ಧಾರವಾಡ –
ಗಟಾರ ಮಾಡಾಕ ತೆಗ್ಗು ತಗೆದು ಹೋಗ್ಯಾರ ಒಳ್ಳಿ ಬಂದಿಲ್ಲಾ – ಹೇಳೊರಿಲ್ಲ ಕೇಳೊರಿಲ್ಲ…..ಜಿಟಿ ಜಿಟಿ ಮಳೆಯಾಗ ಜನರ ಪರದಾಟ…..ಮಾನ್ಯ ಪಾಲಿಕೆಯ ಆಯುಕ್ತರೇ ಒಮ್ಮೆ ನೋಡಿ…..
ಸರ್ಕಾರದ ಕೆಲಸ ದೇವರ ಕೆಲಸ ಎಂದುಕೊಂಡು ಅಧಿಕಾರಿಗಳು ಸರಿಯಾಗಿ ಕೆಲಸ ಕಾರ್ಯಗಳನ್ನು ಮಾಡಿದರೆ ಎಲ್ಲವೂ ಸರಿಯಾಗಿರುತ್ತವೆ.ಆದರೆ ನಮ್ಮ ಅಧಿಕಾರಿಗಳು ಮಾಡೊದೆ ಬೇರೆ ಹೌದು ಇದಕ್ಕೆ ಪ್ರತಿದಿನ ನೂರಾರು ಸಮಸ್ಯೆಗಳನ್ನು ಒತ್ತುಕೊಂಡು ಸುತ್ತಾಡುತ್ತಿರುವ ಜನರೇ ಸಾಕ್ಷಿಯಾಗಿದ್ದು ಮತ್ತೊಂದು ತಾಜಾ ಉದಾಹರಣೆ ಧಾರವಾಡದ ಹೊಸ ಬಸ್ ನಿಲ್ದಾಣದ ಹಿಂದೆ ಇರುವ ರಸ್ತೆಯಲ್ಲಿನ ಚಿತ್ರಣ.
ಹೊಸ ಬಸ್ ನಿಲ್ದಾಣದ ಹಿಂದೆ ಸ್ಮಶಾನ ರುದ್ರಭೂಮಿ ಗೆ ಹತ್ತಿಕೊಂಡು ಇತ್ತೀಚಿಗಷ್ಟೇ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯನ್ನು ಮಾಡಲಾಗಿದೆ. ರಸ್ತೆ ಆಯಿತು ಅಂದುಕೊಂಡು ಇದರ ಮೇಲೆ ತಿರುಗಾ ಡುತ್ತಿದ್ದ ಇಲ್ಲಿನ ನಿವಾಸಿಗಳಿಗೆ ಜನರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.ರಸ್ತೆ ಪಕ್ಕದಲ್ಲಿಯೇ ಚರಂಡಿ ಮಾಡುತ್ತೇವೆ ಎಂದು ತೆಗ್ಗು ತಗೆದು ಮಣ್ಣನ್ನು ರಸ್ತೆ ಮೇಲೆ ಹಾಕಿದ್ದಾರೆ
ಹೀಗೆ ತೆಗ್ಗು ತಗೆದು ಹದಿನೈದು ದಿನಗಳೇ ಕಳೆದಿವೆ ಆದರೂ ಕೂಡಾ ಈವರೆಗೆ ಚರಂಡಿ ಮಾಡುತ್ತೇವ ಎಂದು ಹೇಳಿ ತೆಗ್ಗು ತಗೆಸಿದವರು ಇಲ್ಲ ಮಣ್ಣು ಹಾಕಿದವರು ಇಲ್ಲ ಹೀಗಾಗಿ ಜಿಟಿ ಜಿಟಿ ಮಳೆ ಒಂದು ಕಡೆಯಾದರೆ ರಸ್ತೆ ತುಂಬೆಲ್ಲಾ ಮಣ್ಣು ಬಿದ್ದು ಸಂಪೂ ರ್ಣವಾಗಿ ಅಸ್ಥವ್ಯಸ್ಥತೆ ಉಂಟಾಗಿದ್ದು ಕಾಮಗಾರಿಯನ್ನು ನೀಡಿದವರು ನೋಡುತ್ತಿಲ್ಲ ಕಾಮಗಾರಿ ತಗೆದುಕೊಂಡ ವರು ಬರುತ್ತಿಲ್ಲ
ಜನರು ಮಾತ್ರ ಸಮಸ್ಯೆಯನ್ನು ಅನುಭವಿಸುತ್ತಿದ್ದು ಇತ್ತ ಮಹಾನಗರ ಪಾಲಿಕೆಯ ಅಧಿಕಾರಿಗಳು ಕಂಡು ಕಾಣ ದಂತೆ ಇದ್ದಾರೆ ನೋಡಿ ನೋಡಲಾರದಂತೆ ಇದ್ದಾರೆ. ಇದೇನಾ ಅಧಿಕಾರಿಗಳ ಆಡಳಿತ ವ್ಯವಸ್ಥೆ ಎನ್ನುತ್ತಾ ಹಿಡಿಶಾಪ ಹಾಕುತ್ತಾ ಇಲ್ಲಿನ ನಿವಾಸಿಗಳು ಎನ್ನುತ್ತಾ ತಿರುಗಾಡುತ್ತಿದ್ದು ಇನ್ನಾದರೂ ಆಡಳಿತದಲ್ಲಿ ದಕ್ಷತೆ ಎಂದು ಹೆಸರಾಗಿರುವ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರಾದರೂ ಇತ್ತ ಒಮ್ಮೆ ನೋಡುತ್ತಾ ವರೆನಾ ಸಮಸ್ಯೆಗೆ ಮುಕ್ತಿ ನೀಡುತ್ತಾರೆಯಾ ಎಂಬೊ ದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..