಗಿದ್ದು
ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹುಬ್ಬಳ್ಳಿ ಧಾರವಾಡದಲ್ಲಿ ಶೀಘ್ರದಲ್ಲೇ 25 ಸಾವಿರ ಮರ ಗಿಡಗಳು ನೆಡಲಿದ್ದು ಇದರೊಂದಿಗೆ ಅವಳಿ ನಗರದ ಸಂಪೂರ್ಣವಾಗಿ ಹಸಿರುಕರಣವಾಗ. ಲಿದ್ದು ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆ ಕಚೇರಿಯ ಕೆಲಸ ಅಷ್ಟೇ ಅಲ್ಲದೇ ಅಧಿಕಾರಿ ಗಳಿಗೆ ಸಾಮಾಜಿಕ ಜವಾಬ್ದಾರಿ ಹೇಗಿರಬೇಕು ಎಂಬೊದನ್ನು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರು ತೋರಿಿಸಲ ಮುಂದಾಗಿ ದ್ದಾರೆ.
ಇದರೊಂದಿಗೆ ತೋರಿಸಿಕೊಡುತ್ತಿದ್ದು ಈ ಒಂದು ಮಾತಿಗೆ ಈಗಷ್ಟೇ ಹೊಸದಾಗಿ ಅಧಿಕಾರವನ್ನು ವಹಿಸಿಕೊಂಡಿರುವ ಪಾಲಿಕೆಯ ಮೇಯರ್ ರಾಮಣ್ಣ ಬಡಿಗೇರ ರವರು ಪತ್ರವನ್ನು ಬರೆದು ಆಯುಕ್ತರ ಪ್ಲಾನ್ ನ್ನು ಅನುಷ್ಠಾನಗೊಳಿಸಲು ಮುಂದಾಗಿದ್ದು ಪರಿಸರ ಪ್ರೇಮಿಗಳು ಇದರೊಂ ದಿಗೆ ಸಂತಸಗೊಳ್ಳುವಂತಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..