ಬೆಂಗಳೂರು –
ಎಲ್ಲಾ ಇಲಾಖೆಗಳ ಎಲ್ಲ ನಿಯಮಗಳಲ್ಲಿ ಸೇವಾನಿರತ ನೌಕರರ ಪರಿಶ್ರಮ, ಅನುಭವ, ಜ್ಞಾನ ಹಾಗೂ ಸೇವಾಹಿರಿತನಕ್ಕೆ ಉತ್ಕೃಷ್ಠ ಗೌರವವನ್ನು ನೀಡಿ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುತ್ತದೆ.ಆದರೆ ನಮ್ಮಲ್ಲಿ ಮಾತ್ರ ವಿಚಿತ್ರ ಅಲ್ಲವೇ 1-8 ಕ್ಕೆ ನೇಮಕಗೊಂಡು 25-30 ವರ್ಷ ಗಳಿಂದ ಬೋಧಿಸುತ್ತಿದ್ದ ಹಾಗೂ B.A/B.Sc/ B.Ed/M.A/M.Sc/M.Ed/Ph.D ನಂತಹ ಗರಿಷ್ಠ ವಿದ್ಯಾರ್ಹತೆ ಹೊಂದಿದ್ದರೂ
PST ಎಂಬ ಹಣೆಪಟ್ಟಿ ಕಟ್ಟಿ, ಅನರ್ಹರು ಎಂದು ಅವಮಾನಿಸಿ 1-5 ಕ್ಕೆ ಹಿಂಬಡ್ತಿ ನೀಡಿ, ನಮ್ಮೆಲ್ಲ ಹಕ್ಕುಗಳನ್ನು ಕಸಿದುಕೊಂಡು ನಮ್ಮ ಮನೋ ಬಲವನ್ನು ಕುಗ್ಗಿಸಿದ್ದು ಮಾತ್ರ ಇತಿಹಾಸದಲ್ಲಿ ದಾಖಲಾದ ಕರಾಳ ಅಧ್ಯಾಯವಲ್ಲವೇ
ನ್ಯಾಯಯುತವಾಗಿ ದೊರಕಬೇಕಾದ ನಮ್ಮ ಹಕ್ಕುಗಳನ್ನು, ಸೌಲಭ್ಯಗಳನ್ನು ಯಾರಿಂದಲೂ ಕಸಿದುಕೊಳ್ಳಲು ಸಾದ್ಯವಿಲ್ಲ ಅದನ್ನು ಪಡೆದೇ ಪಡೆಯುತ್ತೇವೆ ಎಂಬ ಚಲದೊಂದಿಗೆ ಹೋರಾ ಟದಲ್ಲಿ ನಾವೆಲ್ಲರೂ ಒಂದಾಗಿ ಹೆಜ್ಜೆ ಇಡೋಣ ಜಯ ನಿಶ್ಚಿತ.
ಬನ್ನಿ ಎಲ್ಲರೂ ಎಲ್ಲಾ ಹಂತದ ಹೋರಾಟದಲ್ಲಿ ಪಾಲ್ಗೊಂಡು ಒಕ್ಕೊರಲಿನಿಂದ ನ್ಯಾಯ ಕೇಳೊಣ 12 ನೇ ತಾರೀಖಿನ ಹೋರಾಟ ಲಕ್ಷಾಂತರ ಶಿಕ್ಷಕರ ಸ್ವಾಭಿಮಾನದ ಹೋರಾಟ ನ್ಯಾಯ ಅನ್ಯಾಯ ಗಳ ನಡುವಿನ ಮಹಾ ಸಮರ ಅದು ಮಾಡು ಇಲ್ಲವೇ ಮಡಿ ಎಂಬ ಹೋರಾಟದಂತಿರಲಿ.. ನಮ್ಮ ಬೇಡಿಕೆ ಈಡೇರುವವರೆಗೂ ಯಾವುದೇ ಕಾರಣಕ್ಕೂ ಜಗ್ಗದಿರೋಣ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..