ಬೆಂಗಳೂರು –
7ನೇ ವೇತನ ಆಯೋಗದ ಜಾರಿ ಬೆನ್ನಲ್ಲೇ ಮಹತ್ವದ ಸಭೆ ಕರೆದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು – ತೀವ್ರ ಕುತುಹಲ ಕೆರಳಿಸಿದ ಸಭೆ ಆ ಎರಡು ವಿಚಾರಗಳ ಕುರಿತಂತೆ ತಗೆದುಕೊಳ್ಳ. ಲಿದ್ದಾರೆ ನಿರ್ಧಾರ ಹೌದು
ರಾಜ್ಯದ ಸಮಸ್ತ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ 7ನೇ ವೇತನ ಆಯೋಗವನ್ನು ಈಗಾಗಲೇ ನೀಡಿ ಗುಡ್ ನ್ಯೂಸ್ ನ್ನು ನೀಡಿದೆ ನೌಕರರ ಮೂರು ಪ್ರಮುಖ ಬೇಡಿಕೆಗಳಲ್ಲಿ ಇನ್ನೂ ಎರಡು ಬೇಡಿಕೆಗಳು ಬಾಕಿ ಇವೆ.ಹೀಗಾಗಿ ಸಧ್ಯ ಇದರ ನಡುವೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಮತ್ತೊಂದು ತುರ್ತು ಸಭೆಯನ್ನು ಕರೆದಿದ್ದಾರೆ.
ಹೌದು ಇಷ್ಟೇಲ್ಲದರ ನಡುವೆ ಸಧ್ಯ ಜುಲೈ 23 ರಂದು ಸಭೆಯನ್ನು ಆಹ್ವಾನ ಮಾಡಿದ್ದಾರೆ. ಏಳನೇ ವೇತನ ಆಯೋಗದ ಶಿಫಾರಸುಗಳ ಜಾರಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ ಬೆನ್ನಲ್ಲೇ ಇತರ ಬೇಡಿಕೆಗಳ ಈಡೇರಿಕೆಗಾಗಿ ಸಭೆಯನ್ನು ಕರೆದಿದ್ದು ನೌಕರರ ಸಂಘವು ಜುಲೈ 23ರಂದು ಪ್ರಮುಖರ ಸಭೆಯನ್ನು ನಡೆಸಲು ತೀರ್ಮಾನಿಸಿದೆ.“ಹಳೇ ಪಿಂಚಣಿ ಯೋಜನೆ, ನೌಕರರಿಗೆ ಆರೋಗ್ಯ ಯೋಜನೆ ಸೇರಿ ಹಲವು ಬೇಡಿಕೆಗಳ ಈಡೇರಿಕೆ ಬಾಕಿ ಇದೆ.
ಇಷ್ಟೆಲ್ಲ ವಿಚಾರಗಳ ಕುರಿತು ಚರ್ಚಿಸಲು ರಾಜ್ಯದ ಸರ್ಕಾರಿ ನೌಕರರ ಸಂಘಗಳ ಎಲ್ಲ ವೃಂದಗಳು, ರಾಜ್ಯ ಕೇಡರ್ ಅಸೋಸಿಯೇಷನ್ ಹಾಗೂ ಎಕ್ಸಿಕ್ಯೂಟಿವ್ ಸಭೆಯನ್ನು ಜುಲೈ 23ರಂದು ಕರೆಯಲಾಗಿದೆ. ಸಭೆಯಲ್ಲಿ ಎಲ್ಲಾ ವಿಷಯಗಳ ಕುರಿತು ಚರ್ಚಿಸಿ ಅಂತಿಮ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಸಿ.ಎಸ್.ಷಡಾಕ್ಷರಿ ಮಾಹಿತಿ ನೀಡಿದ್ದು
ಹೀಗಾಗಿ ಅಂದು ನಡೆಯಲಿರುವ ಸಭೆಯಲ್ಲಿ ಯಾವ ಯಾವ ನಿರ್ಧಾರಗಳನ್ನು ತಗೆದುಕೊಳ್ಳಲಿ ದ್ದಾರೆ ಮುಂದೆ ಎರಡು ಇನ್ನೂ ಬೇಡಿಕೆಗಳಿಗೆ ರಾಜ್ಯ ಸರ್ಕಾರಕ್ಕೆ ಗಡುವು ನೀಡುತ್ತಾರೆಯೇ ಅಥವಾ ಇನ್ನೇನು ತೀರ್ಮಾನವನ್ನು ತಗೆದು ಕೊಳ್ಳಲಿದ್ದಾರೆ ಎಂಬೊದನ್ನು ಕಾದು ನೋಡ ಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..