ಹುಬ್ಬಳ್ಳಿ –
ಸಾರ್ವಜನಿಕರ ಮತ್ತೊಂದು ಸಮಸ್ಯೆ ಕುರಿತಂತೆ ಪಾಲಿಕೆಯ ಆಯುಕ್ತರೊಂದಿಗೆ ಮಾತನಾಡಿದ ರಾಜು ನಾಯಕವಾಡಿ – ಅಧಿಕಾರಿ ಇರಲಿ ಇಲ್ಲದಿರಲಿ ಹಗಲಿರುಳು ಸಾರ್ವಜನಿಕರ ಸಮಸ್ಯೆ ಕುರಿತಂತೆ ಧ್ವನಿ ಎತ್ತುತ್ತಿರುವ ಯುವ ನಾಯಕ
ಅಧಿಕಾರ ಇರಲಿ ಇಲ್ಲದಿರಲಿ ಸಾರ್ವಜನಿಕರ ಯಾವುದೇ ಸಮಸ್ಯೆ ಗಮನಕ್ಕೆ ಬಂದರೆ ಸಾಕು ಕೂಡಲೇ ಸಂಬಂಧಿಸಿದವರಿಗೆ ಮಾತನಾಡಿ ಸಮಸ್ಯೆ ಪರಿಹಾರ ಕುರಿತಂತೆ ಧ್ವನಿ ಎತ್ತುತ್ತಾರೆ ಯುವ ಮುಖಂಡ ರಾಜು ನಾಯಕವಾಡಿ.ಹೌದು ಸದಾ ಒಂದಿಲ್ಲೊಂದು ಸಾರ್ವಜನಿಕರ ಸಮಸ್ಯೆ ಕುರಿತಂತೆ ಹಗಲಿರುಳು ಪ್ರಶ್ನೆ ಮಾಡುತ್ತಿರುವ ರಾಜು ನಾಯಕವಾಡಿ ಯವರು ಹುಬ್ಬಳ್ಳಿ ಧಾರವಾಡ ಜನತೆಯ ಧ್ವನಿಯಾಗಿದ್ದಾರೆ.
ಹೌದು ಇದಕ್ಕೆ ಸಾಕ್ಷಿ ವಾರ್ಡ್ 54 ರಲ್ಲಿ ಹದಗೆಟ್ಟಿರುವ ರಸ್ತೆಯ ಕುರಿತಂತೆ ಪಾಲಿಕೆಯ ಆಯುಕ್ತರ ಗಮನಕ್ಕೆ ತಗೆದುಕೊಂಡು ಬಂದಿ ದ್ದಾರೆ.ಇಲ್ಲಿನ ಸಿದ್ದಲಿಂಗೇಶ್ವರ ಕಾಲೋನಿಯ ಬ್ರೀಜ್ ಬಳಿಯ ರಸ್ತೆಯ ಪರಸ್ಥಿತಿ ತುಂಬಾ ಹದಗೆಟ್ಟಿದ್ದು ಹೀಗಾಗಿ ಈ ಒಂದು ಸಮಸ್ಯೆ ಗಮನಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಇದನ್ನು ಗಮನಕ್ಕೆ ತಗೆದುಕೊಂಡು ಬರುತ್ತಿದ್ದಂತೆ ಕೂಡಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿಯವರ ಗಮನಕ್ಕೆ ತಗೆದುಕೊಂಡು ಬಂದಿದ್ದಾರೆ
ಪೊನ್ ನಲ್ಲಿ ಮಾತನಾಡಿದ ಅವರು ಈ ಒಂದು ಸಮಸ್ಯೆಯನ್ನು ಆಯುಕ್ತರ ಗಮನಕ್ಕೆ ತಗೆದು ಕೊಂಡು ಬಂದಿದ್ದು ಆಯುಕ್ತರು ಕೂಡಾ ರಾಜು ನಾಯಕವಾಡಿಯವರಿಗೆ ಸ್ಪಂದಿಸಿ ಕೂಡಲೇ ತಾತ್ಕಾಲಿಕವಾಗಿ ರಸ್ತೆಯನ್ನು ದುರಸ್ತಿ ಮಾಡು ವಂತೆ ಸೂಚನೆಯನ್ನು ನೀಡಿದ್ದಾರೆ.ಇತ್ತ ಪಾಲಿಕೆಯ ಆಯುಕ್ತರಿಗೆ ಸ್ಪಂದನೆ ಮಾಡಿದ್ದಕ್ಕೆ ಧನ್ಯವಾದಗಳನ್ನು ಹೇಳಿದ್ದು ಕೂಡಲೇ ಕೆಲಸವನ್ನು ಆರಂಭ ಮಾಡುವಂತೆ ಒತ್ತಾಯ ವನ್ನು ಮಾಡಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……