This is the title of the web page
This is the title of the web page

Live Stream

[ytplayer id=’1198′]

December 2024
T F S S M T W
 1234
567891011
12131415161718
19202122232425
262728293031  

| Latest Version 8.0.1 |

State News

DHO ಡಾ ಪ್ರಭುಲಿಂಗ ಮಾನಕರ್ ಅಮಾನತು – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಅಮಾನತು ಮಾಡಿದ ಇಲಾಖೆಯ ಆಡಳಿತಾಧಿಕಾರಿ ತನಿಖೆಗೆ ಆದೇಶ…..

DHO ಡಾ ಪ್ರಭುಲಿಂಗ ಮಾನಕರ್ ಅಮಾನತು – ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಅಮಾನತು ಮಾಡಿದ ಇಲಾಖೆಯ ಆಡಳಿತಾಧಿಕಾರಿ ತನಿಖೆಗೆ ಆದೇಶ…..
WhatsApp Group Join Now
Telegram Group Join Now

ಯಾದಗಿರಿ

DHO ಡಾ ಪ್ರಭುಲಿಂಗ ಮಾನಕರ್ ಅಮಾನತು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯನ್ನು ಅಮಾನತು ಮಾಡಿದ ಇಲಾಖೆಯ ಆಡಳಿತಾಧಿಕಾರಿ ತನಿಖೆಗೆ ಆದೇಶ

ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿರುವ ಹಿನ್ನಲೆಯಲ್ಲಿ ಯಾದಗಿರಿ ಡಿಎಚ್‌ಒ ರನ್ನು ಅಮಾನತು ಮಾಡಲಾಗಿದೆ.ಹೌದು ಅಧಿಕ ಆಸ್ತಿ ಹೊಂದಿರುವ ಆರೋಪದಡಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಡಳಿತಾಧಿ ಕಾರಿ ಅಮಾನತು ಮಾಡಿ ಆದೇಶಿಸಿದ್ದಾರೆ.

ಪ್ರಭುಲಿಂಗ ಅವರು ₹1.40 ಕೋಟಿ ಮೌಲ್ಯದ ಅಕ್ರಮ ಆಸ್ತಿ ಹೊಂದಿರುವುದನ್ನು ಲೋಕಾ ಯುಕ್ತ ಅಧಿಕಾರಿಗಳಿಂದ ಪತ್ತೆಯಾಗಿದೆ.ಹೀಗಾಗಿ ನಿಷ್ಪಕ್ಷಪಾತ ತನಿಖೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಅಳಂದ ಸಾರ್ವಜನಿಕ ಆಸ್ಪತ್ರೆಗೆ ವರ್ಗಾವಣೆ ಮಾಡಲಾಗಿದೆ.

2023ರ ಡಿಸೆಂಬರ್‌ 5ರಂದು ಡಾ.ಪ್ರಭುಲಿಂಗ ಅವರ ಯಾದಗಿರಿ ಬಾಡಿಗೆ ಮನೆ ಮೇಲೆ, ಕಚೇರಿ, ಕಲಬುರಗಿಯಲ್ಲಿ ಲೋಕಾಯುಕ್ತ ಪೊಲೀಸರು ಶೋಧ ಮಾಡಿದ್ದರು ಈ ಒಂದು ಸಮಯದಲ್ಲಿ ಅಪಾರ ಪ್ರಮಾಣದಲ್ಲಿ ಆಸ್ತಿ ಪಾಸ್ತಿ ಸೇರಿದಂತೆ ಹಲವು ಮಹತ್ವದ ದಾಖಲೆಗಳು ಅಕ್ರಮ ಆಸ್ತಿ ಸಂಪಾದನೆ ವಿಚಾರ ಕುರಿತಂತೆ ಕಂಡು ಬಂದಿ ದ್ದವು

ಸಧ್ಯ ಇವೆಲ್ಲದರ ನಡುವೆ ಲೋಕಾಯುಕ್ತ ಅಧಿಕಾರಿಗಳ ವರದಿ ಹಿನ್ನಲೆಯಲ್ಲಿ ಇಲಾಖೆಯ ಆಡಳಿತಾಧಿಕಾರಿಗಳು ಅಮಾನತು ಆದೇಶವನ್ನು ಮಾಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಯಾದಗಿರಿ…..


Google News

 

 

WhatsApp Group Join Now
Telegram Group Join Now
Suddi Sante Desk