ಬೆಂಗಳೂರು –
ಬೆಂಗಳೂರು ಚಲೋ ಕುರಿತಂತೆ ರಾಜ್ಯದ ಶಿಕ್ಷಕರಿಗೆ KSPSTA ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿಯವರಿಂದ ಮಹತ್ವದ ಸಂದೇಶ – ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ನುಗ್ಗಲಿಯವರು ಮಾತನಾಡಿ ಹೇಳಿದ್ದೇನು ಗೊತ್ತಾ…..
ರಾಜ್ಯದ ಪದವೀಧರ ಶಿಕ್ಷಕರಿಗೆ ಆಗುತ್ತಿರುವ ಅನ್ಯಾಯ ಕುರಿತಂತೆ ಬೆಂಗಳೂರು ಚಲೋ ಹೋರಾಟಕ್ಕೆ ಕರೆಯನ್ನು ನೀಡಲಾಗಿದೆ.ಈ ಒಂದು ಚಳುವಳಿಯಲ್ಲಿ ಪಾಲ್ಗೊಳ್ಳಲು ಈಗಾ ಗಲೇ ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಬೆಂಗಳೂರಿನತ್ತ ಮುಖ ಮಾಡಿದ್ದು ಪ್ರಯಾಣ ವನ್ನು ಬೆಳೆಸಿದ್ದಾರೆ.
ಇನ್ನೂ ಈ ಒಂದು ಹೋರಾಟದಲ್ಲಿ ಪಾಲ್ಗೊಳ್ಳ ದಂತೆ ಈಗಾಗಲೇ ಶಿಕ್ಷಣ ಇಲಾಖೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದುಇದೇಲ್ಲದರ ನಡುವೆ ಬೆಂಗಳೂರಿನಲ್ಲಿ ಹೋರಾಟದ ಎಲ್ಲಾ ಸಿದ್ದತೆಗ ಳನ್ನು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮುಖಂಡರು ಪ್ರೀಡಂ ಪಾರ್ಕ್ ಗೆ ತೆರಳಿ ವೀಕ್ಷಣೆಯನ್ನು ಮಾಡಿದರು.
ಹೋರಾಟದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಪಾಲ್ಗೊಳ್ಳಲಿದ್ದು ಹೀಗಾಗಿ ಈ ಒಂದು ಕುರಿತಂತೆ ಎಲ್ಲಾ ವ್ಯವಸ್ಥೆಗ ಳನ್ನು ಸಂಘಟನೆಯ ರಾಜ್ಯಾಧ್ಯಕ್ಷ ಕೆ ನಾಗೇಶ್,ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಸೇರಿದಂತೆ ಮುಖಂಡರು ನಾಯಕರು ಶಿಕ್ಷಕರು ಪರಿಶೀಲನೆ ಮಾಡಿದರು.ಇದೇ ವೇಳೆ ಚಂದ್ರಶೇಖರ ನುಗ್ಗಲಿ ಮಾತನಾಡಿ ಶಾಲೆಗಳನ್ನು ಬಂದ್ ಮಾಡಿಕೊಂಡು ಹೋರಾಟಕ್ಕೆ ಬನ್ನಿ ಯಾವುದೇ ಎಚ್ಚರಿಕೆಗೂ ಬೆದರಿಕೆಗೂ ಬಗ್ಗಬೇಡಿ ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದರು
ಸಂಘಟನೆ ಇದೆ ಮೊದಲು ನಮ್ಮ ಮೇಲೆ ಕ್ರಮ ಆಗುತ್ತದೆ ಎಂದು ಹೋರಾಟದಲ್ಲಿ ಪಾಲ್ಗೊಳ್ಳುವ ಶಿಕ್ಷಕರಿಗೆ ಆತ್ಮವಿಶ್ವಾಸದ ಮಾತುಗಳನ್ನು ಹೇಳಿ ದರು.ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಪ್ರೀಡಂ ಪಾರ್ಕ್ ನಲ್ಲಿ ಉಪಸ್ಥಿತರಿರುವಂತೆ ಕರೆ ನೀಡಿದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..