ಕಲಬುರ್ಗಿ –
ಗ್ರಾಮ ಪಂಚಾಯತಿ ರಾಜಕೀಯ ಜಗಳದಲ್ಲಿ ಕಲಬುರಗಿಯಲ್ಲಿ ನಡೆದ ನಾಲ್ಕು ವರ್ಷದ ಮಗು ಸಾವಿಗೀಡಾದ ಪ್ರಕರಣ ಕುರಿತು ಜೇವರ್ಗಿ ಪಿ ಎಸ್ ಐ ಮಂಜುನಾಥ್ ಹೂಗಾರ ಅವರನ್ನು ಅಮಾನತ್ತು ಮಾಡಲಾಗಿದೆ.
ಅಮಾನತ್ತು ಮಾಡಿ ಕಲಬುರಗಿ ಎಸ್ ಪಿ ಆದೇಶ ಹೊರಡಿಸಿದ್ದಾರೆ.ಎಸ್ ಪಿ ಸಿಮಿ ಮರಿಯಮ್ ಜಾರ್ಜ್ ರಿಂದ ಆದೇಶ ಹೊರಡಿಸಲಾಗಿದೆ.ಜೇವರ್ಗಿ ತಾಲ್ಲೂಕಿನ ಜೈನಾಪುರ ಗ್ರಾಮದ ನಾಲ್ಕು ಭಾರತಿ ಸಾವನ್ನಪ್ಪಿದ ಮಗುವಾಗಿತ್ತು.ಬಾಲಕಿಯ ಶವವಿಟ್ಟು ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ನಾಯಕರ ಹೋರಾಟಕ್ಕೆ ಮಣಿದು ಕೊನೆಗೂ PSI ಅವರನ್ನು ಅಮಾನತು ಮಾಡಲಾಗಿದೆ.
ಗ್ರಾಪಂ ಮತ ಎಣಿಕೆ ದಿನ ಜೈನಾಪೂರದಲ್ಲಿ ರಾಜಕೀಯ ಸಂಘರ್ಷ ಸಂಭವಿಸಿತ್ತು. ಘಟನೆಗೆ ಸಂಬಂಧಿಸಿದಂತೆ ಜೇವರ್ಗಿ ಠಾಣೆ ಜೇವರ್ಗಿ ಪೊಲೀಸರು 10 ಜನರನ್ನು ಬಂಧಿಸಿದ್ದರು. ಪೊಲೀಸ್ ಠಾಣೆಯಲ್ಲಿ ಸಂಗೀತ ಎಂಬ ಮಹಿಳೆಯ ಮತ್ತು ಆಕೆಯ 3 ವರ್ಷದ ಮಗುವನ್ನು ಕೂಡಾ ಠಾಣೆಗೆ ಕರೆ ತಂದು ಆಕೆಯ ಮೇಲೆ ಪೊಲೀಸ್ ರು ಹಲ್ಲೆ ನಡೆಸಿದ್ದರು ಅಂತ ಕುಟುಂಬಸ್ಥರು ಆರೋಪ ಮಾಡಿದ್ದರು.
ಠಾಣೆಯಲ್ಲಿ ವಿಚಾರಣೆ ಮಾಡುವ ಸಂದರ್ಭದಲ್ಲಿ ಗಾಯಗೊಂಡಿದ್ದ ಮಗುವನ್ನೂ ಸಹ ತಾಯಿಯೊಂದಿಗೆ ಕಲ್ಬುರ್ಗಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತ್ತು.ಆದ್ರೆ ತೀವ್ರ ಅಸ್ವಸ್ಥಗೊಂಡ ಮಗುವನ್ನು ಸಾವಿಗೀಡಾಗಿತ್ತು. ನಾಲ್ಕು ವರ್ಷದ ಮಗು ಭಾರತಿ ಸಾವನ್ನೊಪ್ಪಿದೆ. ಜೇವರ್ಗಿ ಪೊಲೀಸರ ಹಲ್ಲೆಯಿಂದಲೇ ಮಗು ಮೃತಪಟ್ಟಿದೆ ಅಂತ ಮಗುವಿನ ಪೋಷಕರು ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿದ್ದರು ಅಲ್ಲದೇ ಕಾಂಗ್ರೆಸ್ ಪಕ್ಷದ ಶಾಸಕ ಡಾ ಅಜಯ್ ಸಿಂಗ್ ನೇತೃತ್ವದಲ್ಲಿ ನಿನ್ನೆ ಬೆಳಗ್ಗೆಯಿಂದ ತಡರಾತ್ರಿವರೆಗೆ ಜಿಲ್ಲಾಸ್ಪತ್ರೆ ಸರ್ಕಲ್‌ನಲ್ಲಿ ಬಾಲಕಿಯ ಶವವಿಟ್ಟು ಪ್ರತಿಭಟನೆ ನಡೆಸಿತ್ತು.
ಪ್ರತಿಭಟನೆಯಲ್ಲಿ ಜೇವರ್ಗಿ ಶಾಸಕ ಡಾ ಅಜಯ್‌ಸಿಂಗ್, ಪಿಎಸ್‌ಐ ಮಂಜುನಾಥ ಹೂಗಾರರನ್ನ ಸಸ್ಪೆಂಡ್ ಮಾಡಬೇಕು ಅಂತಾ ಆಗ್ರಹಿಸಿದ್ದರು.
ಆದರೆ 24 ಗಂಟೆಗಳಲ್ಲಿ ಸಸ್ಪೆಂಡ್ ಮಾಡುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮನವಿ ಮೆರೆಗೆ ಪ್ರತಿಭಟನೆ ವಾಪಾಸ್ ಪಡೆದು ಜೈನಾಪುರ ಗ್ರಾಮದಲ್ಲಿ ಬಾಲಕಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇದೀಗ ಪೋಷಕರ ಮತ್ತು ಕಾಂಗ್ರೆಸ್ ಪಕ್ಷದ ಬೇಡಿಕೆಗೆ ಸರ್ಕಾರ ಮಣಿದು ಪಿಎಸ್‌ಐ ಮಂಜುನಾಥ ಹೂಗಾರ್‌ರನ್ನ ಅಮಾನತು ಮಾಡಿ ಎಸ್ಪಿ ಆದೇಶ ಹೊರಡಿಸಿದ್ದಾರೆ.