ಬೆಂಗಳೂರು –
ಮತ್ತೊಂದು ಹೋರಾಟಕ್ಕೆ ಸಿದ್ದಗೊಂಡ ರಾಜ್ಯದ ಪ್ರಾಥಮಿಕ ಶಾಲಾ ಶಿಕ್ಷಕರು – ಬಡ್ತಿಯಲ್ಲಿನ ಅನ್ಯಾಯದ ವಿರುದ್ದ ನಡೆಯಲಿದೆ ರಾಜ್ಯದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರಿಂದ ಹೋರಾಟ
ದೊಡ್ಡ ಪ್ರಮಾಣದಲ್ಲಿನ ಹೋರಾಟಕ್ಕೆ ರಾಜ್ಯದ ಪ್ರಾಥಮಿಕ ಸರ್ಕಾರಿ ಶಾಲೆಯ ಶಿಕ್ಷಕರು ಸಿದ್ದರಾ ಗಿದ್ದಾರೆ.ಹೌದು ವೃಂದ ಮತ್ತು ನೇಮಕ ನಿಯಮದ ಪೂರ್ವಾನ್ವಯ ಜಾರಿ ನಿರ್ಧಾರ ರಾಜ್ಯದ ಲಕ್ಷಕ್ಕೂ ಹೆಚ್ಚು ಪ್ರಾಥಮಿಕ ಶಾಲಾ ಶಿಕ್ಷಕರ (ಪಿಎಸ್ಟಿ) ಭವಿಷ್ಯವನ್ನೇ ಬುಡಮೇಲು ಮಾಡಿದೆ.ವಿದ್ಯಾರ್ಹತೆ ಪರಿಗಣಿಸದೆ ವಿಷಯ. ವಾರು ವರ್ಗಾವಣೆ ಬಡ್ತಿಯಲ್ಲಿ ಆಗುತ್ತಿರುವ ಅನ್ಯಾಯದಿಂದಾಗಿ
1.11 ಲಕ್ಷ ಶಿಕ್ಷಕರ ಸ್ಥಿತಿ ಡೋಲಾಯಮಾನ ವಾಗಿದೆ ಈ ಒಂದು ವಿಚಾರ ಕುರಿತಂತೆ ಕಳೆದ ಹಲವಾರು ವರ್ಷಗಳಿಂದ ಧ್ವನಿ ಎತ್ತುತ್ತಾ ಬಂದರು ಕೂಡಾ ಯಾರು ಸ್ಪಂದಿಸುತ್ತಿಲ್ಲ ಕಣ್ತೇರೆದು ನೋಡುತ್ತಿಲ್ಲಿ ಹೀಗಾಗಿ ಈ ಒಂದು ಅನ್ಯಾಯದ ವಿರುದ್ದ ಬೇಸತ್ತಿರುವ ರಾಜ್ಯದ ಶಿಕ್ಷಕರು ಸಧ್ಯ ದೊಡ್ಡ ಪ್ರಮಾಣದ ಹೋರಾಟಕ್ಕೆ ಸಿದ್ದರಾಗಿದ್ದಾರೆ.ಈ ಪರಿಸ್ಥಿತಿ ವಿರುದ್ಧ ಸಿಡಿದೆದ್ದಿ ರುವ ಶಿಕ್ಷಕರು ಮತ್ತೊಂದು ಸುತ್ತಿನ ಹೋರಾಟಕ್ಕೆ ಕಹಳೆ ಮೊಳಗಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 80, 000 ಪಿಎಸ್ಟಿ ಶಿಕ್ಷಕರು ಬಿ.ಎ, ಬಿ.ಎಸ್ಸಿ, ಬಿ.ಎಡ್, ಎಂ.ಎ, ಎಂ.ಎಸ್ಸಿ, ಎಂ.ಎಡ್, ಎಂ.ಫಿಲ್, ಪಿ.ಎಚ್.ಡಿ ಪದವಿ ಪಡೆದಿದ್ದಾರೆ. ಆದರೂ ಇವರಿಗೆ ಬಡ್ತಿ ನೀಡುವ ಬದಲು ಹಿಂಬಡ್ತಿ ನೀಡಲಾಗಿದೆ ಹೀಗಾಗಿ ಆಗಸ್ಟ್ 12 ರಿಂದ ರಾಜ್ಯದ ಶಿಕ್ಷಕರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೇತ್ರತ್ವದಲ್ಲಿ ಹೋರಾಟವನ್ನು ಆರಂಭ ಮಾಡಲಿ ದ್ದಾರೆ.
ಬೆಂಗಳೂರಿನ ಪ್ರೀಡಂ ಪಾರ್ಕ್ ಈ ಒಂದು ಹೋರಾಟ ನಡೆಯಲಿದ್ದು ಶಕ್ತಿ ಪ್ರದರ್ಶನದ ಮೂಲಕ ರಾಜ್ಯದ ಸರ್ಕಾರಿ ಶಾಲೆಯ ಶಿಕ್ಷಕರು ತಮಗೆ ಆಗುತ್ತಿರುವ ಅನ್ನಾಯದ ಬೀದಿಗಿಳಿ ಯಲಿದ್ದು ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಈ ಒಂದು ಹೋರಾಟದಲ್ಲಿ ಪಾಲ್ಗೊಂಡು ರಾಜ್ಯದ ಮಟ್ಟದ ಬೃಹತ್ ಹೋರಾಟಕ್ಕೆ ಶಕ್ತಿಯನ್ನು ತುಂಬಲಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು ……